Asianet Suvarna News Asianet Suvarna News

ರಿಪೋಟರ್ಸ್ ಡೈರಿ: ಆತ್ಮಸಾಕ್ಷಿಗೂ ರಾಜಕೀಯ ಪಕ್ಷಭೇದ ಉಂಟಾ?

ನ್ಯಾಯಾಲಯಗಳಿಗಿಂತ ಆತ್ಮಸಾಕ್ಷಿ ದೊಡ್ಡು ಅನ್ನೋದಾದ್ರೆ ನ್ಯಾಯಾಲಯಗಳ ತೀರ್ಪಿಗೇನು ಬೆಲೆ? ಇದನ್ನ ಸಿದ್ದರಾಮಯ್ಯನವರೇ ಹೇಳಬೇಕು. ಮೇಲೆ ತಪ್ಪು ಮಾಡ್ತಿರೋ ಸಿದ್ದರಾಮಯ್ಯ 14 ನಿವೇಶನ ಮರಳಿ ಕೊಟ್ಟಿದ್ದೇ ದೊಡ್ಡ ತಪ್ಪು.

Reporters Diary Does conscience have political partisanship gvd
Author
First Published Oct 7, 2024, 10:09 AM IST | Last Updated Oct 7, 2024, 10:09 AM IST

ಬಿಜೆಪಿ ಫೈರ್ ಬ್ರಾಂಡ್ ನಾಯಕ ರವಿಕುಮಾರ್ ಮೊನ್ನೆ ಕಲಬುರಗಿಯಲ್ಲಿ ಬೆಂಕಿ ಉಗುಳುತ್ತಿದ್ದರು. ನ್ಯಾಯಾಲಯ ಗಳಿಗಿಂತ ಆತ್ಮಸಾಕ್ಷಿ ದೊಡ್ಡದು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ಕಿಡಿ ಹಾರಿಸುತ್ತಿದ್ದರು. ನ್ಯಾಯಾಲಯಗಳಿಗಿಂತ ಆತ್ಮಸಾಕ್ಷಿ ದೊಡ್ಡು ಅನ್ನೋದಾದ್ರೆ ನ್ಯಾಯಾಲಯಗಳ ತೀರ್ಪಿಗೇನು ಬೆಲೆ? ಇದನ್ನ ಸಿದ್ದರಾಮಯ್ಯನವರೇ ಹೇಳಬೇಕು ಎಂದು ಗುಡುಗಿದರು. ತಪ್ಪಿನ ಮೇಲೆ ತಪ್ಪು ಮಾಡ್ತಿರೋ ಸಿದ್ದರಾಮಯ್ಯ 14 ನಿವೇಶನ ಮರಳಿ ಕೊಟ್ಟಿದ್ದೇ ದೊಡ್ಡ ತಪ್ಪು ಅಂತ ಠೇಂಕರಿಸಿದರು. ಆಗ ಪತ್ರಕರ್ತರೊಬ್ಬರು ಹಿಂದೆ ಬಿಡಿಎ ಜಮೀನು ಖರೀದಿಯ ಸೋ ಕಾಲ್ಡ್ ಸಾಮ್ರಾಟ್ ಅಶೋಕ್ ಕೇಸ್‌ನಲ್ಲೂ ಹೀಂಗೆ ಆಗಿತ್ತು.

ಆಗ ಅವ್ರ ಜಮೀನು ವಾಪಸ್ ಕೊಟ್ಟಾಗ ಸುಮ್ಮನಿದ್ರಿ, ಆಗ ನಿಮ್ಮ ಪಕ್ಷದ ಆತ್ಮಸಾಕ್ಷಿ ಬೇರೆ ಆಗಿತ್ತಾ? ಅಂತ ಆ ಬೆಂಕಿಗೆ ಪ್ರಶ್ನೆ ಹಾಕಿದರು. ಆಗ ಸ್ವಲ್ಪ ಠುಸ್ ಆದ ರವಿಕುಮಾರ್ ಅವರು ಆ ಕೇಸ್ ಬೇರೆ ಈ ಕೇಸ್ ಬೇರೆ ಎಂದರೂ ಪಟ್ಟು ಬಿಡದ ಸುದ್ದಿಗಾರರು, ಆತ್ಮಸಾಕ್ಷಿಗೂ ಪಕ್ಷಭೇದ ಇದೆಯಾ? ಕಾಂಗ್ರೆಸ್, ಬಿಜೆಪಿಗೆ ಪ್ರತ್ಯೇಕ ಆತ್ಮಸಾಕ್ಷಿ ಇರ್ತದಾ? ಎಂದು ಮರು ಪ್ರಶ್ನೆ ಎಸೆದರು. ಅಲ್ಲಿವರೆಗೂ ಕಣ್ಣಿನಲ್ಲೇ ಬೆಂಕಿ ಉಗುಳುತ್ತಿದ್ದ ಮುಖದಲ್ಲಿ ಕೆಂಡ ಕಾರುತ್ತಿದ್ದ ರವಿಕುಮಾರ್ ಮುಖಾರವಿಂದದಲ್ಲಿ ಮುಗುಳ್ಳಗು ಕಾಣಿಸಿಕೊಂಡಿತ್ತು. ನೀವು ಬಂದಾಗ ಕಲಬುರಗಿ ಬಿಜೆಪಿಗರು ಎದ್ದೇಳ್ತಾರೆ, ಇಲ್ಲಾಂದ್ರೆ ಮಲಗಿರ್ತಾರಲ್ಲ, ಹೋರಾಟ, ಹೇಳಿಕೆ ಯಾವು ಇರೋದಿಲ್ಲ. ಅವರ ಆತ್ಮಸಾಕ್ಷಿ ಕಥೆಯೇನು ಎಂದೂ ಪತ್ರಕರ್ತರು ಪ್ರಶ್ನಿಸಿದಾಗ ನಾನು, ನನ್ನ ಆತ್ಮಸಾಕ್ಷಿಯಂತೆ ನಾನು ಹೇಳುತ್ತಿರುವೆ ಎಂದು ಚರ್ಚೆಗೆ ತೆರೆ ಎಳೆದರು.

ಮಣ್ಣಿನ ದೇವಿ ಬದಲಿಗೆ ಪಂಚಲೋಹದ ದೇವಿ ಪ್ರತಿಷ್ಠಾಪನೆ: ದೇವಿದರ್ಶನಕ್ಕೆ ಮುಗಿಬೀಳ್ತಿರೋ ಭಕ್ತರು!

ಡಿ.ಕೆ. ಬ್ರದರ್ಸ್‌ರನ್ನ ನೆನೆಯದಿದ್ದರೆ ಮೂರನೇದೂ ಆಗಲ್ವಂತೆ!
ಬಿಜೆಪಿ ಹಾಗೂ ಜೆಡಿಎಸ್‌ನ ಕೆಲ ನಾಯಕರಿಗೆ ಡಿ.ಕೆ.ಸಹೋದರರನ್ನು ನೆನೆಯದಿದ್ದರೆ ಒಂದು, ಎರಡು ಮಾತ್ರವಲ್ಲ ಮೂರನೇಯದ್ದೂ ಆಗಲ್ಲ. ಹೀಗಂತ- ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ಕುರಿತ ಎಚ್‌.ಡಿ. ಕುಮಾರಸ್ವಾಮಿ ಆರೋಪಗಳಿಗೆ ಪ್ರತಿಕ್ರಿಯಿಸುತ್ತಾ, 'ಬಿಜೆಪಿ ಹಾಗೂ ಜೆಡಿಎಸ್‌ ನಾಯಕರಿಗೆ ಡಿ.ಕೆ. ಸಹೋದರರೇ ಟಾರ್ಗೆಟ್. ಕೆಲ ನಾಯಕರಿಗೆ ಡಿಕೆ ಬ್ರದರ್ಸ್ ನೆನೆಯದಿದ್ದರೆ ಒಂದು, ಎರಡು ಕೂಡ ಆಗಲ್ಲ ಎಂದು ಎಡಗೈ ಕಿರುಬೆರಳು ಬಳಿಕ ಎಡಗೈ ತೋರುಬೆರಳು ಹಾಗೂ ಉಂಗುರ ಬೆರಳು ತೋರುತ್ತಾ ಹೇಳಿದರು. ಮಾತು ಮುಂದುವರೆಸಿ, 'ಮೂರನೇಯದಂತೂ ಇಲ್ಲವೇ ಇಲ್ಲ. ಅದು ಆಗೋದೇ ಇಲ್ಲ' ಎಂದು ಬಿಟ್ಟರು. ಪತ್ರಕರ್ತರು ಕುತೂಹಲದಿಂದ ಅದ್ಯಾವುದು ಸರ್ ಅದು ಮೂರನೇಯದ್ದು? ಎಂದು ಪ್ರಶ್ನಿಸಿದರೆ.... 'ನೀವೇ ಚೆಕ್ ಮಾಡಿಸಿ' ಎಂದರು. ನಾವ್ಯಾಕೆ ಮಾಡೋಣ ಸ‌ ನೀವೇ ಮಾಡಿಸಿ ಎಂದು ಪತ್ರಕರ್ತರು ಪಿಸು ನುಡಿದ ಪರಿಣಾಮ ಇದೀಗ ಕಾಂಗ್ರೆಸ್‌ನ ಘಟಾನುಘಟಿಗಳು ಮೂರನೇಯದ್ದು ಯಾವುದು ಅಂತ ಆಂತರಿಕ ತನಿಖೆ ಆರಂಭಿಸಿದ್ದಾರಂತೆ. 

ಮಳೆ ಅವಾಂತರಕ್ಕೆ ನಲುಗಿದ ಬೆಂಗಳೂರು: ಅಪಾರ್ಟ್‌ಮೆಂಟ್‌ಗೆ ನೀರು, 600 ಬೈಕ್ ಮುಳುಗಡೆ

ಹೀಗೊಂದು ಕಳ್ಳತನ...
ಅದು ನಸುಕಿನ ಜಾವ 4 ಗಂಟೆ, ಕಾರವಾರದ ಬ್ಯಾಂಕ್ ಒಂದರ ಎಟಿಎಂನಿಂದ ಭಾರಿ ಸದ್ದು ಕೇಳಿ ಬರುತ್ತಿತ್ತು. ಅಕ್ಕಪಕ್ಕದ ನಿವಾಸಿಗಳು ಎಚ್ಚರಗೊಂಡರು. ಸಮೀಪದ ಇನ್ನೊಂದು ಬ್ಯಾಂಕಿನ ಎಟಿಎಂ ಭದ್ರತಾ ಸಿಬ್ಬಂದಿ ದೂರದಿಂದ ನೋಡಿದಾಗ ಆ ಎಟಿಎಂನೊಳಗೆ ಒಬ್ಬಾತ ಇದ್ದದ್ದು ಕಂಡು ಬಂತು. ತಡಮಾಡದೆ ಪೊಲೀಸರಿಗೆ ಫೋನಾಯಿಸಿದ. ಪೊಲೀಸರೂ ಅಷ್ಟೇ ವೇಗವಾಗಿ ಸ್ಥಳಕ್ಕೆ ಬಂದರು. ಒಬ್ಬಯುವಕ ಎಟಿಎಂನಲ್ಲಿ ಕುಳಿತಿದ್ದ. ಅಷ್ಟೇ ಅಲ್ಲ, ಎಟಿಎಂನಲ್ಲಿನ ಸಿಸಿ ಕ್ಯಾಮೆರಾ ಹಾಗೂ ಮತ್ತಿತರ ಉಪಕರಣಗಳಿಗೆ ಹಾನಿ ಮಾಡಿದ್ದ. ಎಟಿಎಂ ದೋಚಲು ಬಂದ ಕುಖ್ಯಾತ ದರೋಡೆಕೋರ ಕೈಗೆ ಸಿಕ್ಕ ಖುಷಿಯಲ್ಲಿ ಒಬ್ಬ ಆತನ ಕತ್ತು ಹಿಡಿದರೆ, ಇನ್ನೊಬ್ಬ ಕೈ ಹಿಡಿದು ದರ ದರನೆ ಎಳೆದುಕೊಂಡು ಪೊಲೀಸ್ ಠಾಣೆಗೆ ಹೋದರು. ವಿಚಾರಣೆಗೆ ಶುರುವಿಟ್ಟುಕೊಂಡಾಗ ಪೊಲೀಸರೇ ಕಕ್ಕಾವಿಕ್ಕಿ. ಆತನೊಬ್ಬ ಮಾನಸಿಕ ಅಸ್ವಸ್ಥ, ಹಾಫ್ ಪ್ಯಾಂಟ್ ಹೊರತು ಪಡಿಸಿದರೆ ಮೈ ಮೇಲೆ ಬಟ್ಟೆಯೂ ಇರಲಿಲ್ಲ. ಕೇಳಿದ ಪ್ರಶ್ನೆಗಳಿಗೆಲ್ಲ ಏನೇನೋ ಉತ್ತರ ಬರುತ್ತಿತ್ತು. ನಾಟಕ ಮಾಡುತ್ತಿರಬೇಕು ಎಂದು ಸಂಜೆ ತನಕ ಪ್ರಯತ್ನಿಸಿ ಕೊನೆಗೂ ಆತ ಮಾನಸಿಕ ಅಸ್ವಸ್ಥಎನ್ನುವುದು ಪಕ್ಕಾ ಆಯಿತು. ಭಾರಿ ಹಿಡಿದ ಖುಷಿಯಲ್ಲಿದ್ದ ಪೊಲೀಸರು ತಿಮಿಂಗಿಲ ನಿರಾಶರಾಗಬೇಕಾಯಿತು.

• ಶೇಷಮೂರ್ತಿ ಅವಧಾನಿ
• ಶ್ರೀಕಾಂತ್
• ವಸಂತಕುಮಾರ್ ಕತಗಾಲ

Latest Videos
Follow Us:
Download App:
  • android
  • ios