ಬೆಂಗಳೂರು, (ಜೂನ್.20): ಪರಿಷತ್‌ ನಾಮ ನಿರ್ದೇಶನಕ್ಕೆ ತಮ್ಮನ್ನು ಆಯ್ಕೆ ಮಾಡಬೇಕೆಂದು ಸ್ಯಾಂಡಲ್‌ವುಡ್ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಲಾಬಿ ನಡೆಸಿದ್ದಾರೆ.

ಇದಕ್ಕೆ ಪೂರಕವೆಂಬಂತೆ ನಟಿ ರಾಗಿಣಿ ದ್ವಿವೇದಿ, ಇಂದು (ಶನಿವಾರ) ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಭೇಟಿ ಮಾಡಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆ ವೈದ್ಯರಿಗೆ ಚಪಾತಿ, ಸಾಗು ಮಾಡ್ಕೊಟ್ರು ರಾಗಿಣಿ

ಸಾಲದಕ್ಕೆ ಕಾವೇರಿ ನಿವಾಸಕ್ಕೆ ಭೇಟಿ ನೀಡಿ ಮುಖ್ಯಮಂತ್ರಿ ಬಿಸ್ ಯಡಿಯೂರಪ್ಪ ಜತೆ ಮಾತುಕತೆ ನಡೆಸಿದ್ದಾರೆ. ನನಗೆ ಸರ್ಕಾರದಲ್ಲಿ ಅಥವಾ ಪಕ್ಷದಲ್ಲಿ ಒಂದು ಸ್ಥಾನಮಾನ ನೀಡಿ ಎಂದು ಮನವಿ ಮಾಡಿದ್ದಾರೆ.

ಉಪಚುನಾವಣೆ ಮತ್ತು ಕೊರೋನಾ ಲಾಕ್‌ಡೌನ್‌ ವೇಳೆ ಸಾಕಷ್ಟು ಕೆಲಸ ಮಾಡಿದ್ದೇನೆ. ಹೀಗಾಗಿ ನನ್ನನ್ನು ಪರಿಗಣಿಸಿ ಒಂದು ಸ್ಥಾನಮಾನ ಕೊಡಿ ಎಂದು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.

ಕೊರೋನಾ ಬದುಕಿನ ಸಂಕಷ್ಟಗಳನ್ನು ದರ್ಶನ ಮಾಡಿಸಿತು: ರಾಗಿಣಿ

ಇದೇ ಜೂನ್‌ 23ಕ್ಕೆ ನಾಮ ನಿರ್ದೇಶನ ಸದಸ್ಯರಾದ ಕೆ. ಅಬ್ದುಲ್‌ ಜಬ್ಬಾರ್, ಡಾ. ಜಯಮಾಲ ರಾಮಚಂದ್ರ, ಐವಾನ್‌ ಡಿಸೋಜ, ಇಕ್ಬಾಲ್‌ ಅಹ್ಮದ್‌ ಸರಡಗಿ, ತಿಪ್ಪಣ್ಣ ಕಮಕನೂರ ಅವರು ನಿವೃತ್ತಿಯಾಗಲಿದ್ದಾರೆ. ಇದರಿಂದ ರಾಗಿಣಿ ದ್ವಿವೇದಿ ಕಣ್ಣು ನಾಮ ನಿರ್ದೇಶನದ ಮೇಲೆ ಬಿದ್ದಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಮಾದಕ ವಿರೋಧಿ ಅಭಿಯಾನದ ರಾಯಭಾರಿಯಾಗಿರುವ ತುಪ್ಪದ ಬೆಡಗಿ ಕೊರೋನಾ ಲಾಕ್‌ಡೌನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಬಹಳಷ್ಟು ಸಹಾಯ ಮಾಡಿದ್ದಾರೆ. ಅಲ್ಲದೇ ಕೊರೋನಾ ವಾರಿಯರ್ಸ್‌ಗೂ ಮನೆಯಿಂದ ಸ್ಪೆಷಲ್ ಊಟ ತಯಾರು ಮಾಡಿ ಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.