ಕೇಂದ್ರದಲ್ಲಿ ಕಾಂಗ್ರೆಸ್ ಬಂದರೆ ಹೆಚ್ಚು ಅನುಕೂಲ: ಶಾಸಕ ಕೆ.ಎಂ.ಶಿವಲಿಂಗೇಗೌಡ
ಮಹಿಳೆಯರ ಆರ್ಥಿಕ ಅಭಿವೃದ್ದಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಂಗ್ರೆಸ್‌ನ ರಾಜ್ಯ ಸರ್ಕಾರ ಯೋಜನೆಗಳನ್ನು ಜಾರಿಗೆ ತಂದ ರೀತಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಇನ್ನು ಹೆಚ್ಚಿನ ಅನುಕೂಲವಾಗಲಿದ್ದು ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.
ಅರಸೀಕೆರೆ (ಏ.10): ಮಹಿಳೆಯರ ಆರ್ಥಿಕ ಅಭಿವೃದ್ದಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಂಗ್ರೆಸ್‌ನ ರಾಜ್ಯ ಸರ್ಕಾರ ಯೋಜನೆಗಳನ್ನು ಜಾರಿಗೆ ತಂದ ರೀತಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಇನ್ನು ಹೆಚ್ಚಿನ ಅನುಕೂಲವಾಗಲಿದ್ದು ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವಂತೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು. ತಾಲೂಕಿನ ಕಸಬಾ ಹೋಬಳಿಯ ಗೀಜಿಹಳ್ಳಿ ಮತ್ತು ಮುರುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಪರ ಮತಯಾಚನೆ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ರಾಜ್ಯದಲ್ಲಿ ಸ್ತ್ರೀ ಶಕ್ತಿಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡುವ ನಿಟ್ಟಿನಲ್ಲಿ ನಿರ್ಣಯವನ್ನು ತೆಗೆದುಕೊಂಡ ಕಾಂಗ್ರೆಸ್ ಪ್ರಿಯಾಂಕಾ ಗಾಂಧಿಯವರ ಸಮ್ಮುಖದಲ್ಲಿ ಮಹಿಳೆಯರಿಗೆ ಆರ್ಥಿಕ ಸಹಾಯ ನೀಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಘೋಷಣೆ ಮಾಡಲು ನಿರ್ಧರಿಸಲಾಯಿತು. ಅದರಂತೆ ಮಹಿಳೆಯರು ನಿಂತ ನೀರಾಗದೇ ರಾಜ್ಯದ ಮೂಲೆಗಳಿಗೆ ಓಡಾಡಲು ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಯಿತು. ೧೦ ಕೆ.ಜಿ. ಅಕ್ಕಿ, ಉಚಿತ ವಿದ್ಯುತ್, ಗೃಹಲಕ್ಷ್ಮೀ ಯೋಜನೆಯಡಿ ೨ ಸಾವಿರ ರು. ಹಣ ನೀಡುತ್ತಿದ್ದಾರೆ ಎಂದು ಹೇಳಿದರು.
‘ದೇಶದ ಪ್ರಧಾನಿ ದೇಶಕ್ಕೆ ಒಳ್ಳೆಯ ದಿನ ಬಂದಿದೆ ಎನ್ನುತ್ತಾರೆ. ಯಾವ ರೀತಿ ಅಚ್ಚೇದಿನ ಬಂದಿದೆ. ಉದ್ಯೋಗವಿಲ್ಲದೇ ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ಬೆಲೆಗಳ ಹೆಚ್ಚಳ ಸೇರಿದಂತೆ ನದಿಗಳ ಜೋಡಣೆಯಾಗ್ರ ಇಂದು ನಾವು ಬರಗಾಲವನ್ನು ಅನುಭವಿಸುವಂತಾಗಿದೆ’ ಎಂದು ಟೀಕಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಸಿದ್ದರಹಟ್ಟಿ ನಾಗರಾಜು ಮಾತನಾಡಿ, ಕಾಂಗ್ರೆಸ್ ಪಕ್ಷ ಜನಪರ ಕಾರ್ಯಕ್ರಮಗಳ ಮೂಲಕ ರಾಜ್ಯದ ಜನತೆಗೆ ಆಶ್ರಯವಾಗಿರುವ ರೀತಿ ಕ್ಷೇತ್ರದ ಶಾಸಕರು ಎಲ್ಲರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವನ್ನು ಮಾಡುತ್ತಿರುವುದರಿಂದ ಕ್ಷೇತ್ರ ಅಭಿವೃದ್ದಿ ಪಥದಲ್ಲಿದ್ದು ಇನ್ನು ಹೆಚ್ಚಿನ ಅಭಿವೃದ್ದಿಗಾಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶ್ರೇಯಸ್ ಪಟೇಲ್‌ಗೆ ಮತ ನೀಡುವಂತೆ ಹೇಳಿದರು.
ಗೆಲ್ಲುವ ಕುದುರೆಗೆ ಕಾಂಗ್ರೆಸ್ ಟಿಕೆಟ್: ಸಚಿವ ಶಿವಾನಂದ ಪಾಟೀಲ
ಅಣ್ಣಾಯ್ಕನಹಳ್ಳಿ ನಾಗರಾಜು, ಜಿ.ಪಂ.ಮಾಜಿ ಉಪಾಧ್ಯಕ್ಷ ಬಿಳಿಚೌಡಯ್ಯ, ಪಟೇಲ್ ಶಿವಪ್ಪ, ಧರ್ಮಶೇಖರ್, ಮುರುಂಡಿ ಶಿವಯ್ಯ, ನಾರಾಯಣಮೂರ್ತಿ, ಭೈರೇಶ್, ಯಳವಾರೆ ಕೇಶವಣ್ಣ, ಬೆಂಡೇಕೆರೆ ಅಜ್ಜಪ್ಪ, ಶಿವಮೂರ್ತಿ, ಜನವಪ್ಪ, ಸುಲೋಚನಮ್ಮ, ಕೃಷ್ಣಕುಮಾರ್, ಶ್ರೀನಿವಾಸ್, ಮುನೇಶ್, ಹೀರಾಬೋವಿ, ಸಿದ್ದರಹಟ್ಟಿ ರುದ್ರೇಶ್, ಮಲ್ಲಿದೇವಿಹಳ್ಳಿ ಮಂಜು, ರಾಜೀವ್, ಬೋಜೇಗೌಡ, ಆನಂದ್, ರಾಜಣ್ಣ, ಯಳವಾರೆ ನಾಗರಾಜು ಇದ್ದರು. ಗೀಜಿಹಳ್ಳಿ ಮತ್ತು ಮುರುಂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಮಾತನಾಡಿದರು.