Asianet Suvarna News Asianet Suvarna News

ಸರ್ಕಾರಿ ನೌಕರರ ವೇತನ ಶೇ. 27.5% ಏರಿಕೆ ಸಾಧ್ಯತೆ?: ಸಿಎಂ ಸಿದ್ದರಾಮಯ್ಯಗೆ ವರದಿ ಸಲ್ಲಿಕೆ

ರಾಜ್ಯದ ಸರ್ಕಾರಿ ನೌಕರರ ಬಹುನಿರೀಕ್ಷಿತ ಏಳನೇ ವೇತನ ಆಯೋಗದ ಅಂತಿಮ ವರದಿ ಶನಿವಾರ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಮೂಲವೇತನದ ಮೇಲೆ ಶೇ.27.5ರಷ್ಟು ಹೆಚ್ಚಿಸ ಬೇಕು, ಕನಿಷ್ಠ ವೇತನ ವನ್ನು 17 ಸಾವಿರ ರು. ಗಳಿಂದ 27000 ರು.ಗಳಿಗೆ ಹೆಚ್ಚಿಸಬೇಕು ಎಂಬುದೂ ಸೇರಿ ಹಲವು ಶಿಫಾರಸು ಮಾಡಲಾಗಿದೆ. 
 

Salary percentage of government employees 27 5 percent Scalability Submission of report to CM Siddaramaiah gvd
Author
First Published Mar 17, 2024, 9:05 AM IST

ಬೆಂಗಳೂರು (ಮಾ.17): ರಾಜ್ಯದ ಸರ್ಕಾರಿ ನೌಕರರ ಬಹುನಿರೀಕ್ಷಿತ ಏಳನೇ ವೇತನ ಆಯೋಗದ ಅಂತಿಮ ವರದಿ ಶನಿವಾರ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಮೂಲವೇತನದ ಮೇಲೆ ಶೇ.27.5ರಷ್ಟು ಹೆಚ್ಚಿಸ ಬೇಕು, ಕನಿಷ್ಠ ವೇತನ ವನ್ನು 17 ಸಾವಿರ ರು. ಗಳಿಂದ 27000 ರು.ಗಳಿಗೆ ಹೆಚ್ಚಿಸಬೇಕು ಎಂಬುದೂ ಸೇರಿ ಹಲವು ಶಿಫಾರಸು ಮಾಡಲಾಗಿದೆ. ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರರಾವ್‌ ನೇತೃತ್ವದ ಆಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ಸಲ್ಲಿಸಿತು. ವರದಿ ಬಗ್ಗೆ ಸಮಗ್ರ ಪರಿಶೀಲನೆ ಮಾಡಿ, ಆರ್ಥಿಕ ಇಲಾಖೆ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳಲಾ ಗುವುದೆಂದು ಸಿಎಂ ತಿಳಿಸಿದರು. 

ವಾರಕ್ಕೆ 5 ದಿನ ಮಾತ್ರ ಕೆಲಸ?: ರಾಜ್ಯದಲ್ಲಿ ಸರ್ಕಾರಿ ನೌಕರರ ಕೆಲಸದ ಗುಣಮಟ್ಟ ಹೆಚ್ಚಿಸಲು ವಾರದಲ್ಲಿ ಐದು ದಿನ ಮಾತ್ರ ಕೆಲಸದ ಅವಧಿ ಇರಿಸಬೇಕು ಎಂದು ವರದಿಯಲ್ಲಿ ಶಿಫಾ ರಸು ಮಾಡಲಾಗಿದೆ. ಹಾಗೇ, ಗರಿಷ್ಠ ವೇತನವನ್ನು 1,04,600ರು.ಗಳಿಂದ 2,41,200 ರು.ಗೆ ಹೆಚ್ಚಿಸಬೇಕು. ಹೊಸ ವೇತನ ಶ್ರೇಣಿಯನ್ನು 2022ರ ಜುಲೈ ನಿಂದಲೇ ಪೂರ್ವಾ ನ್ವಯ ಮಾಡಬೇಕು ಎಂದೂ ಶಿಫಾರಸು ಮಾಡಲಾಗಿದೆ.

ಭೀಕರ ಬರ ಎದುರಿಸಲು ಸಜ್ಜಾಗಿ, ನೀರನ್ನು ಪೋಲು ಮಾಡಬೇಡಿ: ಸಚಿವ ಮಧು ಬಂಗಾರಪ್ಪ ಮನವಿ

ಸರ್ಕಾರಿ ನೌಕರರ ವೇತನ 27.5%ಹೆಚ್ಚಳ: ರಾಜ್ಯ ಸರ್ಕಾರಿ ನೌಕರರ ಬಹುನಿರೀಕ್ಷಿತ ಏಳನೇ ವೇತನ ಆಯೋಗದ ಅಂತಿಮ ವರದಿ ಶನಿವಾರ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಮೂಲವೇತನದ ಮೇಲೆ ಶೇ.27.5ರಷ್ಟು ಹೆಚ್ಚಿಸಬೇಕು, ಕನಿಷ್ಠ ವೇತನವನ್ನು 17 ಸಾವಿರ ರು.ಗಳಿಂದ 27000 ರು.ಗಳಿಗೆ ಹೆಚ್ಚಿಸುವುದು ಸೇರಿದಂತೆ ಹಲವು ಶಿಫಾರಸುಗಳನ್ನು ಮಾಡಲಾಗಿದೆ. ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಸುಧಾಕರರಾವ್ ನೇತೃತ್ವದ ಆಯೋಗ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿತು. 

ವರದಿ ಸ್ವೀಕರಿಸಿ ಮಾತನಾಡಿದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು, ವರದಿಯಲ್ಲಿ ಪ್ರಮುಖವಾಗಿ ಮೂಲ ವೇತನದ ಮೇಲೆ ಶೇ. 27.5ರಷ್ಟು ಹೆಚ್ಚಳ ಮಾಡಬೇಕು, ಕನಿಷ್ಠ ವೇತನವನ್ನು 17 ಸಾವಿರ ರುಗಳಿಂದ 27 ಸಾವಿರ ರು.ಗಳಿಗೆ ಹೆಚ್ಚಿಸುವಂತೆ ಶಿಫಾರಸು ಮಾಡಲಾಗಿದೆ. ಇದರ ಜೊತೆಗೆ ಹಲವು ಶಿಫಾರಸುಗಳನ್ನು ಮಾಡಲಾಗಿದೆ. ಅವುಗಳನ್ನು ಹೇಳಲು ಆಗುವುದಿಲ್ಲ. ಆಯೋಗದ ವರದಿಯ ಬಗ್ಗೆ ಆರ್ಥಿಕ ಇಲಾಖೆ ಸಮಗ್ರವಾಗಿ ಪರಿಶೀಲನೆ ಮಾಡಬೇಕಾಗುತ್ತದೆ. ವರದಿಯ ಶಿಫಾರಸುಗಳ ಬಗ್ಗೆ ಸಲಹೆ ಪಡೆದ ನಂತರ ಸರ್ಕಾರ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.

ಖರ್ಚಿಗೂ ಹಣವಿಲ್ಲದಂತೆ ಕಾಂಗ್ರೆಸ್‌ ಬ್ಯಾಂಕ್‌ ಖಾತೆ ಸೀಜ್‌ ಮಾಡಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

7ನೇ ವೇತನ ಆಯೋಗದ ಪ್ರಮುಖ ಶಿಫಾರಸುಗಳು
• 1-07.2022ಕ್ಕೆ ಇದ್ದಂತೆ ಮೂಲ ವೇತನಕ್ಕೆ ಶೇ.27.50ರಷ್ಟು ಫಿಟ್ ಮೆಂಟ್ ಹೆಚ್ಚಿಸಬೇಕು.
• 1-07-2022ಕ್ಕೆ ಇದ್ದಂತಹ ಶೇ.31ರಷ್ಟು ತುಟ್ಟಿ ಭತ್ಯೆ ವಿಲೀನ ಹಾಗೂ ಮೇಲಿನ ಶೇ.27.50 ರಷ್ಟು ಸೇರಿಸಿ ಶೇ. 58.50ರಷ್ಟು ಮೂಲವೇತನದಲ್ಲಿ ಹೆಚ್ಚಳ
• ಮೂಲ ವೇತನವನ್ನು ಕನಿಷ್ಠ 17ರಿಂದ 27 ಸಾವಿರ ರು.ಗೆ, ಗರಿಷ್ಠ ಮೂಲ ವೇತನ 1,04,600ರು.ಗಳಿಂದ 2,41,200ಕ್ಕೆ ಹೆಚ್ಚಳ
• ಹೊಸ ವೇತನ ಶ್ರೇಣಿ, ಫಿಟ್‌ಮೆಂಟ್ ಸೌಲಭ್ಯ 1-07-2022ರಿಂದ ಕಾಲ್ಪನಿಕವಾಗಿ ಅನುಷ್ಠಾನಗೊಳಿಸಬೇಕು
• ವಾರ್ಷಿಕ ವೇತನ ಬಡ್ತಿ ದರವನ್ನು ಕನಿಷ್ಠ 400 ರುಗಳಿಂದ 650ಕ್ಕೆ ಹಾಗೂ ಗರಿಷ್ಠ 3100ರು.ಗಳಿಂದ 5 ಸಾವಿರಕ್ಕೆ ಹೆಚ್ಚಳ
• ತುಟ್ಟಿಭತ್ಯೆಯನ್ನು 1-07-2022ರಿಂದ ಕೇಂದ್ರ ಸರ್ಕಾರ ಮಂಜೂರು ಮಾಡಿದ ಪ್ರತಿ ಶೇ.1ರಷ್ಟು ತುಟ್ಟಿ ಭತ್ಯೆಗೆ ಶೇ. 0.722ರಷ್ಟು ನೀಡಬೇಕು 
• ಕೇಂದ್ರ ವೇತನ ರಚನೆ ಆಧಾರದ ಮೇಲೆ ರಾಜ್ಯ ಸರ್ಕಾರ ತನ್ನ ನೌಕರರಿಗೆ ಕೇಂದ್ರದ ಮಾದರಿಯ ವೇತನ ನೀಡಬೇಕು
• ಗ್ರೂಪ್ ಸಿ ಮತ್ತು ಡಿ ವೃಂದದ ನೌಕರರಿಗೆ ಹಾಲಿ ಇರುವ ಜಿಐಎಸ್ ಮಾಸಿಕ ವಂತಿಕೆಯನ್ನು ಶೇ.100ಕ್ಕೆ, ಗ್ರೂಪ್ ಎ ಮತ್ತು ಬಿ ಗ್ರೂಪ್ ವೃಂದಕ್ಕೆ ಶೇ.50ಕ್ಕೆ ಹೆಚ್ಚಳ
• ಪರಿಷ್ಕೃತ ಮೂಲವೇತನಕ್ಕೆ ಮನೆ ಬಾಡಿಗೆ ಭತ್ಯೆ ಎ ವರ್ಗದ ನಗರಕ್ಕೆ ಶೇ.20, ಬಿ ವರ್ಗದ ನಗರಕ್ಕೆ ಶೇ.15, ಸಿ ವರ್ಗದ ನಗರಕ್ಕೆ ಶೇ.7.5 ಹೆಚ್ಚಳ 
• ಪರಿಷ್ಕೃತ ಮೂಲ ವೇತನಕ್ಕೆ ನಗರ ಪರಿಹಾರ ಭತ್ಯೆ ಎ ಮತ್ತು ಬಿ ವೃಂದಕ್ಕೆ 600-900 ರು., ಸಿ ಮತ್ತು ಡಿ ವೃಂದಕ್ಕೆ 500-750 ರು.ಗಳಿಗೆ ಹೆಚ್ಚಳ 
• ಸಮವಸ್ತ್ರಮತ್ತು ನಿಗದಿತ ಪ್ರಯಾಣ ಭತ್ಯೆ, ಸಾಗಣೆ ಭತ್ಯ, ದಿನ ಭತ್ಯೆ ಮತ್ತು ವರ್ಗಾವಣೆ ಅನುದಾನ ಹಾಲಿ ಇರುವ ದರಗಳಿಗೆ ಶೇ.25ರಷ್ಟು ಹೆಚ್ಚಳ 
• ವಿಕಲಚೇತನ ನೌಕರರಿಗೆ ಭತ್ಯೆಗಳು ಮತ್ತು ಸೌಲಭ್ಯಗಳನ್ನು ಹೆಚ್ಚಳ ಮಾಡಬೇಕು.
• ವಿಶೇಷ ಚೇತನರ ಮಕ್ಕಳ ಶೈಕ್ಷಣಿಕ ಭತ್ಯೆ ಪ್ರತಿ ತಿಂಗಳು ಒಂದರಿಂದ ಎರಡು ಸಾವಿರ ರುಗಳಿಗೆ ಹೆಚ್ಚಳ
• ನಾಲ್ಕು ಚಕ್ರ ವಾಹನ ಖರೀದಿಗೆ ಮುಂಗಡ 3ರಿಂದ 6 ಲಕ್ಷಕ್ಕೆ ಹಾಗೂ ದ್ವಿಚಕ್ರ ವಾಹನಕ್ಕೆ 50ರಿಂದ 80 ಸಾ.ರು.ಗಳಿಗೆ ಹೆಚ್ಚಳ
• ಗೃಹ ನಿರ್ಮಾಣ ಮುಂಗಡವನ್ನು ಎ ವೃಂದಕ್ಕೆ 65 ಲಕ್ಷ, ಇತರ ವೃಂದ ನೌಕರರಿಗೆ 40 ಲಕ್ಷ ರು.ಗಳಿಗೆ ಹೆಚ್ಚಳ
• ನೌಕರರ ಸೇವಾವಧಿಯಲ್ಲಿ ಮೂರು ಎಲ್‌ಟಿಸಿ ಸೌಲಭ್ಯಕ್ಕೆ ಅವಕಾಶ ಗ್ರೂಪ್ ಡಿ ಮತ್ತು ಸಿ ವೃಂದದ ನೌಕರರಿಗೆ ವೈದ್ಯಕೀಯ ಭತ್ಯೆ 200 ರು. ಗಳಿಂದ 500 ರುಗಳಿಗೆ ಹೆಚ್ಚಳ
• ಕುಟುಂಬದ ಸದಸ್ಯರಿಗೆ ಅನಾರೋಗ್ಯದ ವೇಳೆ ಆರೈಕೆ ಮಾಡಲು ಶೇ. 50 ವೇತನದೊಂದಿಗೆ 180 ದಿನಗಳ ಆರೈಕೆ ರಜೆ ಎಂಬ ಹೊಸ ಯೋಜನೆ
• ಎರಡು ತಿಂಗಳು ಮೊದಲು ಮಗುವಿಗೆ ಜನ್ಮ ನೀಡಿದ ಮಹಿಳಾ ಸರ್ಕಾರಿ ನೌಕರರಿಗೆ ನವಜಾತ ಶಿಶುವಿನ ಆರೈಕೆಗೆ 18 ವಾರಗಳ ಹೆರಿಗೆ ರಜೆ
• ಕೆಲಸದ ಗುಣಮಟ್ಟ ಹೆಚ್ಚಿಸಲು ವಾರದ ಐದು ದಿನಗಳ ಕೆಲಸದ ಅವಧಿ ಆರಂಭಿಸಬೇಕು.
• ಎಲ್ಲ ಸೌಲಭ್ಯಗಳನ್ನು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ಸ್ಥಳೀಯ ಸಂಸ್ಥೆಗಳು, ವಿವಿ ಬೋಧಕೇತರ ನೌಕರರಿಗೆ ಅನ್ವಯಿಸಬೇಕು.
• ಮಾಸಿಕ ಪಿಂಚಣಿಯ ಪ್ರಮಾಣವನ್ನು ಅಂತಿಮ ಮೂಲವೇತನ ಶೇ.50 ರಷ್ಟು ಹಾಗೂ ಕುಟುಂಬ ಪಿಂಚಣಿಯ ಶೇ.30 ರಷ್ಟು ಮುಂದುವರೆಸಬೇಕು,
• ಕನಿಷ್ಠ ಪಿಂಚಣಿ 13,500 ಹಾಗೂ ಗರಿಷ್ಠ ಪಿಂಚಣಿ 1,20,600 ರು.ಗೆ ಪರಿಷ್ಕರಣೆ
• 70-80 ವರ್ಷ ವಯಸ್ಸಿನ ಪಿಂಚಣಿದಾರರಿಗೆ ಮೂಲ ಪಿಂಚಣಿಯ ಶೇ.100ರಷ್ಟು ನೀಡಬೇಕು.
• ಪಿಂಚಣಿದಾರರಿಗೆ 'ಸಂಧ್ಯಾ ಕಿರಣ' ಎಂಬ ಆರೋಗ್ಯ ಯೋಜನೆ ಜಾರಿ ಮಾಡಬೇಕು, ಅಲ್ಲಿವರೆಗೆ ಮಾಸಿಕ 500 ವೈದ್ಯಕೀಯ ಭತ್ಯೆ ನೀಡಬೇಕು 
• ಪಿಂಚಣಿದಾರರು ಮರಣ ಹೊಂದಿದ್ದಲ್ಲಿ 10000 ರು.ಗಳ ಶವಸಂಸ್ಕಾರ ಮೊತ್ತ ನೀಡಬೇಕು.

Follow Us:
Download App:
  • android
  • ios