ಬೆಂಗಳೂರು, [ಜ.21]: ಈಗಲ್ಟನ್ ರೆಸಾರ್ಟ್ ನಲ್ಲಿ ಆನಂದ್ ಸಿಂಗ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಕಂಪ್ಲಿ ಶಾಸಕನನ್ನು ಕಾಂಗ್ರೆಸ್ ಪಾರ್ಟಿಯಿಂದ ಅಮಾನತು ಮಾಡಿದೆ.

ಹೊಸಪೇಟೆಯ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಹಿನ್ನೆಲೆಯಲ್ಲಿ ಶಾಸಕ ಜೆ.ಎನ್.ಗಣೇಶ್ ಅವರನ್ನು ಕಾಂಗ್ರೆಸ್ ನಿಂದ ಅಮಾನತು ಮಾಡಲಾಗಿದೆ. 

ಏಟು ತಿಂದ ಆನಂದ್‌ ಸಿಂಗ್‌ ಹೇಗಿದ್ದಾರೆ? ಫೋಟೋ ಹಿಂದಿನ ಸತ್ಯ!

CLP ಮೀಟಿಂಗ್​​ ಮುಗಿದ ತಕ್ಷಣ ಬಿಡದಿ ಬಳಿಯ ಈಗಲ್​​ಟನ್ ರೆಸಾರ್ಟ್​​​ನಲ್ಲಿ  ಕಾಂಗ್ರೆಸ್​​ ಶಾಸಕರು ತಂಗಿದ್ದರು. ಈ ವೇಳೆ ಬಳ್ಳಾರಿ ಭಾಗದ ಶಾಸಕರಾದ ಆನಂದ್​ ಸಿಂಗ್​​ ಮತ್ತು ಗಣೇಶ್​​ ಅವರು ರಾತ್ರಿ ಪಾರ್ಟಿ ವೇಳೆ ಕೈ ಕೈ ಮಿಲಾಯಿಸಿ ಬಡಿದಾಡಿಕೊಂಡಿದ್ದರು. 

ಕೈ ಶಾಸಕರ ಬಡಿದಾಟ: ಆತಂಕ ತಂದ ಆನಂದ ಸಿಂಗ್ ಹೆಲ್ತ್ ರಿಪೋರ್ಟ್

ಈ ವೇಳೆ ವಿಜಯನಗರ ಶಾಸಕರಾದ ಆನಂದ್​ ಸಿಂಗ್ ಅವರ ಮೇಲೆ ಕಂಪ್ಲಿ ಕ್ಷೇತ್ರದ ಶಾಸಕ ಗಣೇಶ್​ ತೀವ್ರವಾಗಿ ಹಲ್ಲೆ ನಡೆಸಿದ್ದರು. ಆ ಸಂದರ್ಭದಲ್ಲಿ ಆನಂದ್​ ಸಿಂಗ್ ಬಲಗಣ್ಣಿಗೆ ತೀವ್ರವಾದ ಪೆಟ್ಟು ಬಿದ್ದಿದೆ.

ಎಡಗಣ್ಣಿಗೂ ಸಹ ಪೆಟ್ಟು ಬಿದ್ದಿದೆ. ಘಟನೆಯ ನಂತರ ಆನಂದ್​ ಸಿಂಗ್ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.