ಈಗ ದೇಶದ ಮೂಡ್‌ ಈಗ ತುಂಬಾ ಸ್ಪಷ್ಟವಾಗಿದೆ. ಯಾರು ರಾಮನನ್ನು ವಿರೋಧಿಸಿದರೋ ಇಂದು ಅಧಿಕಾರದಲ್ಲಿಲ್ಲ. ಯಾರು ರಾಮನನ್ನು ಗೌರವಿಸಿದರೋ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅಧಿಕಾರದಲ್ಲಿದ್ದಾರೆ’ ಎಂದು ಸ್ಪಷ್ಟನೆ ನೀಡಿದ ಆರೆಸ್ಸೆಸ್‌ ಮುಖಂಡ ಇಂದ್ರೇಶ್‌ ಕುಮಾರ್‌ 

ನವದೆಹಲಿ(ಜೂ.16): ‘ಬಿಜೆಪಿಗರು ರಾಮಮಂದಿರ ನಿರ್ಮಿಸಿದರೂ, ತಮ್ಮ ಅಹಂಕಾರದಿಂದ 241ಕ್ಕೇ ಸ್ತಬ್ಧರಾದರು. ರಾಮ ವಿರೋಧಿಗಳಿಗೆ 2ನೇ ಸ್ಥಾನ ಲಭಿಸಿತು. ಇವರಿಗೆ ಹೆಚ್ಚು ಮತ ಪಡೆಯದಂತೆ ದೇವರೇ ತಡೆದ’ ಎಂದಿದ್ದ ಆರೆಸ್ಸೆಸ್‌ ಮುಖಂಡ ಇಂದ್ರೇಶ್‌ ಕುಮಾರ್‌ ತಮ್ಮ ಹೇಳಿಕೆ ಹಿಂಪಡೆದು ತಣ್ಣಗಾಗಿದ್ದಾರೆ.

‘ಈಗ ದೇಶದ ಮೂಡ್‌ ಈಗ ತುಂಬಾ ಸ್ಪಷ್ಟವಾಗಿದೆ. ಯಾರು ರಾಮನನ್ನು ವಿರೋಧಿಸಿದರೋ ಇಂದು ಅಧಿಕಾರದಲ್ಲಿಲ್ಲ. ಯಾರು ರಾಮನನ್ನು ಗೌರವಿಸಿದರೋ ಅವರು ಇಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅಧಿಕಾರದಲ್ಲಿದ್ದಾರೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

ದುರಹಂಕಾರಿಗಳನ್ನು ಭಗವಾನ್‌ ರಾಮ 241ಕ್ಕೆ ನಿಲ್ಲಿಸಿದ್ದಾನೆ: ಬಿಜೆಪಿಗೆ ಟಾಂಗ್‌ ಕೊಟ್ಟ ಆರೆಸ್ಸೆಸ್‌ ನಾಯಕ!

ಬಿಜೆಪಿಗರನ್ನು ಇಂದ್ರೇಶ್‌ ಶುಕ್ರವಾರ ಅಹಂಕಾರಿಗಳು ಎಂದಿದ್ದು ರಾಜಕೀಯ ಸಂಚಲನಕ್ಕೆ ಕಾರಣವಾಗಿತ್ತು. ಇದಕ್ಕೂ ಮುನ್ನ ಆರೆಸ್ಸೆಸ್‌ ಮುಖ್ಯಸ್ಥ ಮೋಹನ ಭಾಗವತ್‌ ಹಾಗೂ ಆರೆಸ್ಸೆಸ್‌ ಸಂಬಂಧಿ ಪತ್ರಿಕೆ ಆರ್ಗನೈಸರ್‌, ಬಿಜೆಪಿಯನ್ನು ಚುನಾವಣಾ ಹಿನ್ನಡೆ ಹಿನ್ನೆಲೆಯಲ್ಲಿ ಟೀಕಿಸಿದ್ದರು.