Asianet Suvarna News Asianet Suvarna News

Parishat Fight| ರಾಯಚೂರು-ಕೊಪ್ಪಳ ಕ್ಷೇತ್ರದ ಟಿಕೆಟ್‌ಗಾಗಿ ಹೆಚ್ಚಿದ ಪೈಪೋಟಿ..!

*   ಸ್ಪರ್ಧೆಯಿಂದ ಹಿಂದೆ ಸರಿದ ಬಿಜೆಪಿಯ ಸಿವಿಸಿ 
*   ಕಾಂಗ್ರೆಸ್ ಪಕ್ಷದಲ್ಲಿಯೂ ಹೆಚ್ಚಿದ ಆಕಾಂಕ್ಷಿಗಳ ಪಟ್ಟಿ 
*   ಜೆಡಿಎಸ್ ಸ್ಪರ್ಧೆಗೆ ಇಳಿಯುವ ಸಾಧ್ಯತೆ ತೀರಾ ಕಡಿಮೆ
 

Rivalry in BJP and Congress for Vidhan Parishat Election in Raichur Koppal Constituency grg
Author
Bengaluru, First Published Nov 13, 2021, 2:49 PM IST

ಸೋಮರಡ್ಡಿ ಅಳವಂಡಿ

ಕೊಪ್ಪಳ(ನ.13):  ವಿಧಾನ ಪರಿಷತ್(Vidhan Parishat) ಚುನಾವಣೆಯಲ್ಲಿ(Election) ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಸುವ ರಾಯಚೂರು-ಕೊಪ್ಪಳ(Raichur-Koppal) ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಭಾರಿ ಪೈಪೋಟಿ ಶುರುವಾಗಿದೆ. ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿರುವುದರಿಂದ ಹೈಕಮಾಂಡ್ ಯಾರನ್ನು ಅಖಾಡಕ್ಕೆ ಇಳಿಸುವುದು ಎನ್ನುವ ಚಿಂತನೆ ನಡೆಸಿದೆ.

ಎರಡು ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ಮತ ಚಲಾಯಿಸುವುದರಿಂದ ಜಿಲ್ಲೆಗೆ ಸೂಕ್ತವಾಗಿರುವ ಅಭ್ಯರ್ಥಿ(Candidate) ಆಯ್ಕೆ ಮಾಡಬೇಕಾಗಿದೆ. ಜಿಲ್ಲಾ ಪಂಚಾಯಿತಿ ಸದಸ್ಯರ ಅವಧಿ ಮುಗಿದಿರುವುದರಿಂದ ಪ್ರಸಕ್ತ ಚುನಾವಣೆಯಲ್ಲಿ ಮತದಾನದಿಂದ ವಂಚಿತರಾಗಿದ್ದಾರೆ. ಗ್ರಾಮ ಪಂಚಾಯಿತಿ(Gram Panchayat) ಹಾಗೂ ತಾಲೂಕು ಪಂಚಾಯಿತಿ(Taluk Panchayat) ಸದಸ್ಯರು ಮತದಾನ ಮಾಡಲಿದ್ದಾರೆ. 

ಹಿಂದೆ ಸರಿದ ಸಿವಿಸಿ: 

ಕಳೆದ ವರ್ಷ ಕೆಲವೇ ಮತಗಳ ಅಂತರದಿಂದ ಪರಾಭವಗೊಂಡಿದ್ದ ಬಿಜೆಪಿ(BJP) ಅಭ್ಯರ್ಥಿ ಸಿ.ವಿ. ಚಂದ್ರಶೇಖರ(CV Chandrashekhar) ಈಗಾಗಲೇ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಈ ಬಾರಿ ಸ್ಪರ್ಧೆ ಮಾಡುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ. ಇವರನ್ನೇ ಮತ್ತೆ ಅಖಾಡಕ್ಕೆ ಇಳಿಸಬೇಕು ಎಂದು ಬಿಜೆಪಿ ಹೈಕಮಾಂಡ್(BJP Highcommand) ಚಿಂತನೆ ನಡೆಸುವ ವೇಳೆಯಲ್ಲಿಯೇ ಹಿಂದೆ ಸರಿದಿರುವುದರಿಂದ ಟಿಕೆಟ್‌ಗಾಗಿ(Ticket) ಅನೇಕರು ಪೈಪೋಟಿಗೆ ಇಳಿದಿದ್ದಾರೆ.

Vidhan Parishat Election| ಜಿಪಂ, ತಾಪಂ ಸದಸ್ಯರಿಲ್ಲದೆ ‘ಪರಿಷತ್‌ ಫೈಟ್‌’?

ವಿಶ್ವನಾಥ ಬನ್ನಟ್ಟಿ ಪೈನಲ್ ?: 

ಮಾನ್ವಿ ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ ಉದ್ಯಮಿ ಈ.ಆಂಜನೇಯ, ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಶರಣು ತಳ್ಳಿಕೇರಿ, ಕೊಪ್ಪಳ ಜಿಲ್ಲಾ ಪ್ರಧಾನಕಾರ್ಯದರ್ಶಿ ನವೀನ್ ಗುಳಗಣ್ಣವರ ರೇಸ್‌ನಲ್ಲಿದ್ದಾರೆ. ಆದರೆ, ಕೊನೆಗಳಿಗೆಯ ಬೆಳವಣಿಗೆಯ ಪ್ರಕಾರ ವಿಶ್ವನಾಥ ಬನ್ನಟ್ಟಿ ಅವರ ಹೆಸರ ಫೈನಲ್ ಆಗಿದೆ ಎನ್ನಲಾಗಿದೆ. ಇನ್ನೇನು ಘೋಷಣೆಯೊಂದೆ ಬಾಕಿ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಕಾಂಗ್ರೆಸ್(Congress) ಪಕ್ಷದಲ್ಲಿ ಬಸವರಾಜ ಪಾಟೀಲ್(Basavaraj Patil) ಇಟಗಿ ಎಂಎಲ್ಸಿ(MLC) ಆಗಿದ್ದರು. ಇದೀಗ ಅವರು ಸ್ಪರ್ಧೆ ಮಾಡುವುದಕ್ಕೆ ಹಿಂದೇಟು ಹಾಕಿರುವುದು ವರದಿಯಾಗಿದೆ. ಹೀಗಾಗಿ, ಶರಣಗೌಡ ಬಯ್ಯಾಪುರ, ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ಶರಣಗೌಡ ಮದರಕಲ್ ಮತ್ತು ಜಿ.ಬಸವರಾಜ ರೆಡ್ಡಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಪ್ರಮುಖವಾಗಿ ಶರಣೇಗೌಡ ಬಯ್ಯಾಪುರ ಹೆಸರು ಕೇಳಿ ಬರುತ್ತಿದೆ. ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಪ್ರಭಾವ ಹೊಂದಿರುವ ಅಮರೇಗೌಡ ಬಯ್ಯಾಪುರ ಶರಣೇಗೌಡ ಪರವಾಗಿ ಬ್ಯಾಟ್ ಮಾಡುತ್ತಿದ್ದಾರೆ. ಇದನ್ನು ಮೀರಿಯೂ ಕಾಂಗ್ರೆಸ್ ಪಕ್ಷದಲ್ಲಿ ಮತ್ತೊಂದು ಹೆಸರು ಕೇಳಿ ಬರುತ್ತಿದೆ. ಅವರು ಇದುವರೆಗೂ ಬಹಿರಂಗವಾಗಿ ಪಕ್ಷದಲ್ಲಿ ಗುರುತಿಸಿಕೊಂಡಿಲ್ಲವಾದರೂ ಉದ್ಯಮಿ ವಿ.ಆರ್. ಪಾಟೀಲ ಹೆಸರು ಚಾಲ್ತಿಯಲ್ಲಿದೆ.

Karnataka Politics| ಸಂತೋಷ್‌ ಲಾಡ್‌ ಬಳ್ಳಾರಿಯಿಂದ ಸ್ಪರ್ಧೆ?

ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ಈ ರೀತಿಯ ಪೈಪೋಟಿ ಇದ್ದರೂ ಜೆಡಿಎಸ್‌ದಲ್ಲಿ(JDS) ಮಾತ್ರ ಯಾವುದೇ ಬೆಳವಣಿಗೆಯಾಗಿಲ್ಲ. ಈಗಿರುವ ಮಾಹಿತಿಯ ಪ್ರಕಾರ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಸಾಧ್ಯತೆ ತೀರಾ ಕಡಿಮೆ ಇದೆ.
ರಾಯಚೂರು-ಕೊಪ್ಪಳ ಕ್ಷೇತ್ರಕ್ಕೆ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕು ಎನ್ನುವ ಕುರಿತು ಅಂತಿಮ ತೀರ್ಮಾನವಾಗಿಲ್ಲ. ಪಕ್ಷದ ಹೈಮಾಂಡ್ ಈ ಕುರಿತು ತೀರ್ಮಾನ ಮಾಡುತ್ತದೆ. ಅಖಾಡಕ್ಕೆ ಇಳಿಸಿದ ಅಭ್ಯರ್ಥಿಯನ್ನು ಗೆಲ್ಲಿಸುವುದಕ್ಕಾಗಿ ಶ್ರಮಿಸುತ್ತೇವೆ. ಕೊಪ್ಪಳ ಜಿಲ್ಲೆಗೆ ಕೊಡಿ ಎಂದು ಕೇಳಿದ್ದೇವೆ ಅಂತ ಕೊಪ್ಪಳ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ(Shivaraj Tangadagi) ಅವರು ತಿಳಿಸಿದ್ದಾರೆ.

ಕಳೆದ ಬಾರಿ ಪರಾಭವಗೊಂಡಿದ್ದ ಸಿ.ವಿ. ಚಂದ್ರಶೇಖರ ಅವರೇ ಮತ್ತೆ ಅಖಾಡಕ್ಕೆ ಇಳಿಯಬೇಕಾಗಿತ್ತು. ಆದರೆ, ಅವರು ಹಿಂದೆ ಸರಿದಿರುವುದರಿಂದ ಪಕ್ಷದ ಹೈಕಮಾಂಡ್ ಯಾರನ್ನು ಕಣಕ್ಕೆ ಇಳಿಸುತ್ತದೆಯೋ ಅವರನ್ನು ಗೆಲ್ಲಿಸುವ ದಿಸೆಯಲ್ಲಿ ಪ್ರಯತ್ನಿಸುತ್ತೇವೆ ಅಂತ ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ ದೊಡ್ಡನಗೌಡ ಪಾಟೀಲ್(Doddanagouda Patil) ಹೇಳಿದ್ದಾರೆ.
 

Follow Us:
Download App:
  • android
  • ios