Asianet Suvarna News Asianet Suvarna News

Karnataka Politics ಗುತ್ತಿಗೆದಾರರಿಂದ 1 ರೂ ಪಡೆದಿಲ್ಲ, ಸಾಬೀತು ಪಡಿಸಿದ್ರೆ ರಾಜಕೀಯದಿಂದ ನಿವೃತ್ತಿ, ಸಿದ್ದು ಸವಾಲ್

* ರಾಜಕೀಯ ನಿವೃತ್ತಿ ಸವಾಲು ಹಾಕಿದ ಸಿದ್ದರಾಮಯ್ಯ
* ಗುತ್ತಿಗೆದಾರರಿಂದ ಒಂದು ರೂ ಪಡೆದಿಲ್ಲ ಎಂದ ಸಿದ್ದು
ನನ್ನ ಅವಧಿಯಲ್ಲಿ ಒಂದು ರೂಪಾಯಿ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ ಮಾಜಿ ಸಿಎಂ

retire to Politics If I Taken commission from contractors Says Siddaramaiah rbj
Author
Bengaluru, First Published Jan 21, 2022, 3:53 PM IST

ಬೆಂಗಳೂರು, (ಜ.21): ಮುಖ್ಯಮಂತ್ರಿಯಾಗಿದ್ದ ಅವರಧಿಯಲ್ಲಿ ಗುತ್ತಿಗೆದಾರರಿಂದ(Contractors) ನಾನು ಒಂದು ರೂ ಪಡೆದಿಲ್ಲ, ಸಾಬೀತು ಪಡಿಸಿದರೆ ರಾಜಕೀಯಕ್ಕೆ ಗುಡ್​ಬೈ ಹೇಳುವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಸವಾಲು ಹಾಕಿದ್ದಾರೆ.

 ಬೆಂಗಳೂರಿನಲ್ಲಿ(Bengaluru)  ಇಂದು(ಶುಕ್ರವಾರ) ಮಾತನಾಡಿದ ಸಿದ್ದರಾಮಯ್ಯ, ಮುಖ್ಯಮಂತ್ರಿಯಾಗಿ ನನ್ನ ಅವಧಿಯಲ್ಲಿ ನಿರಪೇಕ್ಷಣಾ ಪತ್ರಕ್ಕಾಗಿ (ಎನ್‌ಒಸಿ) ಗುತ್ತಿಗೆದಾರರು ಒಂದು ರೂಪಾಯಿ ಕೊಟ್ಟಿಲ್ಲ. ಯಾರೂ ಕೂಡ ಹಣವನ್ನು ಕೊಟ್ಟಿಲ್ಲ. ಒಂದು ವೇಳೆ ಕೊಟ್ಟಿದ್ದಾರೆಂದು ಸಾಬೀತು ಪಡಿಸಿದರೆ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಎಂದರು.

40% Commission ದಾಖಲೆ ಬಿಡುಗಡೆ ಮಾಡಿದ್ರೆ ಸರ್ಕಾರ ಪತನ, ಹೊಸ ಬಾಂಬ್ ಸಿಡಿಸಿದ ಗುತ್ತಿಗೆದಾರರ ಸಂಘ

 ಕರ್ನಾಟಕ ಬಿಜೆಪಿ(Karnataka BJP ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿಹೋಗಿದೆ. ಗುತ್ತಿಗೆದಾರರು ಶೇಕಡಾ 40ರಷ್ಟು ಕಮಿಷನ್ ನೀಡಬೇಕು. ನನ್ನ ಅವಧಿಯಲ್ಲಿ ಒಂದು ರೂಪಾಯಿ ಕಮಿಷನ್ ಪಡೆದಿಲ್ಲ. ಕಮಿಷನ್ ಪಡೆದಿರುವುದು ಸಾಬೀತುಪಡಿಸಿದರೆ ರಾಜೀನಾಮೆ ಕೊಡ್ತೇನೆ ಎಂದು ಸಿದ್ದರಾಮಯ್ಯ ಸವಾಲ್ ಹಾಕಿದರು. 

ರಾಜಕೀಯ ಪಕ್ಷಕ್ಕೆ ಸಿದ್ಧಾತ ಇರಬೇಕು, ಸಿದ್ಧಾಂತ ಇಲ್ಲ ಅಂದ್ರೆ ಅದು ರಾಜಕೀಯ ಪಕ್ಷ ಅಲ್ಲ. ಬಿಜೆಪಿ, ಜೆಡಿಎಸ್ ಗೆ ಸಿದ್ಧಾಂತ ಇಲ್ಲ. ಜೆಡಿಎಸ್ ಗೆ ಯಾವ ಸಿದ್ಧಾಂತವೂ ಇಲ್ಲ, ಅದೊಂದು ಅವಕಾಶವಾದಿ ಪಕ್ಷ. ಸಿದ್ಧಾಂತದ ಮೇಲೆ ಯಾವುದಾದರೂ ಪಕ್ಷ ಇದ್ದರೆ ಅದು ಕಾಂಗ್ರೆಸ್ ಪಕ್ಷ ಎಂದು ಹೇಳಿದರು.

ಆರ್ ಎಸ್ ಎಸ್ ಮುಖವಾಡ ಬಿಜೆಪಿ, ಮತಾಂಧತೆ ಹುಟ್ಟು ಹಾಕಿ ಹಿಡನ್ ಅಜೆಂಡಾವನ್ನ ಜಾರಿಮಾಡಿಕೊಳ್ಳುವ ಪಕ್ಷ ಬಿಜೆಪಿ. ಎಲ್ಲ ಧರ್ಮ, ಜಾತಿ, ಭಾಷೆಯ ಜನರನ್ನ ಒಟ್ಟಿಗೆ ಕೊಂಡೊಯ್ಯುವ ಪಕ್ಷ ಕಾಂಗ್ರೆಸ್. ಹಿಂದೂ ರಾಷ್ಟ್ರ ಮಾಡಬೇಕು ಅನ್ನೋದು ಬಿಜೆಪಿ ಹಿಡನ್ ಅಜೆಂಡಾ. ಬಹುಸಂಸ್ಕೃತಿ ಇರುವ ದೇಶದಲ್ಲಿ ಒಂದು ಧರ್ಮದ ರಾಷ್ಟ್ರವಾಗಿ ಮಾಡಲು ಆಗುವುದಿಲ್ಲ. ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳಬಾರದು ಎಂದು ಟಾಂಗ್ ಕೊಟ್ಟರು.

ಮೋದಿಗೆ ಮಾನ ಮರ್ಯಾದೆನೇ ಇಲ್ಲಾ. ಕೃಷಿ ಕಾಯ್ದೆ ವಾಪಾಸ್ ತೆಗೆದುಕೊಂಡಿದ್ದೇ ವಿಕ್ಟರಿ ಅಂದುಕೊಂಡಿದ್ದಾರೆ. ಅದು ರೈತರ ವಿಕ್ಟರಿ. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಬಿಜೆಪಿಯವರಿಗೆ ಜೆಡಿಎಸ್ ಬಾಲಂಗೋಚಿ. ದಯವಿಟ್ಟು ಅವರನ್ನ ತುಮಕೂರಿನಿಂದ ಓಡಿಸ್ಬಿಡ್ರಪ್ಪಾ. ಜಾತಿ ಹೆಸರೇಳಿಕೊಂಡು ರಾಜಕಾರಣ ಮಾಡ್ತಾರೆ. ಅತ್ಲಾಗಾದ್ರೆ ಬಿಜೆಪಿ ಜೊತೆ ಹೋಗ್ತಾರೆ. ಇತ್ಲಾಗಾದ್ರೆ ಈ ಕಡೆ ಬರ್ತಾರೆ ಎಂದು ಲೇವಡಿ ಮಾಡಿದರು.

ದೇಶ, ಸಂವಿಧಾನ ಉಳಿಯಬೇಕಾದರೆ ಕಾಂಗ್ರೆಸ್ ಸರ್ಕಾರ ಬೇಕು. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಮಾತ್ರ ಸಂವಿಧಾನ ಉಳಿಯುತ್ತೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದು 8 ವರ್ಷಗಳಾಗಿದೆ, ಯಾವ ವರ್ಗವನ್ನಾದರೂ ತೃಪ್ತಿಪಡಿಸುವ ಕೆಲಸವಾಗಿದೆಯಾ? ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆಯಾ ಎಂದು ಪ್ರಶ್ನಿಸಿದರು. 

ನಮ್ಮ ಸರ್ಕಾರದಲ್ಲಿ 53 ಲಕ್ಷ 11 ಸಾವಿರ ಕೋಟಿ ಸಾಲ ಇತ್ತು. ಈಗ 135 ಲಕ್ಷ 78 ಸಾವಿರ ಕೋಟಿಯಷ್ಟು ಸಾಲ ಮಾಡಿದ್ದಾರೆ. ಮೋದಿ ಸರ್ಕಾರ ಬಂದ ಬಳಿಕ ಅತಿ ಹೆಚ್ಚು ಸಾಲ ಮಾಡಿದ್ದಾರೆ. ಇದು ನರೇಂದ್ರ ಮೋದಿ ಮಾಡಿರುವ ಸರ್ಕಾರವೆಂದು ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ಕಿಡಿಕಾರಿದರು.

Follow Us:
Download App:
  • android
  • ios