ಯಾವ ಧರ್ಮದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಇಲ್ಲವೋ, ಯಾವ ಧರ್ಮದಲ್ಲಿ ಮನುಷ್ಯರ ನಡುವೆ ಭೇದ-ಭಾವ ಇರುತ್ತದೆಯೋ ಅದು ಧರ್ಮವೇ ಅಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ಬೆಂಗಳೂರು (ಸೆ.05): ಯಾವ ಧರ್ಮದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ಇಲ್ಲವೋ, ಯಾವ ಧರ್ಮದಲ್ಲಿ ಮನುಷ್ಯರ ನಡುವೆ ಭೇದ-ಭಾವ ಇರುತ್ತದೆಯೋ ಅದು ಧರ್ಮವೇ ಅಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ. ಸ್ಟಾಲಿನ್‌ ಪುತ್ರ ಉದಯನಿಧಿ ಸ್ಟಾಲಿನ್‌ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಯಾವ ಸಂದರ್ಭದಲ್ಲಿ ಉದಯನಿಧಿ ಸ್ಟಾಲಿನ್‌ ಈ ಹೇಳಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ಸಂವಿಧಾನವೇ ನಮ್ಮ ಧರ್ಮ, ನಾವೆಲ್ಲರೂ ಸಂವಿಧಾನದ ಅಡಿಯಲ್ಲಿ ಇದ್ದೇವೆ. ಬುದ್ಧ, ಬಸವ ಹಾಕಿಕೊಟ್ಟಿರುವ ಮಾರ್ಗವನ್ನು ಅನುಸರಿಸುತ್ತೇವೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.

ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ಸಿಗರ ಗೂಂಡಾಗಿರಿ ಹೆಚ್ಚಿದೆ: ಇಲ್ಲಿನ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿ ಧನಾರಾಜ್‌ ಮೇಲಿನ ಹಲ್ಲೆ ಹಾಗೂ ಬೆದರಿಕೆ ಘಟನೆ ಉಗ್ರವಾಗಿ ಖಂಡಿಸಿರುವ ಕಲಬುರಗಿ ಬಿಜೆಪಿ ಸಂಸದ ಡಾ. ಉಮೇಶ ಜಾಧವ್‌ ಇಂತಹ ಘಟನೆಗಳು ಕಾಂಗ್ರೆಸ್ ಆಡಳಿತ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಕಲಬುರಗಿಯಲ್ಲಿ ಹೆಚ್ಚಾಗಿ ನಡೆಯುತ್ತಿವೆ. ಕಾಂಗ್ರೆಸ್‌ನ ಜನ, ನೌಕರ ವಿರೋಧಿ ಧೋರಣೆಗೆ ಇವು ಕನ್ನಡಿ ಹಿಡಿಯುತ್ತಿವೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳ ಮೇಲೆ ಹಲ್ಲೆ ಮತ್ತು ಬೆದರಿಕೆ ಹಾಕುವ ಘಟನೆಗಳು, ಪದೇ ಪದೇ ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿದ್ದೆ. 

ಕಾವೇರಿ ನೀರನ್ನು ನೀಡದಂತೆ ಡಿಕೆಶಿ ಅಧಿಕಾರಿಗಳ ಬಾಯಿ ಮುಚ್ಚಿಸಿದ್ದಾರೆ: ದೇವೇಗೌಡ ಆರೋಪ

ಈ ಘಟನೆ ಸಿಸಿ ಟಿವಿಯಲ್ಲಿ ಸೆರೆ ಆಗಿದೆ. ಸಿಸಿಟಿವಿ ಇಲ್ಲದಿದ್ದರೆ ಇಂತಹ ಘಟನೆಗಳು ಸಹ ಬೆಳಕಿಗೆ ಬರುತ್ತಿಲಿಲ್ಲ. ಈ ಕುರಿತು ನಗರ ಪೊಲೀಸ್ ಕಮೀಷನರ್ ಜೊತೆ ಮಾತನಾಡಿದ್ದೇನೆ . ನೀವು ಸಿಸಿಟಿವಿಯ ದೃಶ್ಯಗಳನ್ನು ನೋಡಿ ಕ್ರಮಕೈಗೊಳ್ಳಿ ಎಂದು ಪೊಲೀಸರಿಗೆ ಹೇಳಿುದ್ದೇನೆಂದು ಜಾಧವ್‌ ಹೇಳಿದರು. ಯಾಕೆ ಸಂಸದರಿಗೆ ನಮ್ಮ ಹೆಸರು ಗೊತ್ತಿಲ್ಲವೇನು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳುತ್ತಾರೆ, ಯಾರು ತಪ್ಪು ಮಾಡುತ್ತಾರೆ. ಅವರಿಗೆ ಒದ್ದು ಒಳಗೆ ಹಾಕಿ ಎಂದು ಹೇಳುತ್ತಾರೆ, ಆ ಸಂದೇಶ ಯಾರಿಗೆ ಹೋಗಿದೆ ಎಂದು ತಿಳಿದಿಲ್ಲವೆಂದು ಸಂಸದರು ಕುಟುಕಿದರು.

ಪಾಲಿಕೆ ಹಲ್ಲೆ ಘಟನೆಯ ಗಂಭೀರತೆ ತಿಳಿದುಕೊಂಡು ಸಚಿವರು ಈ ವಿಷಯ ನಾನು ಹೇಳುವ ಮುಂಚೆ ತಪ್ಪಿತಸ್ಥರಿಗೆ ಒಳಗೆ ಹಾಕಬೇಕಿತ್ತು. ಅವಾಗ ನಾವು ಶಬ್ಬಾಶ ಎಂದು ಹೇಳುತ್ತಿದ್ದೇವು, ಯಾವುದೋ ಒಂದು ಬ್ಯಾನರ್ ವಿಚಾರಕ್ಕೆ 5 ಸಾವಿರ ದಂಡ ಕಟ್ಟಿ ಮುಂಜಾನೆಯಿಂದ ಸಂಜೆವರೆಗೆ ಮಂತ್ರಿ ಪ್ರಚಾರ ಪಡೆದರು, ಹೀಗಾದ್ರೆ ಹೇಗೆ ಎಂದರು.

ಕಾವೇರಿ ನೀರು ಬಿಡುವುದು ಕೇಂದ್ರ ಸರ್ಕಾರದ ಕೈಯಲ್ಲಿ ಇದೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ

ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಅವರಿಗೆ ಹುಡುಕಿಕೊಂಡು ಹೋಗಲು ಪೊಲಿಸ್ ಇಲಾಖೆಗೆ ಆಗುತ್ತೆ, ಅದರೇ ಹಲ್ಲೆ ಮಾಡಿದವರಿಗೆ ಸಿಸಿಟಿವಿ ವಿಡಿಯೋ ಇದ್ರೂ ಹಿಡಿಯಲು ಆಗುವುದಿಲ್ಲ, ಅದೇ ಮಣಿಕಂಠ ರಾಠೋಡ ಅವರಿಗೆ ಸ್ನಾನ ಮಾಡುವಾಗಲೇ ಪೊಲೀಸರು ಮನೆ ಹೊಕ್ಕು ಲುಂಗಿ ಮೇಲೆ ಕರೆದುಕೊಂಡು ಬರುತ್ತಾರೆ. ಪಾಲಿಕೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದವರಿಗೆ ಹಾಗೇ ಬಿಟ್ಟು ಬಿಡುತ್ತಾರೆ, ಇದನ್ನು ಗಮನಿಸಿದರೆ ಇವರ ಉದ್ದೇಶ, ಇವರ ಎಲ್ಲಾ ಕಾರ್ಯಕರ್ತರ ಹವಾ ಕಂಟ್ರೋಲ್, ಎಲ್ಲಾ ಕಚೇರಿಗಳಲ್ಲಿ ನಡೆಯಬೇಕು, ಜಂಗಲ್ ರಾಜ್ ಆಗಬೇಕೆಂಬ ಉದ್ದೇಶ ಅವರ ಆಗಿರಬಹುದು ಎಂದು ಸಂಸದ ಡಾ. ಜಾಧವ್‌ ಕಾಂಗ್ರೆಸ್‌ ಹಾಗೂ ಪ್ರಿಯಾಂಕ್‌ ವಿರುದ್ಧ ವಾಗ್ದಾಳಿ ನಡೆಸಿದರು.