ಬೆಂಗಳೂರು, [ಜ.21]: ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್​ ಸಿಂಗ್​​ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದಲ್ಲಿ ಎಫ್​​ಐಆರ್​ ದಾಖಲಾಗಿದೆ.

 ಆನಂದ್ ಸಿಂಗ್ ಹೇಳಿಕೆ ಮೇರೆಗೆ ಬಿಡದಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದ್ದು, ಶಾಸಕರ ಗಲಾಟೆ ಪ್ರಕರಣದ ಏ-1 ಆರೋಪಿ ಆಗಿರುವ ಕಂಪ್ಲಿ ಗಣೇಶ್ ವಿರುದ್ಧ ಐಪಿಸಿ ಸೆಕ್ಷನ್ 323, 324, 307, 504 ಹಾಗೂ 506 ಅಡಿಯಲ್ಲಿ ದೂರು ದಾಖಲಾಗಿದೆ.

ರೆಸಾರ್ಟ್ ರಂಪಾಟ: ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ 'ಕೈ' ಶಾಸಕ ಅಮಾನತು

 ಇದ್ರಿಂದ ಕಂಪ್ಲಿ ಶಾಸಕ ಜೆ.ಎನ್. ಗಣೇಶ್​ಗೆ ಬಂಧನದ ಭೀತಿ ಶುರುವಾಗಿದ್ದು, ಯಾವುದೇ ಸಂದರ್ಭದಲ್ಲಾದರೂ ಶಾಸಕ ಕಂಪ್ಲಿ ಗಣೇಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆಗಳಿವೆ. ಅಷ್ಟೇ ಅಲ್ಲದೇ ಈ ಪ್ರಕರಣದಲ್ಲಿ ಗಣೇಶ್ ಅವರನ್ನು ಪೊಲೀಸರು ಅರೆಸ್ಟ್ ಮಾಡಿದರೂ ಅಚ್ಚರಿ ಪಡಬೇಕಿಲ್ಲ.

ಏಟು ತಿಂದ ಆನಂದ್‌ ಸಿಂಗ್‌ ಹೇಗಿದ್ದಾರೆ? ಫೋಟೋ ಹಿಂದಿನ ಸತ್ಯ!

ಮೊನ್ನೆ CLP ಮೀಟಿಂಗ್​​ ಮುಗಿದ ತಕ್ಷಣ ಬಿಡದಿ ಬಳಿಯ ಈಗಲ್​​ಟನ್ ರೆಸಾರ್ಟ್​​​ನಲ್ಲಿ ಬಳ್ಳಾರಿ ಭಾಗದ ಶಾಸಕರಾದ ಆನಂದ್​ ಸಿಂಗ್​​ ಮತ್ತು ಗಣೇಶ್​​ ಅವರು ರಾತ್ರಿ ಪಾರ್ಟಿ ವೇಳೆ ಕೈ ಕೈ ಮಿಲಾಯಿಸಿ ಬಡಿದಾಡಿಕೊಂಡಿದ್ದರು. 

ಕೈ ಶಾಸಕರ ಬಡಿದಾಟ: ಆತಂಕ ತಂದ ಆನಂದ ಸಿಂಗ್ ಹೆಲ್ತ್ ರಿಪೋರ್ಟ್

ಈ ವೇಳೆ ವಿಜಯನಗರ ಶಾಸಕರಾದ ಆನಂದ್​ ಸಿಂಗ್ ಅವರ ಮೇಲೆ ಕಂಪ್ಲಿ ಕ್ಷೇತ್ರದ ಶಾಸಕ ಗಣೇಶ್​ ತೀವ್ರವಾಗಿ ಹಲ್ಲೆ ನಡೆಸಿದ್ದರು. ಆ ಸಂದರ್ಭದಲ್ಲಿ ಆನಂದ್​ ಸಿಂಗ್ ಬಲಗಣ್ಣಿಗೆ ತೀವ್ರವಾದ ಪೆಟ್ಟು ಬಿದ್ದಿದ್ದು, ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.