ಸಾವರ್ಕರ್‌ರನ್ನು ಹೊಗಳಿ ಅಂಚೆ ಚೀಟಿ ಬಿಡುಗಡೆಗೊಳಿಸಿದ್ದ ಇಂದಿರಾ ಗಾಂಧಿ! ಸದನದಲ್ಲಿ ಕೋಲಾಹಲ ಸೃಷ್ಟಿಸಿದ್ದ ಪತ್ರ ವೈರಲ್
ವೀರ್ ಸಾವರ್ಕರ್ ಅವರನ್ನು ಹಾಡಿ ಹೊಗಳಿದ್ದ ಇಂದಿರಾಗಾಂಧಿ, ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಅಂಚೆ ಚೀಟಿ ಬಿಡುಗಡೆಗೊಳಿಸಿರುವುದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
'ವೀರ್ ಸಾವರ್ಕರ್ ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಅವರು ಭಾರತದ ಹೆಮ್ಮೆಯ ಪುತ್ರ. ಭಾರತದ ಈ ಅದ್ಭುತ ಪುತ್ರನ ಜನ್ಮ ಶತಮಾನೋತ್ಸವವನ್ನು ಆಚರಿಸುವ ಯೋಜನೆಗಳು ಯಶಸ್ವಿಯಾಗಲಿ ಎಂದು ನಾನು ಬಯಸುತ್ತೇನೆ. ಅವರ ಜನ್ಮಶತಮಾನೋತ್ಸವನ್ನು ಅದ್ಧೂರಿಯಾಗಿ ಆಯೋಜಿಸಬೇಕು' ಎಂದು ವೀರ್ ಸಾವರ್ಕರ್ ಅವರನ್ನು ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಹಾಡಿ ಹೊಗಳಿದ ಪತ್ರವೊಂದು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸುತ್ತಿದೆ. 1980ರ ಮೇ 20ರಂದು ಈ ಪತ್ರವನ್ನು ಇಂದಿರಾ ಗಾಂಧಿ ಬರೆದಿದ್ದರು. ಅವರ ಸಹಿ ಇರುವ ಪತ್ರ ಈಗ ವೈರಲ್ ಆಗಿದೆ. ಇಂದಿರಾ ಗಾಂಧಿಯವರ ಅವಧಿಯಲ್ಲಿಯೇ ವೀರ್ ಸಾವರ್ಕರ್ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಅವರ ಭಾವ ಚಿತ್ರ ಇರುವ ಅಂಚೆ ಚೀಟಿಯನ್ನೂ ಬಿಡುಗಡೆಗೊಳಿಸಲಾಗಿತ್ತು. ಈ ಎರಡು ಘಟನೆಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಮಾತ್ರವಲ್ಲದೇ ಸದನದಲ್ಲಿಯೂ ಕೋಲಾಹಲ ಸೃಷ್ಟಿಸಿದೆ.
ಮೊನ್ನೆಯಷ್ಟೇ ಈ ಬಗ್ಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಬಿಜೆಪಿ ನಡುವೆ ಲೋಕಸಭೆಯಲ್ಲಿ ವಾಗ್ವಿವಾದ ನಡೆದಿತ್ತು. ಸದಾ ಕಾಂಗ್ರೆಸ್ ಪಕ್ಷ ವೀರ್ ಸಾವರ್ಕರ್ ಅವರ ವಿರುದ್ಧ ಕಿಡಿ ಕಾರುತ್ತಲೇ ಬಂದಿದೆ. ಆದರೆ ಬಿಜೆಪಿಗರು ಮಾತ್ರ ಸಾವರ್ಕರ್ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೀಡಿರುವ ಕೊಡುಗೆಗಳ ಬಗ್ಗೆ ಮಾತನಾಡುತ್ತಲೇ ಬಂದಿದೆ. ಇದೇ ವಿಷಯ ಲೋಕಸಭೆಯಲ್ಲಿ ಚರ್ಚೆಗೆ ಬಮದಾಗ, ರಾಹುಲ್ ಗಾಂಧಿ ಅವರು, ಮನುಸ್ಮೃತಿಯೇ ಕಾನೂನು ಎಂದು ಪರಿಗಣಿಸಿದ್ದ ವೀರ ಸಾವರ್ಕರ್ ಸಂವಿಧಾನವನ್ನು ಕಡೆಗಣಿಸಿದ್ದರು. ಆದರೆ ಈಗ ನೋಡಿದ್ರೆ ಬಿಜೆಪಿಯವರು ಸಂವಿಧಾನವನ್ನು ಗೌರವಿಸುತ್ತೇವೆ ಎನ್ನುತ್ತಿದ್ದಾರೆ. ಹಾಗಿದ್ದರೆ ಅವರು ವೀರ್ ಸಾವರ್ಕರ್ ಅವರಿಗೆ ಅವಮಾನ ಮಾಡ್ತಿದ್ದಾರೆಯೇ ಎಂದು ಪ್ರಶ್ನಿಸಿದರು.
ಅಮಿತ್ ಶಾ ದೃಷ್ಟಿಯಲ್ಲಿ ರಾಮ ಯಾರು, ರಾವಣ ಯಾರು? ನಟ ವರುಣ್ ಧವನ್ ಪ್ರಶ್ನೆಗೆ ಸಚಿವರ ಉತ್ತರ ಹೀಗಿದೆ...
ಅದಕ್ಕೆ ಬಿಜೆಪಿ ನಾಯಕರು ಇಂದಿರಾಗಾಂಧಿಯವರು ಸಾವರ್ಕರ್ ಅವರನ್ನು ಹಾಡಿ ಹೊಗಳಿರುವ ಪತ್ರವನ್ನು ಮುಂದಿಟ್ಟಿದ್ದಾರೆ. ಹಾಗಿದ್ದರೆ ನಿಮ್ಮ ಅಜ್ಜಿ ಇಂದಿರಾಗಾಂದಿ ಅವರು ಸಂವಿಧಾನ ವಿರೋಧಿಯೇ ಎಂದು ಪ್ರಶ್ನಿಸುತ್ತಲೇ, ಈ ಪತ್ರದ ಬಗ್ಗೆ ಉಲ್ಲೇಖಿಸಿದರು. ಅದರಲ್ಲಿ ಸಾವರ್ಕರ್ ಅವರನ್ನು ಇಂದಿರಾ ಗಾಂಧಿಯವರು ಭಾರತದ ಹೆಮ್ಮೆಯ ಪುತ್ರ ಎಂದಿದ್ದರು. ಸಾವರ್ಕರ್ ವಿರುದ್ಧ ಮಾತನಾಡುವ ಅಭ್ಯಾಸ ಕಾಂಗ್ರೆಸ್ಸಿಗರಿಗೆ ಇದೆ. ನಾವು ಸಾವರ್ಕರ್ ಅವರನ್ನು ಹೊಗಳಲು ಹೆಮ್ಮೆ ಪಡುತ್ತೇವೆ ಎಂದಿದ್ದಾರೆ.
ಇದೇ ವೇಳೆ ಸೋಷಿಯಲ್ ಮೀಡಿಯಾದಲ್ಲಿ ಇಂದಿರಾಗಾಂಧಿಯವರ ಪತ್ರ, ಹಾಗೂ ವೀರ್ ಸಾವರ್ಕರ್ ಅವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ, ಇಂದಿರಾಗಾಂಧಿಯವರು ಅವರ ಭಾವ ಚಿತ್ರ ಇರುವ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿರುವ ಫೋಟೋಗಳು ಸಂಚಲನ ಸೃಷ್ಟಿಸುತ್ತಿವೆ.
ದೇವಸ್ಥಾನದಲ್ಲಿ ಭವಿಷ್ಯ ನುಡಿದು ಆ ಸಂತ ಮಾಯವಾದ: ವಿಚಿತ್ರ ಘಟನೆ ನೆನಪಿಸಿಕೊಂಡ ನಟ ವಿವೇಕ್ ಒಬೆರಾಯ್