Asianet Suvarna News Asianet Suvarna News

ಬಿಎಸ್‌ವೈ ಸಿಎಂ ಆಗಲು ಸಂಸದ ಸಿದ್ದೇಶಣ್ಣ ಕಾರಣ: ಆರ್.ಅಶೋಕ

ಯಡಿಯೂರಪ್ಪನವರು 2008ರಲ್ಲಿ ಮುಖ್ಯಮಂತ್ರಿಯಾಗಲು ಸಂಸದ ಜಿ.ಎಂ.ಸಿದ್ದೇಶ್ವರರೇ ಕಾರಣವಾಗಿದ್ದು, ಮೂವರು ಶಾಸಕರ ಕೊರತೆ ಇದ್ದ ಸ್ಥಿತಿಯಲ್ಲಿ ಇಬ್ಬರು ಪಕ್ಷೇತರರನ್ನು ಬಿಜೆಪಿ ಕರೆ ತಂದು ಕೊಟ್ಟವರು ಸಿದ್ದೇಶಣ್ಣ ಎಂಬುದನ್ನು ಯಾರೂ ಮರೆಯಬಾರದು ಎಂದು ವಿಪಕ್ಷ ನಾಯಕ ಆರ್.ಅಶೋಕ ಈಗ ಸಿದ್ದೇಶ್ವರರ ವಿರೋಧಿಸುತ್ತಿರುವವರಿಗೆ ಕಿವಿಮಾತು ಹೇಳಿದ್ದಾರೆ. 

Reason for GM Siddeshwara becoming BS Yediyurappa CM Says R Ashok gvd
Author
First Published Mar 16, 2024, 8:03 AM IST

ದಾವಣಗೆರೆ (ಮಾ.16): ಯಡಿಯೂರಪ್ಪನವರು 2008ರಲ್ಲಿ ಮುಖ್ಯಮಂತ್ರಿಯಾಗಲು ಸಂಸದ ಜಿ.ಎಂ.ಸಿದ್ದೇಶ್ವರರೇ ಕಾರಣವಾಗಿದ್ದು, ಮೂವರು ಶಾಸಕರ ಕೊರತೆ ಇದ್ದ ಸ್ಥಿತಿಯಲ್ಲಿ ಇಬ್ಬರು ಪಕ್ಷೇತರರನ್ನು ಬಿಜೆಪಿ ಕರೆ ತಂದು ಕೊಟ್ಟವರು ಸಿದ್ದೇಶಣ್ಣ ಎಂಬುದನ್ನು ಯಾರೂ ಮರೆಯಬಾರದು ಎಂದು ವಿಪಕ್ಷ ನಾಯಕ ಆರ್.ಅಶೋಕ ಈಗ ಸಿದ್ದೇಶ್ವರರ ವಿರೋಧಿಸುತ್ತಿರುವವರಿಗೆ ಕಿವಿಮಾತು ಹೇಳಿದ್ದಾರೆ. 

ನಗರದ ವೀರ ರಾಣಿ ಕಿತ್ತೂರು ಚನ್ನಮ್ಮ ವೃತ್ತದ ಹಳೆ ವಾಣಿ ಹೊಂಡಾ ಶೋ ರೂಂನಲ್ಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರರ ಪ್ರಚಾರ ಕಾರ್ಯಾಲರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ದಾವಣಗೆರೆ ಕ್ಷೇತ್ರದಿಂದ ಸಂಸದ ಸಿದ್ದೇಶ್ವರರ ಪತ್ನಿ ಗಾಯತ್ರಿ ಅಕ್ಕನವರು ಗೆಲ್ಲಬೇಕು. ಇಲ್ಲಿ ಗಾಯತ್ರಿ ಅಕ್ಕನವರು ಗೆದ್ದರೆ ಅಲ್ಲಿ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುತ್ತಾರೆ ಎಂದರು. ತಕ್ಷಣವೇ ನಾನು ಸಂಸದ ಸಿದ್ದೇಶ್ವರರಿಗೆ ಕರೆ ಮಾಡಿದೆ. ಇಬ್ಬರು ಪಕ್ಷೇತರರನ್ನು ಕರೆ ತಂದಿದ್ದೇ ಸಿದ್ದೇಶಣ್ಣ, ಅಂದು ಬಿಜೆಪಿ ಸರ್ಕಾರ ರಚನೆಯಾಗಲು, ಯಡಿಯೂರಪ್ಪನವರು ಸಿಎಂ ಆಗಲು, ನಮ್ಮ ಮುಖಂಡರು ಸಚಿವರಾಗಿದ್ದೇ ಸಿದ್ದೇಶಣ್ಣನ ಪ್ರಯತ್ನದಿಂದ. 

ಉಗ್ರ ಕೃತ್ಯ ಬಗ್ಗೆ ಕಾಂಗ್ರೆಸ್ ಸರ್ಕಾರ ಸಹಾನುಭೂತಿ: ಆರ್‌.ಅಶೋಕ್‌

ಸಿದ್ದೇಶ್ವರವರು ಅವತ್ತು ಇಲ್ಲದೇ ಇದ್ದಿದ್ದರೆ ಯಡಿಯೂರಪ್ಪನವರು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬರಲು ಸಿದ್ದೇಶಣ್ಣನ ದೊಡ್ಡ ಪರಿಶ್ರಮ ಇದೆ. ಸಿದ್ದೇಶಣ್ಣ ಏನು ತಪ್ಪು ಮಾಡಿ ದ್ದಾರೆ? ಬಿಜೆಪಿ ಬಾವುಟವನ್ನು ಕಟ್ಟಿ, ನೂರಾರು ಕಾರ್ಯಕರ್ತರನ್ನು ಬೆಳೆಸಿದ್ದಾರೆ. ನಮ್ಮ ಜವಾಬ್ದಾರಿ ಅರಿತು, ಮೋದಿಯವರನ್ನು ಮತ್ತೆ ಪ್ರಧಾನಿ ಮಾಡೋಣ ಎಂದು ಅತೃಪ್ತರಿಗೆ ಮಾತಿನಲ್ಲೇ ಚಾಟಿ ಬೀಸುವ ಮೂಲಕ ನೀವು ಸಚಿವರಾಗಲೂ ಸಿದ್ದೇಶ್ವರ ಪ್ರಯತ್ನ ಕಾರಣವೆಂಬ ಸಂದೇಶವನ್ನೂ ಸೂಚ್ಯವಾಗಿ ರವಾನಿಸಿದರು.

ಗೊಂದಲ ವಾರದಲ್ಲೇ ಶಮನ, ಶೀಘ್ರ ಸಭೆ: ಲೋಕಸಭಾ ಚುನಾವಣೆಗೆ ಟಿಕೆಟ್ ಘೋಷಣೆ ನಂತರ ವಿರೋಧ, ಗೊಂದಲ ಸಹಜ. ದಾವಣಗೆರೆ ಕ್ಷೇತ್ರದಲ್ಲೂ ಯಾವುದೇ ಗೊಂದಲ ಇದ್ದರೂ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದೇ ನಮ್ಮ ಗುರಿ ಎಂದು ವಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ. ನಗರಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ದಾವಣಗೆರೆ ಕ್ಷೇತ್ರದಲ್ಲಿ ಸಂಸದ ಸಿದ್ದೇಶ್ವರ್‌ ಪತ್ನಿ ಗಾಯತ್ರಿ ಸಿದ್ದೇಶ್ವರ್‌ಗೆ ಟಿಕೆಟ್ ನೀಡಿದ್ದು, ಏನೇ ಗೊಂದಲ ಇದ್ದರೂ ನಮ್ಮ ಗುರಿ ಮಾತ್ರ ಮೋದಿ ಮೂರನೇ ಅವಧಿಗೆ ಪ್ರಧಾನಿ ಮಾಡುವುದಾಗಿದೆ. 

ರಾಜ್ಯ ಸರ್ಕಾರ ರಿಪೇರಿಯಾಗದ ಗಾಡಿಯಂತಿದೆ: ಆರ್‌.ಅಶೋಕ್‌ ಲೇವಡಿ

ಎಲ್ಲಾ ಕಡೆ ಗೊಂದಲ ಇರುವಂತೆ ಇಲ್ಲಿಯೂ ಇದ್ದೇ ಇದೆ. ಇನ್ನೊಂದು ವಾರ ಕಳೆದ ನಂತರ ಎಲ್ಲವೂ ಸುಧಾರಣೆಯಾಗಲಿದೆ.ಯಾರೂ ಬಂಡಾಯವಾಗಿ ನಿಲ್ಲುವ ಪರಿಸ್ಥಿತಿ ಇಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು. ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ಹಿರಿಯರಾದ ಎಸ್.ಎ.ರವೀಂದ್ರನಾಥ್ ರ ಜೊತೆಗೆ ಚರ್ಚಿಸುತ್ತೇನೆ. ಎಲ್ಲರನ್ನೂ ಕರೆಸಿ ಮಾತನಾಡುತ್ತೇವೆ. ರೇಣುಕಾಚಾರ್ಯ ಸಹ ಸಿದ್ದೇಶ್ವರರ ಶಿಷ್ಯ, ಕಳೆದ ವಿಧಾನಸಭೆ ಚುನಾವಣೆ ನಂತರ ಗೊಂದಲದಿಂದಾಗಿ ಹೀಗೆಲ್ಲಾ ಆಗಿದೆ. ಶೀಘ್ರವೇ ಎಲ್ಲವೂ ಸರಿಯಾಗಲಿದೆ ಎಂದು ತಿಳಿಸಿದರು.

Follow Us:
Download App:
  • android
  • ios