Karnataka election: ಬಿಜೆಪಿಯವರು ಜನರ ಹಣವನ್ನು ದೋಚುವ ದರೋಡೆಕೋರರು: ಎಚ್‌ಡಿಕೆ ವಾಗ್ದಾಳಿ

ಬಡವರು, ಬಡವರಾಗಿಯೇ ಇರಬೇಕು ಎಂಬುದು ಬಿಜೆಪಿ, ಕಾಂಗ್ರೆಸ್‌ ಪಕ್ಷಗಳ ಒಂದಂಶದ ಅಜೆಂಡಾ. ಎರಡು ರಾಷ್ಟ್ರೀಯ ಪಕ್ಷಗಳಿಗೆ ಜನಹಿತ ಬೇಕಿಲ್ಲ. ಜನರ ಹಣವನ್ನು ಕೊಳ್ಳೆ ಹೊಡೆಯುವುದೇ ಕಾಯಕವಾಗಿದೆ ಎಂದು ಎಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

Reject BJP  Congress who loot peoples money JDS Support says HDK at bengaluru rav

ಪೀಣ್ಯ ದಾಸರಹಳ್ಳಿ (ಮಾ.6): ಕೊಳ್ಳೆ ಹೊಡೆದಿರುವ ಹಣವನ್ನು ಹಂಚಿ ಚುನಾವಣೆ ಗೆಲ್ಲಲು ಹವಣಿಸುತ್ತಿರುವ ಬಿಜೆಪಿ, ಕಾಂಗ್ರೆಸ್‌ ಪಕ್ಷಗಳನ್ನು ತಿರಸ್ಕರಿಸಿ ಜನ ಕಲ್ಯಾಣವನ್ನೇ ಉಸಿರಾಗಿಸಿಕೊಂಡಿರುವ ಜೆಡಿಎಸ್‌ ಪಕ್ಷವನ್ನು ಬೆಂಬಲಿಸಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮನವಿ ಮಾಡಿದರು.

ಹೆಗ್ಗನಹಳ್ಳಿ ಕ್ರಾಸ್‌(Hegganahalli cross)ನ ಓಂಶಕ್ತಿ ದೇವಸ್ಥಾನ ರಸ್ತೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷ ಲೋಕೇಶ್‌ಗೌಡ, ರಂಗಣ್ಣ, ಕೆಂಪೇಗೌಡ ಸೇರಿ ಸುಂಕದಕಟ್ಟೆಹಾಗೂ ಹೆಗ್ಗನಹಳ್ಳಿ ವಾರ್ಡ್‌ಗಳ ಕಾಂಗ್ರೆಸ್‌ ಬಿಜೆಪಿ, ಮುಖಂಡರು ಕಾರ್ಯಕರ್ತರನ್ನು ಜೆಡಿಎಸ್‌ಗೆ ಸೇರ್ಪಡೆ ಮಾಡಿಕೊಂಡರು. ಬಳಿಕ ಹೆಗ್ಗನಹಳ್ಳಿಯಲ್ಲಿ ಜೆಡಿಎಸ್‌ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.

 

ಈ ಬಾರಿ ಎಚ್‌.ಡಿ. ಕುಮಾರಸ್ವಾಮಿ ಸರ್ಕಾರ ಖಚಿತ : ದೇವೇಗೌಡ ಭವಿಷ್ಯ

ಬಡವರು, ಬಡವರಾಗಿಯೇ ಇರಬೇಕು ಎಂಬುದು ಬಿಜೆಪಿ, ಕಾಂಗ್ರೆಸ್‌ ಪಕ್ಷಗಳ ಒಂದಂಶದ ಅಜೆಂಡಾ. ಎರಡು ರಾಷ್ಟ್ರೀಯ ಪಕ್ಷಗಳಿಗೆ ಜನಹಿತ ಬೇಕಿಲ್ಲ. ಜನರ ಹಣವನ್ನು ಕೊಳ್ಳೆ ಹೊಡೆಯುವುದೇ ಕಾಯಕವಾಗಿದೆ ಎಂದು ವಾಗ್ದಾಳಿ ನಡೆಸಿದರು.

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಅವರು ಕಳ್ಳ ಮಳ್ಳರಂತೆ’ ಎಂಬ ಕಂದಾಯ ಸಚಿವ ಅಶೋಕ್‌(R Ashok) ಆರೋಪಕ್ಕೆ ತಿರುಗೇಟು ನೀಡಿದ ಎಚ್‌ಡಿಕೆ, ಬಿಜೆಪಿಗರೇ ದರೋಡೆಕೋರರು. ಬಿಜೆಪಿ ಶಾಸಕನ ಮನೆಯಲ್ಲಿ .8 ಕೋಟಿಯನ್ನು ಲೋಕಾಯುಕ್ತರು ವಶಪಡಿಸಿಕೊಂಡಿರುವುದು ಇದಕ್ಕೆ ಸಾಕ್ಷಿ ಎಂದರು.

ನನಗೆ ಟೋಪಿ ಹಾಕಿದವರು ಶೀಘ್ರ ಕಾಂಗ್ರೆಸ್‌ಗೆ: ಎಚ್‌.ಡಿ.ಕುಮಾರಸ್ವಾಮಿ

ಶಾಸಕ ಆರ್‌.ಮಂಜುನಾಥ್‌, ರಾಜ್ಯ ಜೆಡಿಎಸ್‌ ಉಪಾಧ್ಯಕ್ಷ ಅಂದಾನಪ್ಪ, ಕ್ಷೇತ್ರ ಜೆಡಿಎಸ್‌ ಅಧ್ಯಕ್ಷ ಮುನಿಸ್ವಾಮಿ, ಮುಖಂಡರಾದ ಕೆ.ಸಿ.ವೆಂಕಟೇಶ್‌, ಜಯರಾಮ… ನರಸಿಂಹ, ಬಿ.ಎನ್‌.ಜಗದೀಶ್‌, ಅರ್‌.ಕೆ.ಕುಮಾರ್‌, ಮಲ್ಲೇಶ್‌ಗೌಡ, ರಾಮಾಂಜಿನಪ್ಪ ಇದ್ದರು.

Latest Videos
Follow Us:
Download App:
  • android
  • ios