ಸಾಯಿಬಾಬಾ ದೇವಾಲಯಕ್ಕೆ ಭೇಟಿ ನೀಡಿದ ರಾಬರ್ಟ್‌ ವಾದ್ರಾ, ‘ಸಮಾನತೆಯನ್ನು ಭೋದಿಸಿದ ಆಧ್ಯಾತ್ಮಿಕ ನಾಯಕ ಸಾಯಿಬಾಬಾ ಅವರಂತೆ ರಾಹುಲ್‌ ಗಾಂಧಿಯವರ ಆಲೋಚನೆಗಳಿವೆ. ಬಾಬಾ ಆಶೀರ್ವಾದ ರಾಹುಲ್‌ ಮೇಲಿರಲಿ ಎಂದು ಆಶಿಸುತ್ತೇನೆ’ ಎಂದು ಹೇಳಿದರು. 

ಶಿರಡಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರನ್ನು ಅವರ ಭಾವ, ಉದ್ಯಮಿ ರಾಬರ್ಟ್‌ ವಾದ್ರಾ ಅವರು ಶಿರಡಿಯ ಆಧ್ಯಾತ್ಮಿಕ ಚಿಂತಕ ಸಾಯಿಬಾಬಾ ಅವರಿಗೆ ಹೋಲಿಸಿದ್ದಾರೆ. ಭಾನುವಾರ ಇಲ್ಲಿನ ಸಾಯಿಬಾಬಾ ದೇವಾಲಯಕ್ಕೆ ಭೇಟಿ ನೀಡಿದ ವಾದ್ರಾ, ‘ಸಮಾನತೆಯನ್ನು ಭೋದಿಸಿದ ಆಧ್ಯಾತ್ಮಿಕ ನಾಯಕ ಸಾಯಿಬಾಬಾ ಅವರಂತೆ ರಾಹುಲ್‌ ಗಾಂಧಿಯವರ ಆಲೋಚನೆಗಳಿವೆ. ಬಾಬಾ ಆಶೀರ್ವಾದ ರಾಹುಲ್‌ ಮೇಲಿರಲಿ ಎಂದು ಆಶಿಸುತ್ತೇನೆ’ ಎಂದರು.

ತೆಲಂಗಾಣ ಯಾತ್ರೆ ವೇಳೆ ರಾಹುಲ್‌ ವೇಗದ ಓಟ!
ಜಡ್‌ಚೆರ್ಲಾ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭಾನುವಾರ ಭಾರತ ಜೋಡೋ ಯಾತ್ರೆಯ ವೇಳೆ ಭರ್ಜರಿ ರನ್‌ ಮಾಡಿದ್ದಾರೆ. ಯಾತ್ರೆ ತೆಲಂಗಾಣವನ್ನು ಪ್ರವೇಶಿಸಿದ 5ನೇ ದಿನ ಶಾಲಾ ಮಕ್ಕಳೊಂದಿಗೆ ನಡೆಯುತ್ತಿದ್ದ ರಾಹುಲ್‌ ಇದ್ದಕ್ಕಿದ್ದಂತೆ ತಮ್ಮ ವೇಗ ಹೆಚ್ಚಿಸಿ ಓಡಲು ಆರಂಭಿಸಿದರು. ಮುನ್ಸೂಚನೆ ಇಲ್ಲದೇ ರಾಹುಲ್‌ ಓಡುವುದನ್ನು ಆರಂಭಿಸಿದ್ದೇ ಅವರ ಭದ್ರತಾ ಸಿಬ್ಬಂದಿ ಹಾಗೂ ತೆಲಂಗಾಣ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ರೇವಂತ್‌ ರೆಡ್ಡಿ ಹಾಗೂ ಇನ್ನಿತರರು ಅವರ ಹಿಂದೆ ದೌಡಾಯಿಸಬೇಕಾಯಿತು. ಈ ಹಿಂದೆ ಯಾತ್ರೆ ಕರ್ನಾಟಕದಲ್ಲಿ ಸಾಗುತ್ತಿದ್ದಾಗಲೂ ರಾಹುಲ್‌ ಇದೇ ರೀತಿ ಓಡಿ ಅಚ್ಚರಿ ಮೂಡಿಸಿದ್ದರು.

ಇದನ್ನು ಓದಿ: ಜೋಡೋ ಯಶಸ್ಸು: ಕಾಂಗ್ರೆಸ್‌ನಲ್ಲಿ ಹುಮ್ಮಸ್ಸು..!

ಇನ್ನೊಂದೆಡೆ, ಇತ್ತೀಚೆಗಷ್ಟೇ ಟಾಲಿವುಡ್‌ ನಟಿ ಪೂನಮ್ ಕೌರ್‌ ಅವರ ಕೈಯನ್ನು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಹಿದುಕೊಂಡಿದ್ದು ವೈರಲ್‌ ಆಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹೆಚ್ಚು ಚರ್ಚೆಯಾಗಿತ್ತು ಹಾಗೂ ನಟಿ ಮತ್ತು ರಾಹುಲ್‌ ಗಾಂಧಿ ವಿರುದ್ಧ ಟ್ರೋಲ್‌ಗಳ ಸುರಿಮಳೆ ಮಾಡಲಾಗಿತ್ತು.

ಈ ಟ್ರೋಲ್‌ಗಳಿಗೆ ಪ್ರತಿಕ್ರಿಯೆ ನೀಡಿದ್ದ ನಟಿ, ನಡೆಯುವಾಗ ನಾನು ಕಾಲು ಜಾರಿ ಬೀಳುವುದರಲ್ಲಿದ್ದೆ. ಈ ವೇಳೆ ರಾಹುಲ್‌ ಗಾಂಧಿ ನನ್ನ ಕೈ ಹಿಡಿದರು ಎಂದು ನಟಿ ಹೇಳಿದ್ದಾರೆ. ‘’ಇದು ನಿಮಗೆ ಸಂಪೂರ್ಣವಾಗಿ ಅವಮಾನಕರವಾಗಿದೆ, ಪ್ರಧಾನಿ ನಾರಿಶಕ್ತಿಯ ಬಗ್ಗೆ ಮಾತನಾಡಿದ್ದು ನೆನಪಿರಲಿ. ನಾನು ಹೆಚ್ಚು ಕಡಿಮೆ ಜಾರಿ ಬಿದ್ದು ಪಲ್ಟಿಯಾಗುತ್ತಿದ್ದೆ, ಸರ್ ನನ್ನ ಕೈ ಹಿಡಿದುಕೊಂಡರು.

ಇದನ್ನೂ ಓದಿ: Bharat Jodo Yatra: ಕರ್ನಾಟಕದಲ್ಲಿ ರಾಹುಲ್‌ ಯಾತ್ರೆ ಫೋಟೋ ಶೋ..! 

ಇನ್ನು, ತೆಲಂಗಾಣದಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ರಾಹುಲ್ ಗಾಂಧಿಯನ್ನು ಶ್ಲಾಘಿಸಿದ ಟಾಲಿವುಡ್‌ ನಟಿ ಪೂನಂ ಕೌರ್, 'ಮಹಿಳೆಯರ ಬಗ್ಗೆ ಅವರ ಕಾಳಜಿ, ಗೌರವ ಮತ್ತು ರಕ್ಷಣಾತ್ಮಕ ಸ್ವಭಾವವು ನನ್ನ ಹೃದಯವನ್ನು ಮುಟ್ಟಿದ ಸಂಗತಿಯಾಗಿದೆ' ಎಂದು ಹೇಳಿದ್ದಾರೆ.