ಬೆಂಗಳೂರು (ನ.05): ಸಿಎಂ ಬಿಎಸ್‌ ವೈ ಪುತ್ರ ವಿಜಯೇಂದ್ರ ಬಸವಕಲ್ಯಾಣದಿಂದ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತರು, ಮುಖಂಡರು ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ವಿಜಯೇಂದ್ರ ಸ್ಪರ್ಧೆ ಮಾಡೋ ಬಗ್ಗೆ ಎಲ್ಲೂ ಹೇಳಿಲ್ಲ. ಯುವ ನಾಯಕರಾಗಿ ವಿಜಯೇಂದ್ರ ಬೆಳೆಯುತ್ತಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದ್ದಾರೆ.  

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ರೇಣುಕಾಚಾರ್ಯ  ಪಕ್ಷ ತೀರ್ಮಾನ ಮಾಡಿದರೆ ಸ್ಪರ್ಧೆ ಮಾಡಬಹುದು, ಹೇಳಲು ಆಗುವುದಿಲ್ಲ. ಸ್ಪರ್ಧೆ ಮಾಡಿದರೆ ಗೆಲ್ಲುವುದು ಮಾತ್ರ ಖಚಿತ. ಅವರು ಸ್ಪರ್ಧೆ ಮಾಡಲಿ ಅಂತ ಹೇಳೋ ಅಧಿಕಾರ ನನಗೆ ಇಲ್ಲ ಎಂದರು. 

ಬಿಜೆಪಿಯೇ 2 ಸೀಟು ಗೆಲ್ಲಲಿದೆ : ಗುಪ್ತಚರ ಇಲಾಖೆಯಿಂದ ಮಾಹಿತಿ ...

ಬಸವಕಲ್ಯಾಣದಿಂದ ಸ್ಪರ್ಧೆಸಿದ್ರೆ ನೂರಕ್ಕೆ ನೂರು ಗೆಲ್ಲುತ್ತಾರೆ. ಆದರೆ ವಿಜಯೇಂದ್ರ ಹಾಗೂ ಸಿಎಂಗೆ ಆ ಮನಸ್ಸಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದರು.