ರೈತರಿಗೋಸ್ಕರ ಜೈಲಿಗೆ ಹೋಗಲೂ ಸಿದ್ಧ: ಸಂಸದ ಮುನಿಸ್ವಾಮಿ
ರೈತರಿಗೋಸ್ಕರ ಜೈಲಿಗೆ ಹೋಗಲು ಸಿದ್ಧನಿದ್ದೇನೆ. ಕೋಲಾರ ಲೋಕಸಭಾ ವ್ಯಾಪ್ತಿಯ ರೈತರ ಜಮೀನನ್ನು ಬಿಟ್ಟು ಕೊಡುವ ಪ್ರಸಂಗವೇ ಇಲ್ಲ ಎಂದು ಕೋಲಾರ ಸಂಸದ ಎಸ್.ಮುನಿಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದರು.
ಶಿಡ್ಲಘಟ್ಟ (ಅ.12): ರೈತರಿಗೋಸ್ಕರ ಜೈಲಿಗೆ ಹೋಗಲು ಸಿದ್ಧನಿದ್ದೇನೆ. ಕೋಲಾರ ಲೋಕಸಭಾ ವ್ಯಾಪ್ತಿಯ ರೈತರ ಜಮೀನನ್ನು ಬಿಟ್ಟು ಕೊಡುವ ಪ್ರಸಂಗವೇ ಇಲ್ಲ ಎಂದು ಕೋಲಾರ ಸಂಸದ ಎಸ್.ಮುನಿಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದರು. ಶ್ರೀನಿವಾಸಪುರದಲ್ಲಿ ಅರಣ್ಯ ಇಲಾಖಾ ಅಧಿಕಾರಿಗಳು ರೈತರೊಂದಿಗೆ ನಡೆದು ಕೊಂಡ ರೀತಿಯನ್ನು ವಿರೋಧಿಸಿ ಬಿಜೆಪಿ ಸೇವಾ ಸೌಧದಲ್ಲಿ ಮಂಗಳವಾರ ತಾಲೂಕಿನ ರೈತರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಕಂಡು ಕೊಳ್ಳುವ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಜೈ ಜವಾನ್ ಜೈ ಕಿಸಾನ್ ಎಂದು ಹೇಳಿದ ಮಹಾನಾಯಕರು ಕಾಂಗ್ರೆಸ್ ನಲ್ಲಿ ಇದ್ದಾರೆ.
ಆದರೆ ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ನಾವು ರೈತರ ಪರವಾಗಿ ಇದ್ದೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಸರ್ಕಾರ ರೈತರ ಮೇಲೆ ಕೇಸು ದಾಖಲು ಮಾಡಿದ್ದಾರೆ. ಸುಮಾರು ಐವತ್ತು ಅರವತ್ತು ವರ್ಷಗಳಿಂದ ಜಮೀನು ಉಳುಮೆ ಮಾಡಿಕೊಂಡು ಪಹಣಿ-ಪಟ್ಟ, ರಸೀದಿ ಪುಸ್ತಕಗಳನ್ನು ಇಟ್ಟುಕೊಂಡಿರುವ ರೈತರ ಬೆಳೆಗಳನ್ನು ಜೆ.ಸಿ.ಬಿ ಯಂತ್ರಗಳಿಂದ ದ್ವಂಸ ಗೊಳಿಸಿ ನಾಶ ಪಡಿಸಿರುವುದು ಈ ಸಮಾಜ ತಲೆ ತಗ್ಗಿಸುವಂತಾಗಿದೆ. ರೈತರಿಗೆ ಹಿಂದೆ ಇದ್ದ ಬಿಜೆಪಿ , ಜೆಡಿಎಸ್ , ಹಾಗೂ ಕಾಂಗ್ರೆಸ್ ಸರ್ಕಾರದ ಅಧಿಕಾರಿಗಳು ಅಥವಾ ಎಂ.ಎಲ್,ಎ ಗಳು ಜಮೀನು ಮಂಜೂರು ಮಾಡಿಕೊಟ್ಟಿರುತ್ತಾರೆ.
ತಂದೆ- ತಾಯಿ ಹೆಸರು ಉಳಿಸಲು ಹಣ ಖರ್ಚು ಮಾಡುತ್ತಿದ್ದೇನೆ: ಶಾಸಕ ಪ್ರದೀಪ್ ಈಶ್ವರ್
ಆ ಜಮೀನನ್ನು ಈಗ ಅರಣ್ಯ ಇಲಾಖೆಯವರು ಇದು ನಮ್ಮ ಜಮೀನು ಎಂದು ಹೇಳಿ ತೋಟಗಾರಿಕೆ ಬೆಳೆಗಳು ಹಾಗೂ ತೆಂಗು, ಮಾವು ಇತರೆ ಬೆಳೆಗಳನ್ನು ನಾಶ ಪಡಿಸಿ ರೈತರ ಮೇಲೆ ಎಫ್,ಐ,ಆರ್ ದಾಖಲು ಮಾಡುತ್ತಿದ್ದಾರೆ. ಇದು ರೈತ ವಿರೋಧಿ ಸರ್ಕಾರ ಎಂದು ಛೇಡಿಸಿದರು. ಕಾಂಗ್ರೆಸ್ ಮಾಜಿ ಪ್ರಧಾನಿ ಮಂತ್ರಿಗಳಾದ ಇಂದಿರಾ ಗಾಂಧಿಯವರು ಉಳುವವನೆ ಭೂಮಿ ಒಡೆಯ ಎಂದು ಹೇಳಿದ್ದು ಸುಳ್ಳೇ ಎಂದು ಪ್ರಶ್ನಿಸುವ ಮೂಲಕ ಗಡಿಯಲ್ಲಿ ಸೈನಿಕ ಕೆಲಸ ಮಾಡಬೇಕು, ರೈತ ಹೊಲದಲ್ಲಿ ಕೆಲಸ ಮಾಡಬೇಕು ಆಗ ನಮಗೆ ಅನ್ನ ಸಿಗುತ್ತದೆ ಎಂದು ಹೇಳಿದರು.
ಆದರಿಂದ ರೈತರಿಗಾದ ಅನ್ಯಾಯವನ್ನು ಖಂಡಿಸಿ ರೈತರೆಲ್ಲರೂ ಒಂದಾಗಿ ನಮ್ಮ ಉಳಿವಿಗಾಗಿ ನಮ್ಮ ಜಮೀನು ನಮ್ಮ ಮಕ್ಕಳಿಗಾಗಿ ವಿಧಾನಸೌಧ ಚಲೋ ಪಾದಯಾತ್ರೆಯನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು. ನಾಳೆ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ವತಿಯಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ರೈತರ ಪ್ರತಿಭಟನೆ ಹಮ್ಮಿಕೊಂಡಿದ್ದು ಪಕ್ಷಾತೀತವಾಗಿ ಜ್ಯಾತ್ಯಾತೀತವಾಗಿ ತಾಲೂಕಿನ ಎಲ್ಲಾ ರೈತರು ಭಾಗವಹಿಸಬೇಕು ಎಂದು ರೈತರಿಗೆ ಕರೆ ನೀಡಿದರು.
ನಂದಿ ಬೆಟ್ಟಕ್ಕೆ ಶೀಘ್ರದಲ್ಲೇ ರೋಪ್ ವೇ ನಿರ್ಮಾಣ: ಸಚಿವ ಸುಧಾಕರ್
ನಂತರ ಮಾತನಾಡಿದ ಸೀಕಲ್ ರಾಮಚಂದ್ರ ಗೌಡ ಶ್ರೀನಿವಾಸಪುರದಲ್ಲಿ ರೈತರನ್ನು ಒಕ್ಕಲೆಬ್ಬಿಸಿ ಅವರ ಮೇಲೆ ಕೇಸುಗಳನ್ನು ಹಾಕಿದ್ದಾರೆ ನಮ್ಮ ಶಿಡ್ಲಘಟ್ಟದ ತಲಕಾಯಲ ಬೆಟ್ಟ ವಾಪ್ತಿಯಲ್ಲಿ ಬರುವ ಸುಮಾರು 25 ಅಧಿಕೃತವಾಗಿ ಎಲ್ಲಾ ದಾಖಲೆಗಳನ್ನು ಹೊಂದಿರುವ ರೈತರಿಗೆ ನೋಟಿಸ್ ಜಾರಿ ಮಾಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ನಾವು ಕಾನೂನು ಹೋರಾಟ ಮಾಡಬೇಕಿದೆ ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ರಾಜಣ್ಣ ಮಾತನಾಡಿದರು. ಜಿಲ್ಲಾ ವಕ್ತಾರ ರಮೇಶ್ ಬಾಯಿರಿ, ಸೀಕಲ್ ಆನಂದ್ ಗೌಡ , ಮಾಜಿ ಟಿ.ಪಿ.ಎಸ್ . ಸದಸ್ಯ ದಿಬ್ಬೂರ ಹಳ್ಳಿ ರಾಜಣ್ಣ , ಕನಕಪ್ರಸಾದ್, ನಟರಾಜ್, ತ್ರಿವೇಣಿ, ಯುವ ಮುಖಂಡರಾದ ಭರತ್, ದೇವರಾಜ್, ಮುಕೇಶ್, ಮೋಹನ್, ಅಭಿಲಾಷ್ ಹಾಜರಿದ್ದರು.