Asianet Suvarna News Asianet Suvarna News

ಕೆಜಿಎಫ್‌ ಮಾದರಿ ತಾಲೂಕಾಗಿಸುವ ಪ್ರಯತ್ನಕ್ಕೆ ಸ್ಪಂದಿಸಿ: ಶಾಸಕಿ ರೂಪಕಲಾ

ನನ್ನ ಕ್ಷೇತ್ರವಾದ ಕೆಜಿಎಫ್‌ ತೀರಾ ಹಿಂದುಳಿದಿದ್ದು, ಇಲ್ಲಿನ ಜನತೆಗೆ ಉದ್ಯೋಗ, ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನನ್ನ ಪ್ರಯತ್ನಗಳಿಗೆ ಕಾರ್ಯಾಂಗದ ಭಾಗವಾಗಿರುವ ಸರ್ಕಾರಿ ನೌಕರರು ಸ್ಪಂದಿಸಿ, ನಿಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ಹಾಕುವ ಕಾರ್ಯದಲ್ಲಿ ನಿಮ್ಮೊಂದಿಗೆ ನಾನು ಸದಾ ಇರುವೆ ಎಂದು ಕೆಜಿಎಫ್‌ ಶಾಸಕಿ ರೂಪಕಲಾ ಶಶಿಧರ್‌ ಭರವಸೆ ನೀಡಿದರು. 

Respond to efforts to make KGF a model taluk Says MLA Roopakala gvd
Author
First Published Jun 2, 2023, 9:23 PM IST

ಕೋಲಾರ (ಜೂ.02): ನನ್ನ ಕ್ಷೇತ್ರವಾದ ಕೆಜಿಎಫ್‌ ತೀರಾ ಹಿಂದುಳಿದಿದ್ದು, ಇಲ್ಲಿನ ಜನತೆಗೆ ಉದ್ಯೋಗ, ಮೂಲಭೂತ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ನನ್ನ ಪ್ರಯತ್ನಗಳಿಗೆ ಕಾರ್ಯಾಂಗದ ಭಾಗವಾಗಿರುವ ಸರ್ಕಾರಿ ನೌಕರರು ಸ್ಪಂದಿಸಿ, ನಿಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ಹಾಕುವ ಕಾರ್ಯದಲ್ಲಿ ನಿಮ್ಮೊಂದಿಗೆ ನಾನು ಸದಾ ಇರುವೆ ಎಂದು ಕೆಜಿಎಫ್‌ ಶಾಸಕಿ ರೂಪಕಲಾ ಶಶಿಧರ್‌ ಭರವಸೆ ನೀಡಿದರು. 

ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು, ಕೆಜಿಎಫ್‌ ತಾಲೂಕು ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ಹಾಗೂ ಜಿಲ್ಲಾ ಯಾದವ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಕ್ಕಲೇರಿ ನಾರಾಯಣಸ್ವಾಮಿರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸರ್ಕಾರಿ ನೌಕರರು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯದಲ್ಲಿ ಸೇತುವೆಯಾಗಿ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜವಾಬ್ದಾರಿಯೂ ನಿಮ್ಮ ಮೇಲಿದೆ. ನಿಮ್ಮಿಂದ ಬದ್ದತೆ, ಬಡವರಪರ ಕಾಳಜಿ ನಾನು ಬಯಸುತ್ತೇನೆ ಎಂದು ತಿಳಿಸಿದರು.

ಏಕಾಏಕಿ ಕುಸಿತ ಕಂಡ ರೇಷ್ಮೆ ಗೂಡಿನ ಧಾರಣೆ: ಕಂಗಾಲಾದ ರೇಷ್ಮೆ ಬೆಳೆಗಾರರು

ಕೆಜಿಎಫ್‌ ತಾಲೂಕು ಗಣಿ ಮುಚ್ಚಿದ ನಂತರ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದೆ. ಇಲ್ಲಿನ ಕಾರ್ಮಿಕರು ಬೆಂಗಳೂರು, ಹೊಸೂರು ಮತ್ತಿತರೆಡೆ ದಿನವೂ ಪ್ರಯಾಣ ಬೆಳೆಸಿ ಜೀವನ ಸಾಗಿಸುತ್ತಿದ್ದಾರೆ. ಈ ಜನರಿಗಾಗಿ ಕೆಜಿಎಫ್‌ಗೆ ಕೈಗಾರಿಕಾ ಕಾರಿಡಾರ್‌ ತರುವ ನನ್ನ ಪ್ರಯತ್ನ ಪ್ರಗತಿಯಲ್ಲಿದೆ ಎಂದರು. ಇದೇ ಸಂದರ್ಭದಲ್ಲಿ ಬಿಜಿಎಂಎಲ್‌ ಶಾಲೆಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ಭರವಸೆ ನೀಡಿ, ಈ ಶಾಲೆಯನ್ನು ಸರ್ಕಾರದ ವಶಕ್ಕೆ ಪಡೆಯುವ ಕುರಿತು ಗಮನಹರಿಸುವುದಾಗಿ ತಿಳಿಸಿ, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚಿಸಲು ಶೀಘ್ರ ಸಭೆ ಕರೆಯುವುದಾಗಿಯೂ ಭರವಸೆ ನೀಡಿದರು.

ಜಿಲ್ಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಅಜಯ್‌ಕುಮಾರ್‌, ರಾಜ್ಯಪರಿಷತ್‌ ಸದಸ್ಯ ಗೌತಮ್‌, ಕೆಜಿಎಫ್‌ ತಾಲೂಕು ಅಧ್ಯಕ್ಷ ನರಸಿಂಹಮೂರ್ತಿ, ಜಿಲ್ಲಾ ಯಾದವ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಉದ್ಯಮಿ ವಕ್ಕಲೇರಿ ನಾರಾಯಣಸ್ವಾಮಿ, ಕೆಜಿಎಫ್‌ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ವಿನೋದ್‌ಬಾಬು, ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಶ್ರೀನಿವಾಸ್‌, ದೈಹಿಕ ಶಿಕ್ಷಕರ ಸಂಘದ ಡಾ.ಬಾಬು, ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಾಲತೇಶ್‌, ಕಾರ್ಯದರ್ಶಿ ಸುಬ್ರಮಣಿ, ಯಾದವ ಸಮುದಾಯದ ಮುಖಂಡರಾದ ಉಮೇಶ್‌, ಸುರೇಶ್‌ಬಾಬು, ಮಾಲತಿ, ಗಿರೀಶ್‌ ಇದ್ದರು.

ಸರ್ಕಾರಿ ಶಾಲೆ ಉಳಿದರೆ ಮಾತ್ರ ಸರ್ವರಿಗೂ ಶಿಕ್ಷಣ ಸಾಧ್ಯ: ಶಾಸಕ ಕೊತ್ತೂರು ಮಂಜುನಾಥ್‌

ನೌಕರರ ಭವನಕ್ಕೆ ಅನುದಾನ ನೀಡಿ: ಸನ್ಮಾನಿಸಿ ಮಾತನಾಡಿದ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು, ಕೋಲಾರ ಜಿಲ್ಲೆಯಲ್ಲಿ 16 ಸಾವಿರಕ್ಕೂ ಹೆಚ್ಚು ಸರ್ಕಾರಿ ನೌಕರರಿದ್ದೇವೆ, ನಮ್ಮ ಸಂಘದ ಚಟುವಟಿಕೆಗಳಿಗಾಗಿ ಸುಸಜ್ಜಿತ ಭವನ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದು, ತಾವು ಶಾಸಕರ ನಿಧಿಯಿಂದ ನೆರವು ನೀಡಿ. ನೌಕರರ ಸಂಘಕ್ಕಾಗಿ 5 ಎಕರೆ ಜಾಗ ಗುರುತಿಸಿದ್ದು, ಅದನ್ನು ಮಂಜೂರು ಮಾಡಿಸಲು ಒತ್ತಡ ಹಾಕಿ, ಸರ್ಕಾರಿ ನೌಕರರು ಶಾಸಕರ ಅಭಿವೃದ್ಧಿ ಪರ ಚಿಂತನೆಗೆ ಕೈಜೋಡಿಸುವುದಾಗಿಯೂ ನಿಮ್ಮ ಆಶಯದಂತೆ ಕೆಲಸ ನಿರ್ವಹಿಸುವುದಾಗಿಯೂ ತಿಳಿಸಿದರು.

Follow Us:
Download App:
  • android
  • ios