Asianet Suvarna News Asianet Suvarna News

'ದಸರಾಗೆ ಹೊಸ ಸಿಎಂ..' ಸೋಶಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ ಆದ #ResignSiddaramaiah

ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಾಸಿಕ್ಯೂಷನ್‌ ಅನುಮತಿಗೆ ತಡೆ ನೀಡಲು ಹೈಕೋರ್ಟ್‌ ನಿರಾಕರಿಸಿದ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿದೆ. ಬಿಜೆಪಿ ನಾಯಕರು ಸಿಎಂ ರಾಜೀನಾಮೆಗೆ ಆಗ್ರಹಿಸಿದರೆ, ಸಿದ್ದರಾಮಯ್ಯ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸೂಚನೆ ನೀಡಿದ್ದಾರೆ.

Resign Siddaramaih Trends in Social Media after High Court allows prosecution in Muda scam san
Author
First Published Sep 24, 2024, 3:38 PM IST | Last Updated Sep 24, 2024, 3:38 PM IST

ಬೆಂಗಳೂರು (ಸೆ.24): ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಷನ್‌ ಅನುಮತಿಗೆ ತಡೆ ನೀಡಲು ಹೈಕೋರ್ಟ್‌ ನಿರಾಕರಿಸಿದ ಬೆನ್ನಲ್ಲಿಯೇ ರಾಜ್ಯ ರಾಜಕಾರಣದಲ್ಲಿ ಸಂಚಲನ ಆರಂಭವಾಗಿದೆ. ಒಂದೆಡೆ ಬಿಜೆಪಿ ಇದು ತಮ್ಮ ದೊಡ್ಡ ಗೆಲುವು ಎಂದು ಹೇಳಿದ್ದಲ್ಲದೆ, ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದೆ. ಬಿಜೆಪಿಯ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್‌. ಅಶೋಕ್‌ ಸೇರಿದಂತೆ ಹಲವು ನಾಯಕರು ಸಿದ್ದರಾಮಯ್ಯ ಅವರು ಕಾನೂನಿನ ಬಗ್ಗೆ ಗೌರವ ಹೊಂದಿದ್ದರೆ, ದೇಶದ ಸಂವಿಧಾನದ ಬಗ್ಗೆ ಕಿಂಚಿತ್ತಾದರೂ ಗೌರವ ಇದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಕೆ ಎದುರಿಸಬೇಕು ಎಂದು ಆಗ್ರಹಿಸಿದ್ದಾರೆ. ಇನ್ನೊಂದೆಡೆ ಸಿದ್ದರಾಮಯ್ಯ ತಮ್ಮ ವಿರುದ್ಧ ಬಂದಿರುವ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆ ಮಾಡುವ ನಿರ್ಧಾರ ಮಾಡಲಿದ್ದಾರೆ ಎನ್ನಲಾಗಿದೆ. ಇದೆಲ್ಲದರ ನಡುವೆ ಸೋಶಿಯಲ್‌ ಮೀಡಿಯಾದಲ್ಲಿ ರಿಸೈನ್‌ ಸಿದ್ದರಾಮಯ್ಯ ಎನ್ನುವ ಹ್ಯಾಶ್‌ಟ್ಯಾಗ್‌ ಕೂಡ ಜನಪ್ರಿಯವಾಗಿದೆ.

'ದಸರಾಗೆ ಹೊಸ ಸಿಎಂ. ಟಾಟಾ ಬೈ ಬೈ. ಎಲ್ಲಾ ಸೀಟ್ ಬೆಲ್ಟ್ ಹಾಕೊಳಿ. bigboss 11 ಕ್ಕಿಂತ ಒಳ್ಳೆ ಸೀಸನ್ ಕರ್ನಾಟಕದ ರಾಜಕೀಯದಲ್ಲಿ ಶುರು ಆಗುತ್ತೆ. ಹೌದು ಸ್ವಾಮಿ' ಎಂದು ಒಬ್ಬರು ಟ್ವೀಟ್‌ ಮಾಡಿದ್ದಾರೆ. 'ಗುಲಾಮರಿಗೆ ಹಾಗೂ ಒಳಟಗಾರರಿಗೆ, ಉರಿ ಶುರುವಾಯಿತು. ಬರ್ನಾಲ್ ಸ್ಟಾಕ್ ಮುಗಿಯುವ ಲಕ್ಷಣ ಕಾಣುತ್ತಿದೆ. ಒಳಟಗಾರರು ಒಂದು ಹೆಜ್ಜೆ ಮುಂದೆ ಹೋಗಿ ಉಚ್ಚ ನ್ಯಾಯಾಲಯದ ಮುಂದೆ ಹೋರಾಟ ಮಾಡಬಹುದು' ಎಂದು ಮತ್ತೊಬ್ಬರು ಬರೆದಿದ್ದಾರೆ. 'ಈಗಲೂ ಕಾಂಗ್ರೆಸ್ ಹೈಕೋರ್ಟ್ ಮುಂದೆ ಪ್ರತಿಭಟನೆ ಮಾಡುತ್ತದೆಯೇನು?' ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.

'ಚಿಕ್ಕ ಮಕ್ಕಳು ಮುಂಬೈನಲ್ಲಿ ಕೋಲ್ಡ್‌ ಪ್ಲೇ ಕಾನ್ಸರ್ಟ್‌ ಬಗ್ಗೆ ಚಿಂತೆ ಮಾಡ್ತಿದ್ದಾರೆ. ಪುರುಷರು ಇಂಡಿಯಾ-ಆಸ್ಟ್ರೇಲಿಯಾ ಬಾರ್ಡರ್ ಗಾವಸ್ಕರ್‌ ಟ್ರೋಫಿ ಯಾವಾಗ ಆರಂಭ ಆಗುತ್ತದೆ ಅನ್ನೋದರ ಬಗ್ಗೆ ಚಿಂತೆ ಮಾಡ್ತಿದ್ದಾರೆ. ಲಜೆಂಡ್ಸ್‌ ಮಾತ್ರ ಸಿದ್ದರಾಮಯ್ಯ ಹಾಗೂ ಡಿಬಾಸ್‌ ಪರಪ್ಪನ ಅಗ್ರಹಾರದಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುವ ಬಗ್ಗೆ ಯೋಚನೆ ಮಾಡ್ತಿದ್ದಾರೆ' ಎಂದು ಗಣೇಶ್‌ (@me_ganesh14) ಎನ್ನುವವರು ಬರೆದಿದ್ದಾರೆ.' ಸಿದ್ದರಾಮಯ್ಯನವರೇ ನಿಮ್ಮದೇ ಮಾತುಗಳನ್ನು ಅನ್ವಯಿಸಿಕೊಳ್ಳಿ. ನೀವು ಜೈಲಿಗೆ ಹೋಗುವುದು ನಿಶ್ಚಿತವಾಗಿದೆ, ಅದರ ಮೊದಲು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ.' ಎಂದು ಸತೀಶ್‌ ಕುಂಪಲ ಟ್ವೀಟ್‌ ಮಾಡಿದ್ದಾರೆ. 'ಸಂವಿಧಾನಕ್ಕೆ ಇಂದು ಜಯ ಸಿಕ್ಕಿದೆ, ಸಂವಿಧಾನ ಹಿಡಿದು ಸುಳ್ಳು ಹೇಳುವ, ಹಿಂದೂಗಳ ಪಾಲಿನ ತಾಲಿಬಾನ್ ಸರ್ಕಾರಕ್ಕೆ ನ್ಯಾಯಾಲಯ ಪಾಠ ಕಲಿಸಿದೆ. ರಾಜೀನಾಮೆ ಕೊಡುವುದು ಒಳ್ಳೆಯದು ಭಂಡತನ ಶ್ರೇಯಸ್ಸಲ್ಲ ಸಿದ್ದರಾಮಯ್ಯ ಅವರೇ' ಎಂದು ಸನಾತನ (@sanatan_kannada) ಟ್ವೀಟ್‌ ಮಾಡಿದೆ.

'40 ವರ್ಷದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲ ಅಂತ ಬೀಗುತ್ತಿದ್ದ ನೀವು, ಅಲ್ಪಸಂಖ್ಯಾತರ ಓಲೈಕೆ ಮಾಡಿ, ಹಿಂದೂಗಳ ಹಾಗು ಅವರ ಆಚರಣೆಯ ಮೇಲೆ ಬಹಳ ಅನ್ಯಾಯ ಮಾಡಿದ್ದೀರಿ. ಇವಾಗ ಕಾನೂನೇ ನಿಮಗೆ ಉರುಳಾಗಿರುವಾಗ ಯಾರನ್ನು ದೂಷಿಸಿ ಪ್ರಯೋಜನವಿಲ್ಲ. ಸುಮ್ಮನೇ ರಾಜಿನಾಮೆ ನೀಡಿ' ಎಂದು ಪೋಸ್ಟ್‌ ಮಾಡಲಾಗಿದೆ.

Breaking: ಮುಡಾ ಕೇಸಲ್ಲಿ ಸಿಎಂ ಸಿದ್ದರಾಮಯ್ಯಗೆ ಶಾಕ್; ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್!

'ಗಣೇಶನನ್ನು ಬಂಧಿಸಲು ಸಿದ್ದರಾಮಯ್ಯ ಆದೇಶ ನೀಡಿದ್ದರು. ಈಗ ಅನುಭವಿಸಿ. ಹಿಂದಿನ ಸಂಗತಿಗಳಿಂದ ಅವರು ಪಾಠ ಕಲಿತಿಲ್ಲ. ದುರ್ಯೋಧನ ಕೂಡ ಭಗವಾನ್‌ ಕೃಷ್ಣನನ್ನು ಬಂಧಿಸಲು ಪ್ರಯತ್ನ ಮಾಡಿದ್ದ, ರಾವಣ, ಹನುಮಂತನನ್ನು ಬಂಧಿಸಲುವ ಯೋಚನೆ ಮಾಡಿದ್ದ, ಆಮೇಲೆ ಏನಾಯಿತು ಅನ್ನೋದು ಎಲ್ಲರಿಗೂ ಗೊತ್ತಿದೆ. ನಾವೆಂಥಾ ಬಂಢ ಸಿಎಂ ಅನ್ನು ಹೊಂದಿದ್ದೇನೆ. ನೀವು ರಿಸೈನ್‌ ಮಾಡಿ' ಎಂದು ಬರೆಯಲಾಗಿದೆ. 'ಸಮಾಜವಾದಿ ಮುಖವಾಡ ಧರಿಸಿ ಬಡವರ ದಲಿತರ ಭೂಮಿ ನುಂಗಿದ ಮುಡಾರಾಮಯ್ಯ ನಿಮ್ಮ ಬಂಡತನ ಬಿಟ್ಟು ಇನ್ನಾದರೂ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ತನಿಖೆಗೆ ಸಹಕರಿಸಿ!' ಎಂದು ಇನ್ನೊಬ್ಬರು ಬರೆದಿದ್ದಾರೆ.

'ಸಿಎಂ ಮೇಲೆ ದೊಡ್ಡ ಷಡ್ಯಂತ್ರ ನಡೆಯುತ್ತಿದೆ..' ಡಿಸಿಎಂ ಡಿಕೆ ಶಿವಕುಮಾರ್‌!

Latest Videos
Follow Us:
Download App:
  • android
  • ios