ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ರೂಪಿಸಲು ರಾಜ್ಯ ಕಾಂಗ್ರೆಸ್‌ ಸಜ್ಜಾಗಿದ್ದು, ಮಂಗಳವಾರ ಈ ಬಗ್ಗೆ ವಿಶೇಷ ಹಾಡುಗಳನ್ನೇ ಬಿಡುಗಡೆ ಮಾಡಲಿದೆ ಎಂದು ತಿಳಿದುಬಂದಿದೆ. 

ಬೆಂಗಳೂರು (ಸೆ.13): ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ರೂಪಿಸಲು ರಾಜ್ಯ ಕಾಂಗ್ರೆಸ್‌ ಸಜ್ಜಾಗಿದ್ದು, ಮಂಗಳವಾರ ಈ ಬಗ್ಗೆ ವಿಶೇಷ ಹಾಡುಗಳನ್ನೇ ಬಿಡುಗಡೆ ಮಾಡಲಿದೆ ಎಂದು ತಿಳಿದುಬಂದಿದೆ. ‘40 ಪರ್ಸೆಂಟ್‌ ಸರ್ಕಾರ, ಬಿಜೆಪಿ ಎಂದರೆ ಭ್ರಷ್ಟಾಚಾರ’ ಹೆಸರಿನಲ್ಲಿ ಅಭಿಯಾನ ರೂಪಿಸಲಿದೆ. ರಾಜ್ಯ ಸರ್ಕಾರದ ಮೇಲಿನ 40 ಪರ್ಸೆಂಟ್‌ ಭ್ರಷ್ಟಾಚಾರ ಆರೋಪ, ಪಿಎಸ್‌ಐ ನೇಮಕಾತಿ ಅಕ್ರಮ, ಶಿಕ್ಷಣ ಇಲಾಖೆಯಲ್ಲಿನ ಅಕ್ರಮ ಸೇರಿದಂತೆ ಬಿಜೆಪಿ ಮೇಲಿನ ಸಾಲು-ಸಾಲು ಭ್ರಷ್ಟಾಚಾರದ ಆರೋಪಗಳನ್ನು ಇಟ್ಟುಕೊಂಡೇ ಸಾಹಿತ್ಯ ರಚನೆ ಮಾಡಿ ಹಾಡುಗಳನ್ನು ಸಿದ್ಧಪಡಿಸಲಾಗಿದೆ.

ಈ ಹಾಡುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಜತೆಗೆ ರಾಜ್ಯ ಸರ್ಕಾರಕ್ಕೆ ಭ್ರಷ್ಟಾಚಾರದ ಬಗ್ಗೆ ಪ್ರಶ್ನೆಗಳನ್ನು ಕೇಳುವ ಮೂಲಕ ವಿಶೇಷ ಅಭಿಯಾನ ನಡೆಸಲಿದೆ. ಪಿಎಸ್‌ಐ ಅಕ್ರಮ, 40 ಪರ್ಸೆಂಟೇಜ್‌ ಕಮಿಷನ್‌ ಸೇರಿದಂತೆ ತಮ್ಮ ಮೇಲಿನ ಭ್ರಷ್ಟಾಚಾರಗಳ ಬಗ್ಗೆ ಏಕೆ ತನಿಖೆಗೆ ವಹಿಸುತ್ತಿಲ್ಲ ಎಂದು ಪ್ರಶ್ನಿಸಲಿದೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನ ಸಂಕಷ್ಟಗಳಿಗೆ 'ಭ್ರಷ್ಟರಾಮಯ್ಯ' ಕಾರಣ: ಸಿದ್ದುಗೆ ಬಿಜೆಪಿ ಗುದ್ದು

ದೇಶದಲ್ಲಿ ಬಿಜೆಪಿ ಆಡಳಿತ ಕಿತ್ತೊಗೆಯುವ ಕೆಲಸವಾಗಲಿ: ಬಿಜೆಪಿ ಅವರಿಗೆ ಸುಳ್ಳನ್ನು ನಿಜ ಮಾಡುವುದು, ನಿಜವನ್ನು ಸುಳ್ಳು ಮಾಡುವುದು ಬಿಟ್ಟರೆ ಬೇರೆ ಏನು ಗೊತ್ತಿಲ್ಲ. ಬಿಜೆಪಿ ಪಕ್ಷಕ್ಕೆ ಚುನಾವಣೆ ಹೇಗೆ ಮಾಡುವುದು, ಸೋತರೆ ಹೇಗೆ ಗೆದ್ದವರನ್ನು ಖರೀದಿ ಮಾಡುವುದು ಎನ್ನುವುದೇ ಚಿಂತೆ ಹೊರತು ದೇಶದ ಅಭಿವೃದ್ಧಿಯ ಚಿಂತೆ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ನವನಗರದ ಕಲಾ ಭವನದಲ್ಲಿ ಕಾಂಗ್ರೆಸ್‌ ಪಕ್ಷ ಹಮ್ಮಿಕೊಂಡಿದ್ದ ದಲಿತ ಚಿಂತಕ ಪರಶುರಾಮ ಮಹಾರಾಜನವರ ಹಾಗೂ ಬೆಂಬಲಿಗರು ಕಾಂಗ್ರೆಸ್‌ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರ ಆಡಳಿತಕ್ಕೆ ಬಂದಾಗ ಶೋಷಣೆಗೊಳಪಟ್ಟವರನ್ನು, ಬಡ ಜನರನ್ನು ಹಾಗೂ ಅವರ ಮಕ್ಕಳನ್ನು ಮುಂದೆ ತರುವ ಕೆಲಸ ಮಾಡುತ್ತದೆ ಎಂದು ನಂಬಿದ್ದೇವು. ಆದರೆ, ಅವರು ತಮಗೆ ಬೇಕಾದವರನ್ನು ಶ್ರೀಮಂತರನ್ನಾಗಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ದೇಶದಲ್ಲಿ ದಲಿತರು ಬಡವರಾಗಿಯೇ ಉಳಿಯುವಂತಾಗಿದೆ. ದೇಶದಲ್ಲಿ ಬದಲಾವಣೆ ಅವಶ್ಯಕತೆ ಇದೆ ಎಂದು ತಿಳಿಸಿದರು.

ಬಿಜೆಪಿ ಸರ್ಕಾರದ ದುರಾಡಳಿತದಿಂದ ದೇಶದ ಜಿಡಿಪಿ ಕುಸಿದು ಹೋಗಿದೆ. ಜನರು ನೌಕರಿಗಳನ್ನು ಕಳೆದುಕೊಳ್ಳುವಂತಾಗಿದೆ. ಮೋದಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಜನರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ ಅ​ಧಿಕಾರ ಚಲಾಯಿಸುತ್ತಿದ್ದಾರೆ. ದೇಶದಲ್ಲಿ ಬಿಜೆಪಿಯು ಶಿಕ್ಷಣದಲ್ಲಿ ಹೊಸ ನೀತಿ ತಂದಿದೆ. ಇದರಿಂದ ಬಡ ಮಕ್ಕಳು ಗ್ರ್ಯಾಜುವೇಟ್‌ಗಳಾಗದಂತೆ ಮಾಡುತ್ತಿದ್ದಾರೆ. ಈ ಹೊಸ ನೀತಿಯ ಬಗ್ಗೆ ಅಧ್ಯಯನ ಮಾಡಬೇಕಾಗಿದೆ ಎಂದರು.

ಮಾಜಿ ಸಚಿವ ಎಚ್‌.ವೈ.ಮೇಟಿ ಮಾತನಾಡಿ, ಬಿಜೆಪ ಪಕ್ಷ 70 ವರ್ಷದಿಂದ ಕಾಂಗ್ರೆಸ್‌ ಪಕ್ಷ ಏನು ಮಾಡಿಲ್ಲ ಎಂದು ಹೇಳುತ್ತಿದೆ. ದೇಶದ ಅಭಿವೃದ್ಧಿಗೆ ತಳಪಾಯ ಊರಿದ್ದೆ ಕಾಂಗ್ರೆಸ್‌ ಪಕ್ಷ ಎನ್ನುವುದು ಮರೆತಿದೆ. ದೇಶದಲ್ಲಿ ಶೇ.90 ರಷ್ಟುಮನೆಯಲ್ಲಿ ಅಕ್ಕಿ ತಂದು ಊಟ ಮಾಡುವಂತಾಗಿದೆ ಎಂದರೆ ಅದು ಸಿದ್ದರಾಮಯ್ಯ ಆಡಳಿತರ ಕಾಂಗ್ರೆಸ್‌ ಸರ್ಕಾರದಿಂದಲೇ ಬಿಜೆಪಿಯ ಸೂಳ್ಳು ಮಾತುಗಳಿಗೆ ಕಿವಿಗೊಡದೆ ಕಾಂಗ್ರೆಸ್‌ ಪಕ್ಷದ ಗೆಲುವಿಗಾಗಿ ಶ್ರಮಿಸುವ ಮೂಲಕ ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್‌ ಆಡಳಿತ ಬರುವ ಹಾಗೆ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.

ರಾಹುಲ್‌ ಪಾದಯಾತ್ರೆ ಬಳ್ಳಾರಿ ಪ್ರವೇಶಿಸಿದಾಗ ಬೃಹತ್‌ ರ‍್ಯಾಲಿ: ಡಿಕೆಶಿ

ಪರಶುರಾಮ ಮಹಾರಾಜನ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯ ನಂತರ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ ಪಕ್ಷ ಆಡಳಿತಕ್ಕೆ ಬಂದಿದ್ದು, ತಮ್ಮ ಶಕ್ತಿಯಿಂದಲ್ಲ. ಸೆಕ್ಯೂಲರ್‌ ಪಾರ್ಟಿಗಳಿಂದ 2014 ರಿಂದ ಧಾರ್ಮಿಕ ತಾರತಮ್ಯ ಜಾಸ್ತಿ ಆಗುತ್ತಿದೆ. 2016 ರಿಂದ ಬಹುತ್ವದಿಂದ ಏಕತ್ವದ ಕಡೆ ಸಾಗುತ್ತಿದೆ. ರಾಜಕಾರಣಿಗಳಿಗೆ ಧರ್ಮ ಇರಬಾರದು. ಧರ್ಮ ಸೇರಿದರೆ ದೇಶ ಸರ್ವನಾಶವಾಗುತ್ತದೆ. ಕೋಮ ದೇಶವಾಗುತ್ತದೆ. ಕೋಮು ಹಾಗೂ ದ್ವೇಶದ ಆಡಳಿತದಿಂದ ಈ ದೇಶದ ಪರಂಪರೆ ನಾಶವಾಗುತ್ತದೆ ಎಂದರು.