ಬಾಲಿವುಡ್ ನಟಿ ಜಯಾ ಬಚ್ಚನ್, ರಾಜಕಾರಣಿಗಳು ನಟರಷ್ಟು ಜನಪ್ರಿಯರಾಗಲು ಸಾಧ್ಯವಿಲ್ಲ ಎಂದಿದ್ದಾರೆ. ಪ್ರಧಾನಿ ಮೋದಿ ಮಾತ್ರ ಇದಕ್ಕೆ ಅಪವಾದವೆಂದು ಹೇಳಿಕೆ ನೀಡಿದ್ದಾರೆ. ರಾಜಕಾರಣಿಗಳು ಜನರ ಬಳಿ ಹೋಗಬೇಕು, ಆದರೆ ನಟರ ಬಳಿ ಜನರೇ ಬರುತ್ತಾರೆ ಎಂದಿದ್ದಾರೆ. ಈ ಹೇಳಿಕೆಗೆ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದು, ಸಮಾಜವಾದಿ ಪಕ್ಷದ ನಾಯಕಿಯಾಗಿ ಮೋದಿಯನ್ನು ಹೊಗಳಿದ್ದಕ್ಕೆ ಟೀಕೆಗಳು ವ್ಯಕ್ತವಾಗಿವೆ.
ಬಾಲಿವುಡ್ ನಟಿ ಹಾಗೂ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್, ಚಿತ್ರನಟರು ಮತ್ತು ರಾಜಕೀಯ ವ್ಯಕ್ತಿಗಳ ನಡುವೆ ಹೋಲಿಕೆ ಮಾಡುವ ಮೂಲಕ, ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಜಯಾ ಅವರು, 2004 ರಿಂದ ಸಂಸತ್ ಸದಸ್ಯರಾಗಿದ್ದಾರೆ ಮತ್ತು ಇದೇ ವೇಳೆ ಚಲನಚಿತ್ರಗಳಲ್ಲಿಯೂ ಸಕ್ರಿಯರಾಗಿದ್ದಾರೆ. ಇಂಡಿಯಾ ಟಿವಿ ಜೊತೆಗಿನ ಸಂದರ್ಶನದಲ್ಲಿ ಜಯಾ ಅವರು ನಟರು ಮತ್ತು ರಾಜಕಾರಣಿಗಳ ಜನಪ್ರಿಯತೆಯ ಹೋಲಿಕೆ ಮಾಡುತ್ತಲೇ ಪ್ರಧಾನಿ ನರೇಂದ್ರ ಮೋದಿ ಅವರ ಉದಾಹರಣೆಯನ್ನೂ ನೀಡಿದ್ದಾರೆ. ಸಮಾಜವಾದಿ ಪಕ್ಷದ ನಾಯಕಿಯೊಬ್ಬರಿಂದ ಈ ರೀತಿಯ ಮಾತು ನಿರೀಕ್ಷೆ ಮಾಡದ ಕಾರಣ, ಇದನ್ನು ಹಲವರು ಟೀಕಿಸುತ್ತಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಚಿತ್ರನಟರು ರಾಜಕೀಯ ಪಕ್ಷವನ್ನು ಸೇರುವುದು ಹೆಚ್ಚುತ್ತಿದ್ದಾರೆ. ಈ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಯಾ ಬಚ್ಚನ್ ಅವರು, ನನಗೆ ಹೀಗೆ ಹೇಳಲು ಸ್ವಲ್ಪ ಮುಜುಗರವೇ ಆಗುತ್ತದೆ, ಇದನ್ನು ಯಾರೂ ತಪ್ಪು ತಿಳಿಯಬಾರದು, ಆದರೆ ಸತ್ಯವನ್ನೇ ಹೇಳುತ್ತಿದ್ದೇನೆ ಎನ್ನುತ್ತಲೇ, ರಾಜಕಾರಣಿಗಳು ನಟರಷ್ಟು ಜನಪ್ರಿಯರಾಗಲು ಎಂದಿಗೂ ಸಾಧ್ಯವಿಲ್ಲ ಎಂದಿದ್ದಾರೆ. ಇದಕ್ಕೆ ಉದಾಹರಣೆಯನ್ನೂ ಕೊಟ್ಟಿರುವ ಅವರು, ರಾಜಕಾರಣಿಗಳು ಎಷ್ಟೇ ದೊಡ್ಡವರಾದರೂ ಅವರೇ ಜನರ ಬಳಿಗೆ ಹೋಗಬೇಕು, ಜನರ ಬಳಿಗೆ ಅವರು ಹೋದಾಗ ಅಥವಾ ಅವರು ಜನರನ್ನು ಕರೆದಾಗ ಮಾತ್ರ ಜನರು ಅವರ ಬಳಿ ಬರುತ್ತಾರೆ, ಆದರೆ ನಟರು ಹಾಗಲ್ಲ. ಅವರು ದೊಡ್ಡ ನಟರೇ ಇರಲಿ, ಚಿಕ್ಕಪುಟ್ಟ ನಟರೇ ಇರಲಿ. ಒಬ್ಬ ನಟ ಬಂದಿದ್ದಾರೆ ಎಂದು ಗೊತ್ತಾದರೆ ಸಾಕು, ಜನರೇ ಅವರ ಬಳಿಗೆ ಬರುತ್ತಾರೆ ಎಂದಿದ್ದಾರೆ.
ಮೋದಿ ಬೆಸ್ಟೋ, ಅಂಬಾನಿನೊ? ಏಕಾಏಕಿ ಎದುರಾದ ಪ್ರಶ್ನೆಗೆ ನೀತಾ ಅಂಬಾನಿ ಹೇಳಿದ್ದು ಕೇಳಿ ಎಲ್ಲರೂ ಶಾಕ್!
ಈ ಮೂಲಕ ರಾಜಕಾರಣಿಗಳು ಮತ್ತು ಚಿತ್ರನಟರ ಬಗ್ಗೆ ಹೋಲಿಕೆ ಮಾಡಿದ್ದಾರೆ ಖುದ್ದು ರಾಜಕೀಯ ವ್ಯಕ್ತಿಯಾಗಿರುವ ಜಯಾ ಬಚ್ಚನ್. ಜನರು ಆ ನಟನನ್ನು ಪ್ರೀತಿಸುತ್ತಾರೋ, ಇಲ್ಲವೋ ಗೊತ್ತಿಲ್ಲ. ಆದರೂ ನಟರು ಬಂದಿದ್ದಾರೆ ಎಂದರೆ ಹುಡುಕಿ ಬರುತ್ತಾರೆ, ಆದರೆ ರಾಜಕಾರಣಿಗಳು ಎಂದಿಗೂ ನಟರಷ್ಟು ಫೇಮಸ್ ಆಗಲು ಸಾಧ್ಯವಿಲ್ಲ ಎಂದಿದ್ದಾರೆ. ಆದರೆ ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರನ್ನು ಉಲ್ಲೇಖಿಸುವ ಮೂಲಕ ಕೆಲವರ ಕೆಂಗಣ್ಣಿಗೂ ಗುರಿಯಾಗಿದ್ದಾರೆ ನಟಿ.
ಅಷ್ಟಕ್ಕೂ ಜಯಾ ಬಚ್ಚನ್ ಹೇಳಿದ್ದೇನೆಂದರೆ, ರಾಜಕಾರಣಿಗಳು ಜನರ ಬಳಿಗೆ ಹೋಗಬೇಕು, ಇಲ್ಲದಿದ್ದರೆ ಅವರ ಬಳಿ ಯಾರೂ ಬರುವುದಿಲ್ಲ ಎನ್ನುವ ಮಾತಿಗೆ ಒಬ್ಬರೇ ಒಬ್ಬರು ಅಪವಾದ. ಅವರೆಂದರೆ ಪ್ರಧಾನಿ ನರೇಂದ್ರ ಮೋದಿ. ಅವರು ಜನಪ್ರಿಯ ರಾಜಕಾರಣಿ. ಅವರಿಗೂ ಚಿತ್ರನಟರಂತೆಯೇ ಪಾಪ್ಯುಲ್ಯಾರಿಟಿ ಇದೆ. ನೀವು ನರೇಂದ್ರ ಮೋದಿಯಾದರೆ ಮಾತ್ರ ಜನರು ನಿಮ್ಮ ಬಳಿ ಬರುತ್ತಾರೆ, ಅದನ್ನು ಬಿಟ್ಟು ಬೇರೆ ಯಾರೂ ನಿಮ್ಮನ್ನು ಹುಡುಕಿ ಬರಲು ಸಾಧ್ಯವೇ ಇಲ್ಲ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಮಾತ್ರ ಜನಪ್ರಿಯ ರಾಜಕಾರಣಿ ಎಂದು ಬಣ್ಣಿಸಿದ್ದಾರೆ. ಇದರ ಬಗ್ಗೆ ವಿಪಕ್ಷಗಳು ಕೆಂಗಣ್ಣು ಬೀರಿವೆ. ಇದಕ್ಕೆ ಪರ-ವಿರೋಧದ ನಿಲುವು ವ್ಯಕ್ತವಾಗುತ್ತಿದೆ. ಅದು ಸಮಾಜವಾದಿ ಪಕ್ಷದ ನಾಯಕಿಯಾಗಿ ಬಿಜೆಪಿಯನ್ನು ಹೊಗಳುವುದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಮೋದಿಯವರನ್ನು ಹೊಗಳಿರುವ ಜಯಾ ಅವರ ನಿಲುವಿಗೆ ವಿಭಿನ್ನ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಎಲ್ಲರ ಹಾಗೆ ನಾನೂ ಹೆಂಡ್ತಿಗೆ ಭಯ ಪಡ್ತೇನೆ ಎಂದ ಅಮಿತಾಭ್, ಮಿಡ್ನೈಟ್ ಗುಟ್ಟು ಹೇಳಿಯೇ ಬಿಟ್ರು!
