ಅಂಬಿ ಪುತ್ರ ರಾಜಕಾರಣಕ್ಕೆ ಬರ್ತಾರಾ?: ಅಭಿಷೇಕ್ ಅಂಬರೀಷ್ ಹೇಳಿದ್ದಿಷ್ಟು

ನಾನು ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಬರಲ್ಲ. ತಾಯಿಯವರು ತಾವು ಇರೋವರೆಗೆ ರಾಜಕೀಯಕ್ಕೆ ಬರಲ್ಲಾ ಅಂತಾ ಹೇಳಿದ್ದಾರೆ. ಸಿನಿಮಾ ರಂಗ ಬೇರೆ, ರಾಜಕಾರಣ ಬೇರೆ. ಸಿನಿಮಾ ಅಂದ್ರೆ ದುಡ್ಡು ಕೊಟ್ಟು ಬರ್ತಾರೆ, ರಾಜಕಾರಣಕ್ಕೆ ನಾವೇ ದುಡ್ಡು ಕೊಟ್ಟು ಜನರನ್ನ ಕರಿಬೇಕು. ಹೀಗಾಗಿ ಚಿತ್ರರಂಗ ಮತ್ತು ಸಿನಿಮಾ ಏಕಕಾಲಕ್ಕೆ ನಡೆಯಲ್ಲ: ಅಭಿಷೇಕ್ ಅಂಬರೀಷ್ 

Sandalwood Actor Abishek Ambareesh Talks Over His Politics Career grg

ಹುಬ್ಬಳ್ಳಿ(ನ.21):  ಇದೇ ಶುಕ್ರವಾರ ಬ್ಯಾಡ್ ಮ್ಯಾನರ್ಸ್ ಬಿಡುಗಡೆಯಾಗಲಿದೆ. ಉತ್ತರ ಕರ್ನಾಟಕದ ಜನ ಕಲಾವಿದರಿಗೆ ಬಹಳ ಗೌರವ ಕೊಡ್ತಾರೆ. ಈ ಭಾಗದ ಜನರ ಆಶೀರ್ವಾದ ತಗೆದುಕೊಳ್ಳಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ನಾಯಕ ನಟ ಅಭಿಷೇಕ್ ಅಂಬರೀಷ್ ಹೇಳಿದ್ದಾರೆ.

ಇಂದು(ಮಂಗಳವಾರ) ನಗರದಲ್ಲಿ ಬ್ಯಾಡ್ ಮ್ಯಾನರ್ಸ್ ಚಿತ್ರತಂಡ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಭಿಷೇಕ್ ಅಂಬರೀಷ್, ಇಡೀ ಸಿನಿಮಾ ಕರ್ನಾಟಕದಲ್ಲಿ ಶೂಟಿಂಗ್ ಆಗಿದೆ. ಸಿನಿಮಾದಲ್ಲಿ ಉತ್ತರ ಕರ್ನಾಟಕದ ಕಲಾವಿದರು ಇದಾರೆ. ಸೂರಿ ಅವರ ಜೊತೆ ಸಿನಿಮಾ ಮಾಡಿರೋದು ಬಹಳ ಖುಷಿ ಇದೆ. ಸಿನಿಮಾ ಟ್ರೇಲರ್ ನೋಡಿದ ಮೇಲೆ ಕೆಲವರು ಅಭಿಯಲ್ಲಿ ಅಂಬರೀಷ್ ಅವರನ್ನ ಕಾಣ್ತಿದೀವಿ ಅಂತಿದ್ದಾರೆ. ಅಂಬರೀಷ್ ಅವರ ಜೊತೆಗಿನ ಹೋಲಿಕೆ ತುಂಬಾ ಖುಷಿ ಕೊಟ್ಟಿದೆ ಎಂದು ತಿಳಿಸಿದ್ದಾರೆ. 

ಸುಕ್ಕಾ ಸೂರಿ ಅಡ್ಡಾದಲ್ಲಿ ಜ್ಯೂ.ರೆಬೆಲ್ ಸ್ಟಾರ್ ಅಬ್ಬರ: ಬ್ಯಾಡ್ ಮ್ಯಾನರ್ಸ್ ಗುಡ್ ಮ್ಯಾಟರ್!

ನಾನು ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಬರಲ್ಲ

ನಾನು ಯಾವುದೇ ಕಾರಣಕ್ಕೂ ರಾಜಕಾರಣಕ್ಕೆ ಬರಲ್ಲ. ತಾಯಿಯವರು ತಾವು ಇರೋವರೆಗೆ ರಾಜಕೀಯಕ್ಕೆ ಬರಲ್ಲಾ ಅಂತಾ ಹೇಳಿದ್ದಾರೆ. ಸಿನಿಮಾ ರಂಗ ಬೇರೆ, ರಾಜಕಾರಣ ಬೇರೆ. ಸಿನಿಮಾ ಅಂದ್ರೆ ದುಡ್ಡು ಕೊಟ್ಟು ಬರ್ತಾರೆ, ರಾಜಕಾರಣಕ್ಕೆ ನಾವೇ ದುಡ್ಡು ಕೊಟ್ಟು ಜನರನ್ನ ಕರಿಬೇಕು. ಹೀಗಾಗಿ ಚಿತ್ರರಂಗ ಮತ್ತು ಸಿನಿಮಾ ಏಕಕಾಲಕ್ಕೆ ನಡೆಯಲ್ಲ ಅಂತ ತಿಳಿಸಿದ್ದಾರೆ. 

ಅಂಬರೀಷಣ್ಣ 34 ವರ್ಷ ಚಿತ್ರರಂಗದಲ್ಲಿದ್ದು ನಂತರ ರಾಜಕೀಯಕ್ಕೆ ಬಂದ್ರು ಆಡಳಿತದಲ್ಲಿ ಮಕ್ಕಳ ಹಸ್ತಕ್ಷೇಪ ಸರಿಯಲ್ಲ. ನಾನು ಉದ್ಘಾಟನೆ, ಆಡಳಿತ, ರಾಜಕೀಯದಲ್ಲಿ ಭಾಗವಹಿಸಲ್ಲ. ಸೇವಾ ಕೆಲಸ ಇದ್ರೆ ಮಾತ್ರ ಭಾಗವಹಿಸುತ್ತೇನೆ ಅಂತ ಸ್ಪಷ್ಟಪಡಿಸಿದ್ದಾರೆ. 

ಕನ್ನಡ ಚಿತ್ರಗಳಿಗೆ ಥಿಯೇಟರ್ ಸಮಸ್ಯೆ ಆಗಬಾರದು. ಕನ್ನಡ ಚಿತ್ರಗಳು ಬರುವಾಗ ಇತರ ಚಿತ್ರಗಳ ಬಿಡುಗಡೆ ಮುಂದೂಡಬೇಕು. ರಾಜ್ಯದಲ್ಲಿ ಆ ರೀತಿ ವಾತಾವರಣ ಸೃಷ್ಟಿಯಾಗಬೇಕು, ಹಿರಿಯರಿದ್ದಾರೆ ಮಾಡ್ತಾರೆ ಅನ್ನೋ ವಿಶ್ವಾಸವಿದೆ ಎಂದು ಹೇಳಿದ್ದಾರೆ. 

Latest Videos
Follow Us:
Download App:
  • android
  • ios