ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ -  ಶಾಸಕ ರೇಣುಕಾಚಾರ್ಯ   ನಳೀನ್ ಕುಮಾರ್ ಕಟೀಲ್ ಹೆಸರಿನಲ್ಲಿ ಫೇಕ್ ಆಡಿಯೋ ಸೃಷ್ಠಿ ಮಾಡಲಾಗಿದೆ.  ಯಾರೋ ಹೇಳಿದಾಕ್ಷಣ ನಾಯಕತ್ವ ಬದಲಾವಣೆ ಅಸಾಧ್ಯ

ಚಿತ್ರದುರ್ಗ (ಜು.20): ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿದರು. 

ಚಿತ್ರದುರ್ಗದಲ್ಲಿಂದು ಮಾತನಾಡಿದ ಬಿಜೆಪಿ ಶಾಸಕ ರೆಣುಕಾಚಾರ್ಯ ಹೈಕಮಾಂಡ್, ರಾಜ್ಯದ್ಯಕ್ಷರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ನಳೀನ್ ಕುಮಾರ್ ಕಟೀಲ್ ಹೆಸರಿನಲ್ಲಿ ಫೇಕ್ ಆಡಿಯೋ ಸೃಷ್ಠಿ ಮಾಡಲಾಗಿದೆ. ನಾನು ಕಟೀಲ್ ಅವರಿಗೆ ಕರೆ ಮಾಡಿ ಈ ಬಗ್ಗೆ ಕೇಳಿದ್ದೇನೆ. ಕಟೀಲ್ ಅವರಿಗೆ ಕೆಟ್ಟ ಹೆಸರು ತರಲು ಫೇಕ್ ಆಡಿಯೋ ಸೃಷ್ಠಿ ಮಾಡಲಾಗಿದೆ ಎಂದರು.

ರಾಷ್ಟ್ರೀಯ ನಾಯಕರು ಬಿಎಸ್ ವೈ ಸಂಬಂಧ ಹಳೆಯದು. ಇವರು ಯಾರೋ ಹೇಳಿದಾಕ್ಷಣ ನಾಯಕತ್ವ ಬದಲಾವಣೆ ಅಸಾಧ್ಯ. ಬಿಎಸ್ ವೈ ನೂರಾರು ಪಾದಯಾತ್ರೆ, ಸಾವಿರಾರು ಹೋರಾಟ ಮಾಡಿದ್ದಾರೆ. ಬಿಎಸ್ ವೈ ಅದೆಷ್ಟು ಬಾರಿ ಜೈಲಿಗೆ ಹೋಗಿದ್ದಾರೆ. ಅವರ ಸೇವೆಯ ಬಗ್ಗೆ ಎಲ್ಲರಿಗೂ ತಿಳಿದಿದೆ ಎಂದರು. 

ಸಿಎಂ ಬದಲಾವಣೆ ಕೂಗಿನ ನಡುವೆ ಮಿತ್ರ ಮಂಡಳಿ ಫುಲ್ ಅಲರ್ಟ್!

ಇನ್ನು ಸಚಿವ ನಿರಾಣಿ ಬಗ್ಗೆ ಮಾತನಾಡಿದ ರೇಣುಕಾಚಾರ್ಯ ಅವರೊಬ್ಬ ಕೈಗಾರಿಕೋದ್ಯಮಿ, ಬಿಸಿನೆಸ್ ಗಾಗಿ ದೆಹಲಿಗೆ ಹೋಗಿರಬಹುದು. ದೆಹಲಿಗೆ ಹೋದಾಕ್ಷಣ ರಾಜಕಾರಣಕ್ಕೆ ಎನ್ನಲಾಗದು. ನಾನು ನಾಳೆ ನಾಡಿದ್ದು ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕಾಗಿ ದೆಹಲಿಗೆ ಹೋಗುತ್ತೇನೆ. ದೆಹಲಿಗೆ ಹೋದಾಕ್ಷಣ ರಾಷ್ಟ್ರೀಯ ನಾಯಕರು ಸಮಯ ನೀಡಿ ಮಾತನಾಡಿಸುತ್ತಾರೆ ಎಂಬುದು ಸುಳ್ಳು ಎಂದರು.

ಇನ್ನು ಸಹಿ ಸಂಗ್ರಹದ ಬಗ್ಗೆಯು ಮಾತನಾಡಿದ ರೇಣುಕಾಚಾರ್ಯ ಬಿಎಸ್ ವೈ ಪರ 65ಜನ ಶಾಸಕರ ಸಹಿ ಸಂಗ್ರಹಿಸಿದ್ದು ಸತ್ಯ. ಹೈಕಮಾಂಡ್ ಸೂಚನೆ ಮೇರೆಗೆ ಅದನ್ನು ಅಲ್ಲಿಗೆ ನಿಲ್ಲಿಸಿದ್ದೇನೆ. ಹೈಕಮಾಂಡ್ ಈವರೆಗೆ ಯಾವುದೇ ಸೂಚನೆ ನೀಡಿಲ್ಲ. ಕೂಸು ಹುಟ್ಟುವುದಕ್ಕೂ ಮೊದಲು ಕುಲಾಯಿ ಒಲಿಸುವುದೇಕೆ ಎಂದು ರೇಣುಕಾಚಾರ್ಯ ಹೇಳಿದರು.