ನಾಯಕರ ಮನವೊಲಿಕೆ ಯತ್ನ ವಿಫಲ, ನಾಮಪತ್ರ ಹಿಂಪಡೆಯದೆ ಪಕ್ಷಗಳ ಅಧಿಕೃತ ಅಭ್ಯರ್ಥಿಗಳಿಗೆ ಸಜ್ಜು

ಬೆಂಗಳೂರು(ಏ.25): ನಾಮಪತ್ರ ವಾಪಸ್‌ ಪಡೆಯಲು ಸೋಮವಾರ ಕಡೆಯ ದಿನವಾಗಿದ್ದು, ರಾಜ್ಯದ ಕೆಲವೆಡೆ ಬಂಡಾಯ ಅಭ್ಯರ್ಥಿಗಳು ಕಣದಲ್ಲಿ ಮುಂದುವರಿದಿದ್ದಾರೆ. ಪುತ್ತೂರಲ್ಲಿ ಅರುಣ್‌ ಪುತ್ತಿಲ, ಹೊಸದುರ್ಗದಲ್ಲಿ ಗೂಳಿಹಟ್ಟಿಶೇಖರ್‌, ಬಾಗಲಕೋಟೆಯಲ್ಲಿ ಮಲ್ಲಿಕಾರ್ಜುನ ಚರಂತಿಮಠ, ಚನ್ನಗಿರಿಯಲ್ಲಿ ಮಾಡಾಳ್‌ ಮಲ್ಲಿಕಾರ್ಜುನ, ಕುಂದಗೋಳದಲ್ಲಿ ಎಸ್‌.ಐ.ಚಿಕ್ಕನಗೌಡರ ಅವರು ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿ ಕಣದಲ್ಲಿ ಉಳಿದಿದ್ದಾರೆ.

ಇದೇ ವೇಳೆ, ಚಿತ್ರದುರ್ಗದಲ್ಲಿ ಸೌಭಾಗ್ಯ ಬಸವರಾಜನ್‌, ಚಿಕ್ಕಪೇಟೆಯಲ್ಲಿ ಯೂಸುಫ್‌ ಷರೀಫ್‌ (ಕೆಜಿಎಫ್‌ ಬಾಬು) ಅವರು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಗಳಾಗಿ, ಮಂಡ್ಯದಲ್ಲಿ ಕೆ.ಎಸ್‌.ವಿಜಯಾನಂದ ಅವರು ಜೆಡಿಎಸ್‌ ಬಂಡಾಯ ಅಭ್ಯರ್ಥಿಗಳಾಗಿ ಕಣದಲ್ಲಿ ಉಳಿದಿದ್ದಾರೆ.

ರಮೇಶ್‌ ಜಾರಕಿಹೊಳಿ ಕ್ಷೇತ್ರದಲ್ಲಿ ಸಂಚಲನ: ನಾಮಪತ್ರ ವಾಪಸ್ ಪಡೆದ ಜೆಡಿಎಸ್ ಅಭ್ಯರ್ಥಿ

ನಾಮಪತ್ರ ಹಿಂದಕ್ಕೆ ಪಡೆಯಲು ಸೋಮವಾರ ಕಡೆಯ ದಿನವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸೇರಿ ಮೂರೂ ಪಕ್ಷಗಳ ನಾಯಕರಿಂದ ಬಂಡಾಯ ಅಭ್ಯರ್ಥಿಗಳ ಮನವೊಲಿಕೆಗೆ ತೀವ್ರ ಕಸರತ್ತು ನಡೆದಿತ್ತು. ಆದರೆ, ಮನವೊಲಿಕೆ ಯತ್ನ ವಿಫಲವಾಗಿದ್ದು, ರಾಜ್ಯದ ಹಲವೆಡೆ ಬಂಡಾಯ ಅಭ್ಯರ್ಥಿಗಳು ಕಣದಲ್ಲಿ ಮುಂದುವರಿದಿದ್ದಾರೆ.

ಪ್ರಮುಖ ಬಂಡಾಯ ಅಭ್ಯರ್ಥಿಗಳು:

ಕ್ಷೇತ್ರ ಬಂಡಾಯ ಅಭ್ಯರ್ಥಿ (ಪಕ್ಷ)
ಪುತ್ತೂರು ಅರುಣ್‌ ಪುತ್ತಿಲ(ಬಿಜೆಪಿ ವಿರುದ್ಧ ಬಂಡಾಯ).
ಹೊಸದುರ್ಗ ಗೂಳಿಹಟ್ಟಿಶೇಖರ್‌(ಬಿಜೆಪಿ ವಿರುದ್ಧ ಬಂಡಾಯ).
ಬಾಗಲಕೋಟೆ ಮಲ್ಲಿಕಾರ್ಜುನ ಚರಂತಿಮಠ(ಬಿಜೆಪಿ ಬಂಡಾಯ).
ಗುಂಡ್ಲುಪೇಟೆ ಎಂ.ಪಿ.ಸುನೀಲ್‌(ಬಿಜೆಪಿ ಬಂಡಾಯ).
ನಾಗಮಂಗಲ ಬಿ.ಎಂ.ಮಲ್ಲಿಕಾರ್ಜುನ(ಫೈಟರ್‌ ರವಿ)(ಬಿಜೆಪಿ ಬಂಡಾಯ).
ಚನ್ನಗಿರಿ ಮಾಡಾಳ್‌ ಮಲ್ಲಿಕಾರ್ಜುನ(ಬಿಜೆಪಿ ಬಂಡಾಯ).
ಕುಂದಗೋಳ ಎಸ್‌.ಐ.ಚಿಕ್ಕನಗೌಡರ(ಬಿಜೆಪಿ ಬಂಡಾಯ).
ಚಿತ್ರದುರ್ಗ ಸೌಭಾಗ್ಯ ಬಸವರಾಜನ್‌(ಕಾಂಗ್ರೆಸ್‌ ಬಂಡಾಯ).
ಚಿಕ್ಕಪೇಟೆ ಯೂಸುಫ್‌ ಷರೀಫ್‌ (ಕೆಜಿಎಫ್‌ ಬಾಬು)(ಕಾಂಗ್ರೆಸ್‌ ಬಂಡಾಯ).
ಜಗಳೂರು ಎಚ್‌.ಪಿ.ರಾಜೇಶ್‌(ಕಾಂಗ್ರೆಸ್‌ ಬಂಡಾಯ).
ತೇರದಾಳ ಪದ್ಮಜೀತ್‌ ನಾಡಗೌಡ(ಕಾಂಗ್ರೆಸ್‌ ಬಂಡಾಯ).
ಮುಧೋಳ ಸತೀಶ ಬಂಡಿವಡ್ಡರ್‌(ಕಾಂಗ್ರೆಸ್‌ ಬಂಡಾಯ).
ಅರಕಲಗೂಡು ಕೃಷ್ಣೇಗೌಡ(ಕಾಂಗ್ರೆಸ್‌ ಬಂಡಾಯ).
ಅರಬಾವಿ ಭೀಮಪ್ಪ ಗಡಾದ(ಕಾಂಗ್ರೆಸ್‌ ಬಂಡಾಯ)
ಮಂಡ್ಯ ಕೆ.ಎಸ್‌.ವಿಜಯಾನಂದ(ಜೆಡಿಎಸ್‌ ಬಂಡಾಯ).