ಬೆಂಗಳೂರು (ನ.09):  ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಆರ್ ಆರ್ ನಗರ ಕ್ಷೇತ್ರದ ಮತ ಎಣಿಕೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದೆ. 

ಜಿದ್ದಾಜಿದ್ದಿನ ಪೈಪೋಟಿಗೆ ಕಾರಣವಾಗಿರುವ ಮತಕ್ಷೇತ್ರ ಆರ್ ಆರ್ ನಗರದಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಫಲಿತಾಂಶಕ್ಕಾಗಿ ಕಾದು ಕುಳಿತಿದ್ದಾರೆ. ಜಿದ್ದಾಜಿದ್ದಿನ ಹೋರಾಟ ನಡೆದಿರುವ ಆರ್ ಆರ್ ನಗರ ಕ್ಷೇತ್ರದ ಫಲಿತಾಂಶವು ಹಲವು ಮುಖಂಡರ ನಿದ್ದೆಯನ್ನು ಕೆಡಿಸಿದೆ. 

'ಎಲ್ಲವೂ ಉಲ್ಟಾಪಲ್ಟಾ : ಎರಡೂ ಕಡೆ ಕೈ ಗೆಲುವು ಖಚಿತ' ...

ಆರ್ ಆರ್ ನಗರದ ಜ್ಞಾನಾಕ್ಷಿ ವಿದ್ಯಾನಿಕೇತನದಲ್ಲಿ ಮತ ಎಣಿಕೆ ನಡೆಯಲಿದ್ದು,  4 ಹಾಲ್ ಗಳಲ್ಲಿ ಏಕಕಾಲಕ್ಕೆ ಆರಂಭಗೊಳ್ಳಲಿದೆ. ಮತ ಎಣಿಕೆಗಾಗಿ  28 ಟೇಬಲ್ ಗಳನ್ನು ಜೋಡಿಸಲಾಗುತ್ತದೆ. ಇನ್ನು ಮತ ಎಣಿಕೆ ಆರಂಭವಾದ 2 ಗಂಟೆಯೊಳಗೆ ಫಲಿತಾಂಶವು ಪೂರ್ಣವಾಗುವ ನಿರೀಕ್ಷೆ ಇದೆ. 

ಇನ್ನು ಈ ಫಲಿತಾಂಶವು ಹಲವು ಪ್ರಶ್ನೆಗಳಿಗೆ ಉತ್ತರ ನೀಡಲಿದೆ
 
 ರಾಜಕೀಯ ನಾಯಕರ ಭವಿಷ್ಯವನ್ನು ನಿರ್ಧರಿಸಲಿರುವ ಆರ್ ಆರ್ ನಗರ ಕ್ಷೇತ್ರದ ಫಲಿತಾಂಶ..

 ನೂತನ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ರಾಜಕೀಯ ಶಕ್ತಿಗೆ ಸವಾಲ್ ಆಗಿರುವ ಚುನಾವಣೆ..

 ಸರ್ಕಾರದ ಮೇಲಿನ ವಿಶ್ವಾಸವನ್ನು ಬಲಪಡಿಸುವ ಚುನಾವಣಾ ಫಲಿತಾಂಶ..

 ಮುನಿರತ್ನ ಅವರ ರಾಜಕೀಯ ಭವಿಷ್ಯ ನಿರ್ಧರಿಸಲಿರುವ ಫಲಿತಾಂಶ..

 ಸಂಪುಟ ಸೇರಲು ಸಿದ್ಧರಾಗಿರೋ ಮುನಿರತ್ನ ಅವರಿಗೆ ಬಲ ಸಿಗುತ್ತಾ....?

 ಕ್ಷೇತ್ರ ಪಡೆಯಲು ಹರಸಾಹಸ ಮಾಡಿದ ಕಾಂಗ್ರೆಸ್ ನಾಯಕರ ಯತ್ನ ಫಲ ಕೊಡುತ್ತಾ..?

 ರಾಜಕೀಯ ರಂಗಕ್ಕೆ ಎಂಟ್ರಿ ಕೊಟ್ಟ ಹೆಚ್ ಕುಸುಮಾ ಕನಸು ನನಸಾಗುತ್ತಾ..?

 ಪ್ರಬಲ ಸಮೂದಾಯದ ಬೆಂಬಲ ಯಾರಿಗೆ ಅನ್ನೋ ಕುತೂಹಲಕ್ಕೆ ತೆರೆ....

 ಅಭಿವೃದ್ಧಿ ಮಂತ್ರದ ಮುಂದೆ ಜಾತಿ ರಾಜಕಾರಣ ಬಲಿಷ್ಠನಾ..?

 ಬಿಬಿಎಂಪಿ ಚುನಾವಣೆಗೆ ನೀಡಲಿದೆಯಾ ದಿಕ್ಸೂಚಿ....?