ತಂದೆ- ತಾಯಿ ಹೆಸರು ಉಳಿಸಲು ಹಣ ಖರ್ಚು ಮಾಡುತ್ತಿದ್ದೇನೆ: ಶಾಸಕ ಪ್ರದೀಪ್ ಈಶ್ವರ್
ಕೆಲವು ಅಧಿಕಾರಿಗಳು ಮತ್ತು ಲೋಕಲ್ ಲೀಡರ್ ಗಳೆಂದು ಹೇಳಿಕೊಳ್ಳುವ ಪುಡಾರಿಗಳು ಹಕ್ಕುಪತ್ರ, ಮಾಸಾಶನ, ಪಡಿತರ ಚೀಟಿಗಳಿಗಾಗಿ ಲಂಚ ಕೇಳುತ್ತಿರುವುದು ತಿಳಿದು ಬಂದಿದೆ. ಯಾರು ಯಾರಿಗೂ ಲಂಚ ಕೊಡಬೇಡಿ, ಅಂತವರಿದ್ದರೆ ನನ್ನ ಗಮನಕ್ಕೆ ತನ್ನಿ ಅವರ ವಿರುದ್ದ ನಾನು ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ಜನತೆಗೆ ಮನವಿ ಮಾಡಿದರು.
ಚಿಕ್ಕಬಳ್ಳಾಪುರ (ಸೆ.21): ಕೆಲವು ಅಧಿಕಾರಿಗಳು ಮತ್ತು ಲೋಕಲ್ ಲೀಡರ್ ಗಳೆಂದು ಹೇಳಿಕೊಳ್ಳುವ ಪುಡಾರಿಗಳು ಹಕ್ಕುಪತ್ರ, ಮಾಸಾಶನ, ಪಡಿತರ ಚೀಟಿಗಳಿಗಾಗಿ ಲಂಚ ಕೇಳುತ್ತಿರುವುದು ತಿಳಿದು ಬಂದಿದೆ. ಯಾರು ಯಾರಿಗೂ ಲಂಚ ಕೊಡಬೇಡಿ, ಅಂತವರಿದ್ದರೆ ನನ್ನ ಗಮನಕ್ಕೆ ತನ್ನಿ ಅವರ ವಿರುದ್ದ ನಾನು ಕ್ರಮ ಕೈಗೊಳ್ಳುತ್ತೇನೆ ಎಂದು ಶಾಸಕ ಪ್ರದೀಪ್ ಈಶ್ವರ್ ಜನತೆಗೆ ಮನವಿ ಮಾಡಿದರು.
ನಮಸ್ತೆ ಚಿಕ್ಕಬಳ್ಳಾಪುರ ಕಾರ್ಯಕ್ರಮದಡಿ ಬುಧವಾರ ಚಿಕ್ಕಬಳ್ಳಾಪುರ ನಗರದ 2 ನೇವಾರ್ಡ್ ನ ಜನರ ಸಂಕಷ್ಟ ಆಲಿಸಲು ಮನೆ ಮನೆ ಬೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, 2 ವಾರ್ಡ್‌ನ ಸ್ಲಮ್ ವಾಸಿಗಳ ಬೇಟಿ ಮಾಡಿ ಅವರ ಸಮಸ್ಯೆಗಳಾದ ಮನೆ ಹಕ್ಕುಪತ್ರ ,ಮಾಸಾಶನ, ಪಡಿತರ ಚೀಟಿ ನೀಡುವಂತೆ ಮತ್ತು ಮೂಲಭೂತ ಸೌಕರ್ಯಗಳಾದ ನೀರು,ಚರಂಡಿ ಹಾಗು ರಸ್ತೆ ರಿಪೇರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
Chaitra Kundapur Case: ನನಗೂ ಗಗನ್ ಕಡೂರಿಗೂ ಸಂಬಂಧ ಇಲ್ಲ: ಸಾಲುಮರದ ತಿಮ್ಮಕ್ಕ
ರಾಜಕಾಲುವೆ ಒತ್ತುವರಿ ಭಯಬೇಡ: ರಾಜಕಾಲುವೆ ಮೇಲೆ ಮನೆ ನಿರ್ಮಿಸಿಕೊಂಡಿರುವವರಿಗೂ ಭಯ ಬೇಡ ನಾನಿರುವರೆಗೂ ನಿಮಗೇನು ಆಗೊಲ್ಲ ಎಂದು ಅಭಯ ನೀಡಿರುವುದಾಗಿ ತಿಳಿಸಿದರು. ಈ ಏರಿಯಾ ಸ್ಲಮ್ ಆಗಿದ್ದು, ಮಳೆ ಬಂದರೆ ಮೇಲಿಂದ ಹರಿದು ಬರೋ ನೀರು ಮನೆಗಳಿಗೆ ನುಗ್ಗುತ್ತದೆ. ಸುತ್ತಲೂ ಗಿಡಗಂಟಿಗಳು ಎತ್ತರೆತ್ತರಕ್ಕೆ ಬೆಳೆದು ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಲು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ವರ್ಷಾನುಗಟ್ಟಲೆ ಶಾಶ್ವತ ಕಾಯಿಲೆಗಳಿಂದ ನರಳುತ್ತಿರುವ ರೋಗಿಗಳನ್ನು ನಮ್ಮ ಅಮ್ಮ ಆಂಬುಲೆನ್ಸ್ ನಲ್ಲಿ ಬೆಂಗಳೂರಿನ ಕಿದ್ವಾಯಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುವ ಏರ್ಪಾಡು ಮಾಡಿರುವುದಾಗಿ ಹೇಳಿದರು.
ಚುನಾವಣಾ ಪೂರ್ವ ತಿಳಿಸಿದಂತೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚು ಒತ್ತು ನೀಡಿದ್ದೇನೆ. ತಮ್ಮ ಸ್ವಂತ ಹಣದಿಂದ ಕ್ಷೇತ್ರದ ಸರ್ಕಾರಿ ಮತ್ತು ಅನುದಾನಿತ ಶಾಲೆ ಕಾಲೇಜುಗಳ 6500 ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ರೂಪಾಯಿಗಳ ವಿದ್ಯಾರ್ಥಿ ವೇತನ ನೀಡಿದ್ದು, ನನ್ನ ಕ್ಷೇತ್ರದ ಮಕ್ಕಳಿಗೆ ಭವಿಷ್ಯಕ್ಕಿರಲಿ ಎಂದು ಇದನ್ನೆಲ್ಲ ಮಾಡಿದ್ದೇನೆ ಎಂದರು.
ತಂದೆ- ತಾಯಿ ಹೆಸರು ಉಳಿಸಬೇಕು: ಸೈಟು ಮನೆ ಬಂಗಲೆ ತೆಗೆದುಕೊಳ್ಳಬೇಕು, ಐಷಾರಾಮಿ ಬದುಕು ಬದುಕಬೇಕು ಎನ್ನುವ ಆಸೆ ನನಗಿಲ್ಲ. ಅನಾಥ ಹುಡುಗನಿಗೆ ವಿಧಾನ ಸೌಧಕ್ಕೆ ಹೋಗುವ ದಾರಿ ತೋರಿದ ನಿಮ್ಮ ಋಣ ತೀರಿಸಲು ಖರ್ಚು ಮಾಡಿದ್ದೇನೆ. ನನ್ನ ತಂದೆ ಈಶ್ವರ್ ತಾಯಿ ಮಂಜುಳ ಅವರ ಹೆಸರು ಉಳಿಸಲು ಖರ್ಚು ಮಾಡುತ್ತಿದ್ದೇನೆ. ಏನೂ ಇಲ್ಲದ ನನ್ನ ಗೆಲ್ಲಿಸಿದ ಋಣ ತೀರಿಸಲು ಚುನಾವಣೆ ಆದ ನಂತ್ರ ಮನೆ ಮನೆ ಬೇಟಿಕೊಟ್ಟು ಸಮಸ್ಯೆಗಳನ್ನ ಆಲಿಸುತಿದ್ದೇನೆ ಸಿಕ್ಕ ಐದು ವರ್ಷಗಳಲ್ಲಿ ಉತ್ತಮ ಸೇವೆ ಮಾಡ್ತೇನೆ.
ಡಿ.ಕೆ.ಸಹೋದರರ ದಬ್ಬಾಳಿಕೆಗೆ ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸುತ್ತಾರೆ: ಎಚ್‌ಡಿಕೆ
ಮುಂದೆ ಜನ ಗೆಲ್ಲಿಸೋದು ಬಿಡೋದು ಅವರ ಕೈಲಿದೆ ನಾನು ಮತ್ತೆ ಬೇಕು ಅನ್ನಿಸಿದರೆ ಮತ ಹಾಕಲಿ ಇಲ್ಲಾ ಬಿಡಲಿ ಅವರ ತೀರ್ಮಾನವನ್ನು ಸ್ವೀಕರಿಸುತ್ತೇನೆಂದರು. ಈ ವೇಳೆ ನಗರಸಭೆಯ ಪೌರಾಯುಕ್ತ ಮಂಜುನಾಥ್, ಸಹಾಯಕ ಕಾರ್ಯಪಾಲಕ ಎಂಜನೀಯರ್ ಉಮಾ ಶಂಕರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮಂಜುಳ, ಬೆಸ್ಕಾಂ ಸಿಬ್ಬಂಧಿ, ಕಂದಾಯ, ನಗರಸಭೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಭೂ ಮಾಪನ ಸೇರಿದಂತೆ ಮತ್ತಿತರ ಇಲಾಖಾಧಿಕಾರಿಗಳು ಇದ್ದರು.