ಚುನಾವಣಾ ವೆಚ್ಚಕ್ಕಾಗಿ ನಿವೃತ್ತ ಯೋಧನಿಂದ ಕೋಟ ಶ್ರೀನಿವಾಸ್ ಪೂಜಾರಿಗೆ ಧನ ಸಹಾಯ!
ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಬಿಜೆಪಿಯ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿಗೆ ಧನ ಸಹಾಯ ಮಾಡಿದ್ದಾರೆ.
ಚಿಕ್ಕಮಗಳೂರು (ಏ.10): ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಬಿಜೆಪಿಯ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿಗೆ ಧನಸಹಾಯ ಮಾಡಿದ್ದಾರೆ. ಚುನಾವಣಾ ವೆಚ್ಚಕ್ಕಾಗಿ ಸರಳ ಸಜ್ಜನಿಕೆಗೆ ಹೆಸರಾಗಿರೋ ಕೋಟ ಶ್ರೀನಿವಾಸ್ ಪೂಜಾರಿಗೆ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಹಣ ಸಹಾಯ ಮಾಡಿದ್ದಾರೆ. ಜೊತೆಗೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರು, ನಿವೃತ್ತ ಯೋಧನಿಂದ ಹಣ ಸಹಾಯ ಮಾಡಲಾಗಿದೆ.
ಅಜ್ಜಂಪುರ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಸೀತಾರಾಮ್ ರಿಂದ 25 ಸಾವಿರ, ಪುರಸಭೆ ಮಾಜಿ ಸದಸ್ಯ ಮಿಲ್ಟ್ರಿ ಶ್ರೀನಿವಾಸ್ ಎಂಬುವರಿಂದ 25 ಸಾವಿರ, ಚಂದ್ರಪ್ಪ ಎಂಬುವರಿಂದಲೂ 25 ಸಾವಿರ ಹಣ ಸಹಾಯವನ್ನು ಚುನಾವಣಾ ಖರ್ಚಿಗಾಗಿ ಬಿಜೆಪಿ ಬೆಂಬಲಿಗರು ಮಾಡಿದ್ದಾರೆ. ತರೀಕೆರೆಯ ಬಿಜೆಪಿ ಸಮಾವೇಶದಲ್ಲಿ ಹಣ ಸಹಾಯವನ್ನು ಬಿಜೆಪಿ ಬೆಂಬಲಿಗರು ಮಾಡಿದ್ದಾರೆ.
ಕೇಂದ್ರದಲ್ಲಿ ಕಾಂಗ್ರೆಸ್ ಬಂದರೆ ಹೆಚ್ಚು ಅನುಕೂಲ: ಶಾಸಕ ಕೆ.ಎಂ.ಶಿವಲಿಂಗೇಗೌಡ
25000 ಕೊಟ್ಟ ಚುರುಮುರಿ ವ್ಯಾಪಾರಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಚುರುಮುರಿ ವ್ಯಾಪಾರಿಯೊಬ್ಬರು ಚುನಾವಣಾ ಖರ್ಚಿಗೆ 25 ಸಾವಿರ ರುಪಾಯಿ ನೀಡಿದ್ದಾರೆ. ಶುಕ್ರವಾರ ನಗರದ ವಿವಿಧೆಡೆ ಪೂಜಾರಿ ಅವರು ಮತಯಾಚನೆ ಮಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ಇಲ್ಲಿನ ತೇಗೂರು ವೃತ್ತಕ್ಕೆ ಹೋಗಿದ್ದ ಸಂದರ್ಭದಲ್ಲಿ ಚುರುಮುರಿ ವ್ಯಾಪಾರಿ ಲೋಕೇಶ್ ಅವರು ಎಲೆ, ಅಡಿಕೆ, ಬಾಳೆ ಹಣ್ಣುಗಳ ತಾಂಬೂಲದೊಂದಿಗೆ ತಟ್ಟೆಯಲ್ಲಿ 25 ಸಾವಿರ ರುಪಾಯಿ ನೀಡಿ ಗೆಲುವಿಗೆ ಶುಭಾ ಹಾರೈಸಿದರು. ಇದೇ ಸಂದರ್ಭದಲ್ಲಿ ಮಾಜಿ ಸಚಿವ ಸಿ.ಟಿ.ರವಿ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ, ನಗರಾಧ್ಯಕ್ಷ ಪುಷ್ಪರಾಜ್ ಇದ್ದರು.
ಸಮಾಜ ಕಲ್ಯಾಣ ಇಲಾಖೆ ಪಾರದರ್ಶಕ: ಸಮಾಜ ಕಲ್ಯಾಣ ಇಲಾಖೆಯನ್ನು ಅತ್ಯಂತ ಪಾರದರ್ಶಕವಾಗಿ ಮಾಡುವುದರಲ್ಲಿ ಯಾವುದೇ ಅನುಮಾನ ಇಲ್ಲ. ಇಲಾಖೆಯ ಸದೃಢತೆಗೆ ಮುಕ್ತ ಅವಕಾಶ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು. ಸಮಾಜ ಕಲ್ಯಾಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದರು.
ಗೆಲ್ಲುವ ಕುದುರೆಗೆ ಕಾಂಗ್ರೆಸ್ ಟಿಕೆಟ್: ಸಚಿವ ಶಿವಾನಂದ ಪಾಟೀಲ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಅಗತ್ಯ. ಆದರೆ ಸತ್ಯಕ್ಕೆ ಅಪಚಾರವಾಗದ ರೀತಿಯಲ್ಲಿ ಆರೋಪಿಸಬೇಕು, ಶಾಸಕರು ಅಥವಾ ಅಧಿಕಾರಿಯ ವಿರುದ್ಧವಾದ ಯಾವುದೇ ದೂರುಗಳಿದ್ದರೂ ನನ್ನ ಬಳಿ ತಿಳಿಸಿದರೂ ಕ್ರಮ ತೆಗೆದುಕೊಳ್ಳುವೆ. ಭ್ರಷ್ಟರನ್ನು ಯಾವುದೇ ಕಾರಣಕ್ಕೂ ರಕ್ಷಿಸುವುದಿಲ್ಲ ಎಂದರು. ಕಾಂಗ್ರೆಸ್ ಪಕ್ಷದ ಆರೋಪಗಳ ನಡುವೆಯೂ ನಾವು ಮುಂದಿನ ಚುನಾವಣೆಯಲ್ಲಿ ನಿಶ್ಚಿತವಾಗಿ 150 ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತೇವೆ ಎಂದರು.