'ಬೇಬಿ ಜಾನ್' ಚಿತ್ರದ ಪ್ರಚಾರದಲ್ಲಿರುವ ವರುಣ್ ಧವನ್, ಅಮಿತ್ ಶಾ ಅವರನ್ನು ಭೇಟಿಯಾಗಿ ರಾಮ-ರಾವಣರ ಕುರಿತು ಪ್ರಶ್ನಿಸಿದರು. ಶಾ, ಕರ್ತವ್ಯನಿಷ್ಠೆ ರಾಮನ ಗುಣವೆಂದೂ, ಸ್ವಹಿತಾಸಕ್ತಿ ರಾವಣನ ಗುಣವೆಂದೂ ಉತ್ತರಿಸಿದರು. ವರುಣ್ ಧವನ್ ಅವರ ಚಿತ್ರ ಡಿಸೆಂಬರ್ 25ಕ್ಕೆ ಬಿಡುಗಡೆಯಾಗಲಿದೆ.
ಬಾಲಿವುಡ್ ನಟ, ವರುಣ್ ಧವನ್ ಅವರು, ಸದ್ಯ ತಮ್ಮ ಮುಂಬರುವ ಚಿತ್ರ 'ಬೇಬಿ ಜಾನ್' ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಆದ್ದರಿಂದ ನಟ ಸುದ್ದಿಯಲ್ಲಿ ಇದ್ದಾರೆ. ಇದೇ ವೇಳೆ ವರುಣ್ ಧವನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವರುಣ್ ಧವನ್, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದರು. ಈ ಕಾರ್ಯಕ್ರಮಕ್ಕೆ ಸಚಿವರೂ ಬಂದಿದ್ದರು. ಈ ಸಂದರ್ಭದಲ್ಲಿ ನಟ, ಅಮಿತ್ ಶಾ ಅವರಿಗೆ ‘ರಾಮ ಮತ್ತು ರಾವಣ’ ಈ ಬಗ್ಗೆ ಪ್ರಶ್ನಿಸಿದ್ದಾರೆ. ನಿಮ್ಮ ದೃಷ್ಟಿಯಲ್ಲಿ ರಾಮ ಮತ್ತು ರಾವಣ ಯಾರು, ಅದರ ಕಲ್ಪನೆ ಏನು? ಭಗವಾನ್ ರಾಮ ಮತ್ತು ರಾವಣನ ನಡುವಿನ ದೊಡ್ಡ ವ್ಯತ್ಯಾಸವೇನು? ಎನ್ನುವುದನ್ನು ಕೇಳಿದ್ದಾರೆ. ಇದಕ್ಕೆ ಅಮಿತ್ ಶಾ ಅವರು ಕೊಟ್ಟಿರುವ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ತಮ್ಮದೇ ಆದ ಪರಿಕಲ್ಪನೆಯನ್ನು ಬಿತ್ತುತ್ತಿದ್ದಾರೆ. ಅಮಿತ್ ಶಾ ಅವರ ಮಾತಿಗೆ ತಮ್ಮದೇ ಆದ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ.
ಅಷ್ಟಕ್ಕೂ ಸಚಿವ ಅಮಿತ್ ಶಾ ಅವರು, ಒಂದೇ ವಾಕ್ಯದಲ್ಲಿ ಸಿಂಪಲ್ ಆಗಿ ರಾಮ ಮತ್ತು ರಾವಣನ ನಡುವಿನ ವ್ಯತ್ಯಾಸವನ್ನು ತಿಳಿಸಿದ್ದಾರೆ. ಅದೇನೆಂದರೆ, “ಕೆಲವರು ತಮ್ಮ ಧರ್ಮದ ಮೂಲಕ ತಮ್ಮ ಆಸಕ್ತಿಗಳನ್ನು ಅಂದರೆ ಕರ್ತವ್ಯಗಳನ್ನು ನಿರ್ಧರಿಸುತ್ತಾರೆ. ಅವರು ಆ ಕರ್ತವ್ಯಗಳನ್ನು ಅನುಸರಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಯೋಚನೆ ಮಾಡಿ ಹೆಜ್ಜೆ ಇಡುತ್ತಾರೆ. ಅವರೇ ರಾಮ. ಇನ್ನು, ಕೆಲವರಿಗೆ ಅವರ ಸ್ವಹಿತಾಸಕ್ತಿಗಳೇ ಅವರ ಕರ್ತವ್ಯವಾಗಿರುತ್ತದೆ. ಸ್ವಹಿತಾಸಕ್ತಿಯ ಆಧಾರದ ಮೇಲೆ ಅವರು ತಮ್ಮ ಕೆಲಸಗಳನ್ನು ನಿರ್ಧರಿಸಲಾಗುತ್ತದೆ. ಅವರೇ ರಾವಣ ಎಂದಿರುವ ಅಮಿತ್ ಶಾ, ರಾಮನ ಜೀವನವು ಅವನ ಧರ್ಮವನ್ನು ಆಧರಿಸಿದ್ದರೆ, ರಾವಣನು ತನ್ನ ಸ್ವಂತ ವ್ಯಾಖ್ಯಾನಗಳು ಮತ್ತು ಆಲೋಚನೆಗಳ ಪ್ರಕಾರ ತನ್ನ ಕರ್ತವ್ಯಗಳನ್ನು ಬದಲಾಯಿಸುತ್ತಲೇ ಇರುತ್ತಾನೆ, ಆತನಿಗೆ ಸ್ವಹಿತಾಸಕ್ತಿಗಳೇ ಪ್ರಮುಖವಾಗಿರುತ್ತದೆ ಎಂದಿದ್ದಾರೆ.
ತಪಸ್ಸು ಎಂದ್ರೆ ದೇಹದಲ್ಲಿ ಶಾಖ ಉತ್ಪತ್ತಿಯಾಗೋದು ಎನ್ನುತ್ತಲೇ ಏಕಲವ್ಯನ ಕಥೆ ಹೇಳಿ ಸದನದಲ್ಲಿ ರಾಹುಲ್ ಕೋಲಾಹಲ!
ಈ ಮಾತನ್ನು ಕೇಳಿದ ತಕ್ಷಣ ವರುಣ್ ಧವನ್ ಅವರು, ನಿಮ್ಮ ಮಾತು ಕೇಳುತ್ತಿದ್ದರೆ, ನನಗೆ ಇಬ್ಬರ ನಡುವಿನ ಅಹಂಕಾರದ ಮಾತು ನೆನಪಿಗೆ ಬಂತು. ರಾವಣನಿಗೆ ಜ್ಞಾನದ ಅಹಂ ಮತ್ತು ಭಗವಾನ್ ರಾಮನಿಗೆ ಅಹಂಕಾರದ ಜ್ಞಾನವಿದೆ ಎಂಬ ವಿಷಯವದು ಎಂದು ಹೇಳಿದರು. ಅಲ್ಲದೇ, ಅಮಿತ್ ಶಾ ಅವರನ್ನು ವರಣ್ ಧವನ್, "ಜನರು ನಿಮ್ಮನ್ನು ರಾಜಕೀಯದಲ್ಲಿ ಚಾಣಕ್ಯ ಎಂದು ಕರೆಯುತ್ತಾರೆ, ಆದರೆ ನಾನು ಅವರನ್ನು ನಮ್ಮ ದೇಶದ ಹನುಮಂತ ಎಂದು ಕರೆಯಲು ಬಯಸುತ್ತೇನೆ, ಅವರು ರಾಷ್ಟ್ರಕ್ಕೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಾರೆ ಎಂದು ಶ್ಲಾಘಿಸಿದರು. ಇದರ ವಿಡಿಯೋ ಅನ್ನು ವರುಣ್ ಧವನ್ ಶೇರ್ ಮಾಡಿಕೊಂಡಿದ್ದು, ರಾಮ ಮತ್ತು ರಾವಣನ ಕಲ್ಪನೆಯ ಬಗ್ಗೆ ನೆಟ್ಟಿಗರು ಥಹರೇವಾರಿ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ. ತಮ್ಮ ಕಲ್ಪನೆಯಲ್ಲಿ ರಾಮ ಯಾರು, ರಾವಣ ಯಾರು ಎಂದೂ ಹೇಳುತ್ತಿದ್ದಾರೆ.
ಇನ್ನು ವರುಣ್ ಧವನ್ ಅವರ ಚಿತ್ರದ ವಿಷಯಕ್ಕೆ ಬರುವುದಾದರೆ, ಅವರು ಸದ್ಯ ಬೇಬಿ ಜಾನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮಿಳಿನ ತೇರಿ ಚಿತ್ರದ ಹಿಂದಿ ರೂಪಾಂತರವಾಗಿರುವ ಈ ಚಿತ್ರವು ಕ್ರಿಸ್ಮಸ್ ಅಂದ್ರೆ ಡಿಸೆಂಬರ್ 25ರಂದು ಬಿಡುಗಡೆಯಾಗಲಿದೆ. ವರುಣ್ ಚಿತ್ರದಲ್ಲಿ ಕೀರ್ತಿ ಸುರೇಶ್ ಮತ್ತು ವಾಮಿಕಾ ಗಬ್ಬಿ ಜೊತೆ ತೆರೆ ಹಂಚಿಕೊಂಡಿದ್ದಾರೆ. ಕಲೀಸ್ ನಿರ್ದೇಶಿಸಿದ, ಬೇಬಿ ಜಾನ್ ಅನ್ನು ಜವಾನ್‌ನ ಹಿಂದಿನ ವ್ಯಕ್ತಿ ಅಟ್ಲೀ ಪ್ರಸ್ತುತಪಡಿಸಿದ್ದಾರೆ.
ಎರಡು ಮಕ್ಕಳ ತಂದೆ ಅಂಕಲ್ ಮೇಲ್ಯಾಕೆ ಯಂಗ್ ಶ್ರೇಷ್ಠಾಗೆ ಲವ್ ಅಂತ ಕೇಳಿದ್ರೆ ಹೀಗಾ ಉತ್ತರಿಸೋದು?
