Asianet Suvarna News Asianet Suvarna News

ಯೋಗ ದಿನದಂದು ಅಂಕಲ್‌ಗಳ ಸೆಲ್ಫಿ ಆಸನ: ಲಾಡ್ ಸಭೆ ಕಂಡು ಅಧಿಕಾರಿಗಳು ಶೀರ್ಷಾಸನ

ಶ್ರೀಲೀಲಾ ಮಾತು ಶುರು ಮಾಡುತ್ತಿದ್ದಂತೆ ಯೋಗಾಭ್ಯಾಸ ಕ್ಕೆಂದು ಬಂದಿದ್ದ ಜನರು ಸೆಲ್ಪಿಗಾಗಿ ಮುಗಿಬಿದ್ದರು. ಶ್ರೀಲೀಲಾ ಖುಷಿಯಿಂದಲೇ ಸೆಲ್ವಿಗೆ ಪೋಸ್ ಕೊಟ್ಟರು.

reporters dairy uncles selfie asana on yoga day gvd
Author
First Published Jul 8, 2024, 10:25 AM IST

ಸಂಡೂರು ತಾಲೂಕಿನ ಜಿಂದಾಲ್ ಕ್ರಿಕೆಟ್ ಮೈದಾನದಲ್ಲಿ ಸಂಚಿ ಜರುಗಿದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಯೋಗಾಭ್ಯಾಸ ಸೆಲ್ವಿ ಅಭ್ಯಾಸ ಜೋರಾಗಿ ನಡೆಯಿತು. ವೇದಿಕೆ ಕಾರ್ಯಕ್ರಮ ಶುರುಮುನ್ನ 'ಇನ್ನೇನು ಕೆಲವೇಕ್ಷಣಗಳಲ್ಲಿ ಸಿಎಂಆಗಮಿಸಲಿದ್ದಾರೆ.ನಿಮ್ಮ ಜೊತೆಯೋಗಾಭ್ಯಾಸಮಾಡಲಿದ್ದಾರೆ ಎಂದು ವೇದಿಕೆಯಲ್ಲಿದ್ದ ಯೋಗ ಸಾಧಕರು ಅನೌನ್ಸ್ ಮಾಡ್ತಿದ್ರು. ಮೈದಾನದಲ್ಲಿ ಜಮಾಯಿಸಿದ್ದನೂರಾರು ಜನರಿಗೆ ತೀವ್ರ ಕುತೂಹಲ. ಸಿಎಂ ಯೋಗಾಭ್ಯಾಸ ಮಾಡುತ್ತಾರೆಂದರೆ ಕೇಳಬೇಕೇ? ಅದನ್ನು ಕಣ್ಣುಂಬಿಕೊಳ್ಳಲು ಜನರು ಕಾತರರಾಗಿದ್ದರು. 

ಕೆಲ ಹೊತ್ತಿನ ಬಳಿಕ ಸಿಎಂ ಆಗಮನವಾಯಿತು. ಜೋರಾದ ಚಪ್ಪಳೆ, ಕೂಗು, ಜೈಕಾರಗಳು ಮೊಳಗಿದವು. ಸಿಎಂ ಯೋಗಾಭ್ಯಾಸ ಮಾಡುತ್ತಾರೆಂದೇ ಮೆತ್ತನೆ ಹಾಸಿಗೆ ಸಿದ್ಧಪಡಿಸಲಾಗಿತ್ತು. ಸಿಎಂ ಆಗಮನವಾಗುತ್ತಿದ್ದಂತೆಯೇ ನಿಮ್ಮ ಜೊತೆಸಿಎಂಯೋಗಾಭ್ಯಾಸಮಾಡುವರು ಎಂದು ಯೋಗಪಟುಗಳು ಸಿಎಂಗೆ ಯೋಗಾಸನಗಳನ್ನು ಹೇಳಿಕೊಡಲು ಶುರು ಮಾಡಿದರು. ಆದರೆ, ಸಿಎಂ ಕುಳಿತಲ್ಲಿಯೇ ಒಂದಷ್ಟು ಆ ಕಡೆ ಈಕಡೆ ಕೈ ಚಾಚಿ, ಕೈ ಎತ್ತಿ ಯೋಗಾಸನದ ಭಂಗಿ ತೋರಿಸಿದರು. ನೆರೆದಿದ್ದವರು ಇದೇ ಯೋಗಾಸನ ಇರಬಹುದು ಎಂದು ಅವರಂತೆಯೇ ಯೋಗ ಭಂಗಿ ಪ್ರದರ್ಶಿಸಿದರು.

ಡೆಂಘೀ ತುರ್ತು ಸ್ಥಿತಿ ಘೋಷಿಸಿ, ಜನರಿಗೆ ಉಚಿತವಾಗಿ ಸರ್ಕಾರದಿಂದಲೇ ಪರೀಕ್ಷೆ ಮಾಡಿಸಬೇಕು: ಆರ್.ಅಶೋಕ್

ಇದಾದ ನಂತರ ಸರ್‌ ಒಂದಷ್ಟು ಮಾತಾಡಿ ಎಂಬ ಕೋರಿಕೆಗೆ ಸಿಎಂ, 'ಇಲ್ಲ ನಾನು ಮಾತಾಡಲ್ಲ' ಎಂದು ತಮ್ಮದೇ ಸ್ಟೈಲ್‌ನಲ್ಲಿ ಹೇಳಿ ಕಳಿಸಿದರು. ಅಂತಿಮವಾಗಿ ಅತಿಥಿಯಾಗಿ ಬಂದಿದ್ದ ನಟಿ ಶ್ರೀಲೀಲಾ ಅವರನ್ನು ಮುನ್ನೆಲೆಗೆ ತಂದರು. ಶ್ರೀಲೀಲಾ ಮಾತು ಶುರುಗೊಳಿಸು ತ್ತಿದ್ದಂತೆಯೇ ಯೋಗಾಭ್ಯಾಸಕ್ಕೆಂದು ಆಗಮಿಸಿದ್ದ ಜನರು ವೇದಿಕೆ ಯತ್ತ ನುಗ್ಗಿದರು.ಶ್ರೀಲೀಲಾ ಜೊತೆ ಸೆಲ್ಪಿಗಾಗಿ ಮುಗಿಬಿದ್ದರು. ಜನರ ಅಭಿಮಾನ ಕಂಡ ಶ್ರೀಲೀಲಾ ಖುಷಿಯಿಂದಲೇ ಸೆಲ್ವಿಗೆ ಮುಖವೊಡ್ಡಿ ದರು. ಅಂದಹಾಗೇ, ಸೆಲ್ಲಿಗೆ ಮುಗಿಬಿದ್ದವರ ಪೈಕಿ 50 ವರ್ಷ ದಾಟಿದವರೇ ಹೆಚ್ಚಿನವರಿದ್ದರು. ಹೀಗೆ ವಿಶ್ವಯೋಗ ದಿನದಂದು ನಮ್ಮ ಸಂಡೂರಿನ ಅಂಕಲ್‌ಗಳು ಚೆನ್ನಾಗಿ ಸೆಲ್ಫಿ ಅಭ್ಯಾಸ ಮಾಡಿದರು.

ಲಾಡ್ ಸಾಹೇಬರ ಅಟ್ಯಾಕ್!
ಯಾಕೋ ಲಾಡ್ ಸಾಹೇಬ್ರು ಇತ್ತೀಚೆಗೆ ಆಫೀಸರ್‌ಗಳ ಮ್ಯಾಲ್ ಗುರ್ ಅನ್ನಾಕತ್ತಾರು. ಎರಡೆ ದವಸ ಧಾರವಾಡದಾಗ ಕ೦ಟನ್ಯೂ ಸಭೆಗಳು ನಡೆದ್ದು, ಒಂದಿನಾ ಕೆಡಿಪಿ ಸಭೆ, ಇನ್ನೊಂದಿನಾ ಜನತಾ ದರ್ಶನ ನಡೀತು. ಎರಡೂ ದಿನಾ ಪೇಶನ್ ಕಳಕೊಂಡಾರ ರೀತಿ ಲಾಡ್ ಸಾಹೇಬ್ರು ಆಫೀಸರ್‌ಗಳನ್ನು ಲೆಫ್ಟ್ ಆ್ಯಂಡ್ ರೈಟ್ ತಗೊಂಡ್ರು. ಹೋಂ ವರ್ಕ್ ಮಾಡದೇ ಇದ್ದಾಗ ಶಾಲ್ಯಾಗ ಟೀಚರ ಗೋಳು ಮಕ್ಕಳಿಗೆ ಕ್ಲಾಸ್ ತಗೋತಾರಲ್ಲ, ಹಂಗ್ ಲಾಡ್ ಸಾಹೇಬ್ರು ಆಫೀಸರ್‌ಗಳಿಗೆ ಕೆಡಿಪಿ ಸಭೆದಾಗ ಬರೋಬ್ಬರಿ ಕ್ಲಾಸ್‌ ತಗೊಂಡ್ರು. ಒಂದರ ಮ್ಯಾಲ ಒಂದ ಪ್ರಶ್ನೆ ಹಾಕಿಬಾಯಿ ಮುಚ್ಚಿಸಿ ಬಿಟ್ರು. ಉತ್ತರಾ ಹೇಳಾಕ ಹೋದ್ರು ಬಿಡದೇ ಭರ್ಜರಿಯಾಗಿ ಅಟ್ಯಾಕ್ ಮಾಡಿದರು. ಕೆಡಿಪಿ ಸಭೆಯಲ್ಲಂತೂ ಎರಡೂರು ಇಲಾಖೆ ಆಫೀಸರ್‌ಗಳು ಲಾಡ್ ಅವರ ಪ್ರಶ್ನೆಗಳಿಗೆ ಉತ್ತರಾ ಕೊಡಾಕಾಗದ ಒದ್ದಾಡಿ ಹೋದರು. 

ಸಭೆಗೆ ಬರೋ ಮುಂಚೆ ಮಾಹಿತಿ ತಿಳಿಕೊಂಡ ಬರ್ರಿ. ಎರಡೂರು ವರ್ಷದ ಅಂಕಿ-ಸಂಖ್ಯೆ ತರ್ರಿ ಅಂತ ಎಷ್ಟೋ ಬಾರಿ ಹೇಳಿದರೂ ಕೇಳೋದಿಲ್ಲ, ಪಿಕ್‌ನಿಕ್‌ಗೆ ಬಂದಂಗ್ ಸಭೆಗೆ ಬರತೀರಿ. ಏನಾದ್ರೂ ಕೇಳಿದ್ರ ತಲಿ ಕೆಳಗ ಹಾಕ್ಕೊಂಡ ನಿಂದರತೀರಿ. ಹಿಂಗಾದರ ಆಡಳಿತಾ ಹೆಂಗ್ ಮಾಡೋದು. ಜನಾ ಕೇಳಿದ್ರ ನಾವೇನು ಉತ್ತರಾ ಕೊಡಬೇಕ್...! ಅಂತೆಲ್ಲಾ ಜಾಡಿಸಿದರು. ಒಂದ ಮುಂಜಾನೆ ಶುರುವಾದ ಸಭೆ ಸಂಜೆ ನಾಲ್ಕಾದರೂ ಮುಗಿ ವಾಲ್ಲು. ಎಲ್ಲಾರದು ಹೊಟ್ಟರ ಹಸತೈತಿ. ನಾವರ ಶ್ಯುಗರ ಪೇಶೆಂಟ್ ಅದೇವಿ. ಹೊರಗೆ ಹೋಗಾಕು ಆಗವಾಲ್ವು ಇರಾಕು ಆಗವಾಲ್ಲು. ಎಲ್ಲಾ ಕೆಲ್ಸಾ ಮಾಡಿನೂ ಬೇಸಗೊಳೋದು ಯಾಕರ ಬೇಕಾಗೈತಿ. ಸುಮ್ಮ ಟ್ರಾನ್ಸಫರ್ ತುಗೊಂಡ ಬ್ಯಾರೆ ಜಿಲ್ಲೆಕಾದರೂ ಹೋಗಬೇಕು ಅಂತ ವರ್ಗಾವಣೆ ಪ್ರಯತ್ನ ಮಾಡಕತ್ತಾರಂತ!

ಬೊಮ್ಮಾಯಿ ಗೆದ್ದಿದ್ದಕ್ಕೆ ಕಾಂಗ್ರೆಸ್ಸಿಗರು ಹ್ಯಾಪಿ!
ಚುನಾವಣೆಯಲ್ಲಿ ಒಂದು ಪಕ್ಷದ ಅಭ್ಯರ್ಥಿ ಸೋತರೆ ಆ ಪಕ್ಷದ ಮುಖಂಡರು, ಕಾರ್ಯಕರ್ತರಲ್ಲಿ ಬೇಸರ ಸಾಮಾನ್ಯ. ಆದರೆ, ಹಾವೇರಿ ಲೋಕಸಭಾ ಕ್ಷೇತ್ರದ ಫಲಿತಾಂಶ ಬಂದು ಬಸವರಾಜ ಬೊಮ್ಮಾಯಿ ಗೆಲುವು ಸಾಧಿಸುತ್ತಿದ್ದಂತೆ ಶಿಗ್ಗಾಂವಿಯ ಕಾಂಗ್ರೆಸ್ ಮುಖಂಡರಲ್ಲಿ ಹೊಸ ಹುರುಪು ಬಂದಿದೆ. ಶಿಗ್ಗಾಂವಿ ಕ್ಷೇತ್ರಕ್ಕೆ 6 ತಿಂಗಳೊಳಗೆ ನಡೆಯುವ ಬೈ ಎಲೆಕ್ಷನ್. ಹಾವೇರಿ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಬೇಕು ಎಂದು ಬೇಡಿಕೊಂಡಿದ್ದೆವು ಎಂದು ಬಹಿರಂಗವಾಗಿಯೇ ಕಾಂಗ್ರೆಸ್‌ನ ಕೆಲ ಮುಖಂಡರು ಹೇಳಿಕೊಂಡಿದ್ದಾರೆ. 

‘ಪಿಎಂ ಕುಸುಮ್‌’ ಯೋಜನೆಯಲ್ಲಿ ಬೆಳಗಾವಿ ಜಿಲ್ಲೆ ನಂ.1: ರಾಜ್ಯದಲ್ಲಿ 18,000 ರೈತರಿಂದ ಅರ್ಜಿ ಸಲ್ಲಿಕೆ

ಬಸವರಾಜ ಬೊಮ್ಮಾಯಿ ಸಂಸದರಾಗಿ ಅತ್ತ ಹೋದರೆ ಇತ್ತ ಶಿಗ್ಗಾಂವಿ ಬೈ ಎಲೆಕ್ಷನ್‌ನಲ್ಲಿ ತಮಗೆ ಪೈಪೋಟಿ ನೀಡುವಂತಹ ನಾಯಕರು ಯಾರೂ ಇಲ್ಲ ಎಂಬುದು ಕೈ ಮುಖಂಡರ ಹರ್ಷಕ್ಕೆ ಕಾರಣವಂತೆ. ಶಾಸಕ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡುತ್ತಿ ದ್ದಂತೆ ಕಾಂಗ್ರೆಸ್ ಮುಖಂಡರ ಓಡಾಟ ಜೋರಾಗಿದೆ. ಅವರಲ್ಲಿ ಕೆಲವರಂತೂ ತಮಗೇ ಟಿಕೆಟ್ ಫಿಕ್ಸ್ ಎಂದು ಓಡಾಡಿಕೊಂಡಿದ್ದಾರೆ. ಪೈಪೋಟಿಯಾವಮಟ್ಟಿಗೆ ಇದೆಯೆಂದರೆ ಇರುವನಾಲ್ಕುಮತ್ತೊಂದು ಆಕಾಂಕ್ಷಿಗಳಲ್ಲೇ ಬಣ ರಾಜಕಾರಣ ಆರಂಭವಾಗಿದೆಯಂತೆ!

*ಮಂಜುನಾಥ ಕೆ.ಎಂ. ಬಳ್ಳಾರಿ, ಬಸವರಾಜ ಹಿರೇಮಠ, ನಾರಾಯಣ ಹೆಗಡೆ

Latest Videos
Follow Us:
Download App:
  • android
  • ios