Congress Politics: 1 ವರ್ಷ ಕರ್ನಾಟಕದಲ್ಲೇ ಸುರ್ಜೇವಾಲಾ ಠಿಕಾಣಿ!

*   ಬೆಂಗಳೂರಲ್ಲಿ ಮನೆ ಹುಡುಕಲು ಡಿಕೆಶಿಗೆ ಸೂಚನೆ
*  30 ಜನರ ತಂಡದೊಂದಿಗೆ ತಿಂಗಳಲ್ಲಿ 20 ದಿನ ಕರ್ನಾಟಕದಲ್ಲಿ ವಾಸ
*   ವಿಧಾನಸಭೆ ಚುನಾವಣೆಗೆ ಇಲ್ಲೇ ಇದ್ದು ರಣತಂತ್ರ
 

Randeep Surjewala Will Be Stay One Year in Karnataka Due to Assembly Election grg

ಬೆಂಗಳೂರು(ಏ.30):  ಕೇವಲ ಒಂದು ವರ್ಷದ ಹಿಂದೆ ‘ಕರ್ನಾಟಕದ ಉಸ್ತುವಾರಿ ಹೊಣೆ ಬೇಡ, ಇಲ್ಲೇ ಉತ್ತರ ಭಾರತದ ಯಾವುದಾದರೂ ರಾಜ್ಯದ ಜವಾಬ್ದಾರಿ ನೀಡಿ’ ಎಂದು ಹೈಕಮಾಂಡ್‌ ಅನ್ನು ಕೋರಿದ್ದ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ(Randeep Surjewala), ಇದೀಗ ತಮ್ಮ 30 ಮಂದಿಯ ತಂಡದೊಂದಿಗೆ ಮುಂದಿನ ಒಂದು ವರ್ಷ ಕರ್ನಾಟಕದಲ್ಲೇ(Karnataka) ಬೀಡು ಬಿಡಲು ಮುಂದಾಗಿದ್ದಾರೆ.

ಇದಕ್ಕಾಗಿ ಬೆಂಗಳೂರಿನ(Bengaluru) ವಸಂತ ನಗರದಲ್ಲಿ ಮನೆಯೊಂದನ್ನು ಹುಡುಕುವ ಹೊಣೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌(DK Shivakumar) ಅವರಿಗೆ ವಹಿಸಿದ್ದಾರೆ. ರಾಜ್ಯದ ಬಗ್ಗೆಯೇ ಹೆಚ್ಚು ಗಮನ ನೀಡಬೇಕು ಎಂಬ ಕಾರಣಕ್ಕಾಗಿ ಅತ್ಯಂತ ಮಹತ್ವದ ಎಐಸಿಸಿ ಮಾಧ್ಯಮ ಹಾಗೂ ಸಂವಹನ ಘಟಕದ ಅಧ್ಯಕ್ಷ ಸ್ಥಾನವನ್ನು ತ್ಯಜಿಸಲು ಮುಂದಾಗಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಡಿಕೆಶಿ ಸ್ಟೈಲ್ ಕಾಪಿ ಮಾಡಲು ಹೋಗಿ ಪೇಚಿಗೆ ಸಿಲುಕಿದ ನಲಪಾಡ್: ಕಾಂಗ್ರೆಸ್ ಪ್ರತಿಭಟನೆ ವೇಳೆ ಹೈಡ್ರಾಮಾ

ಈಗಾಗಲೇ ಸುಮಾರು 100 ಮಂದಿ ಸದಸ್ಯ ಬಲದ ತಂಡದೊಂದಿಗೆ ರಾಜಕೀಯ ತಂತ್ರಗಾರ ಸುನೀಲ್‌ ಕುನ್ನುಗೋಳ್‌ ಬೆಂಗಳೂರಿನಲ್ಲಿ ಕಚೇರಿ ಆರಂಭಿಸಿ ಮುಂಬರುವ ವಿಧಾನಸಭಾ ಚುನಾವಣೆಗೆ(Karnataka Assemly Election 2023) ಪಕ್ಷದ ತಂತ್ರವೇನಾಗಬೇಕು ಎಂದು ಸಲಹೆ ನೀಡುವ ಕೆಲಸ ಆರಂಭಿಸಿದ್ದರೆ, ಇದಕ್ಕೆ ಸಂವಾದಿಯಾಗಿ ಸುರ್ಜೇವಾಲಾ ಹಾಗೂ ಅವರ 30 ಮಂದಿಯ ತಂಡ ರಾಜ್ಯದಲ್ಲಿ ವಾಸ್ತವ ಸ್ಥಿತಿಗತಿಯೇನು ಎಂಬುದನ್ನು ಪ್ರತ್ಯಕ್ಷವಾಗಿ ಅರಿತು ಹೈಕಮಾಂಡ್‌ಗೆ ಮಾಹಿತಿ ನೀಡುವ ಕೆಲಸ ಮಾಡಲಿದೆ.

ಇದಕ್ಕಾಗಿ ಸುರ್ಜೇವಾಲಾ ಮುಂದಿನ ಒಂದು ವರ್ಷ ಕರ್ನಾಟಕದಲ್ಲಿ ವಾಸ ಮಾಡಲಿದ್ದಾರೆ. ಅಂದರೆ, ಮಾಸವೊಂದರಲ್ಲಿ ಸುಮಾರು 20 ದಿನ ಕರ್ನಾಟಕದಲ್ಲೇ ಇರುತ್ತಾರೆ. ಉಳಿದ 10 ದಿನ ರಾಜ್ಯದ ಹೊರಗೆ (ದೆಹಲಿಯಲ್ಲಿ) ಹೈಕಮಾಂಡ್‌ ಕೆಲಸ ನೋಡುತ್ತಾರೆ. ಸುರ್ಜೇವಾಲಾ ಅವರು ತಮಗೆ ನೆರವು ನೀಡಲು ಎಐಸಿಸಿ ಕಾರ್ಯದರ್ಶಿಗಳ ದರ್ಜೆಯ ಇಬ್ಬರನ್ನು ಕರೆತರಲಿದ್ದಾರೆ. ಇವರಲ್ಲದೆ, ರಾಜ್ಯದ ಎಲ್ಲಾ 28 ಲೋಕಸಭಾ ಕ್ಷೇತ್ರಗಳಿಗೆ ಒಬ್ಬೊಬ್ಬರಂತೆ 28 ವೀಕ್ಷಕರ ತಂಡವನ್ನು ಕರೆ ತರಲಿದ್ದಾರೆ. ಈ ವೀಕ್ಷಕರು ತಮ್ಮ ಲೋಕಸಭಾ ಕ್ಷೇತ್ರದಲ್ಲೇ ನೆಲೆ ನಿಂತು, ರಾಜಕೀಯ ಬೆಳವಣಿಗೆ ಹಾಗೂ ಕ್ಷೇತ್ರದ ಟ್ರೆಂಡ್‌ ಏನಾಗುತ್ತಿದೆ ಎಂಬ ಮಾಹಿತಿಯನ್ನು ಸುರ್ಜೇವಾಲಾ ಅವರಿಗೆ ನೀಡಲಿದ್ದಾರೆ.

ಹೀಗಾಗಿ ಸುರ್ಜೇವಾಲಾ ಅವರು ಬೆಂಗಳೂರಿನಲ್ಲಿ ಒಂದು ವರ್ಷದವರೆಗೆ ಉಳಿದುಕೊಳ್ಳಲು ಫ್ಲಾಟ್‌ವೊಂದನ್ನು ಹುಡುಕುತ್ತಿದ್ದಾರೆ. ಇದರ ಹೊಣೆ ಹೊತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ವಸಂತನಗರದ ಸುತ್ತಮುತ್ತಲೂ ನಾಲ್ಕಾರು ಫ್ಲಾಟ್‌ಗಳನ್ನು ಹುಡುಕಿಸಿಟ್ಟಿದ್ದು, ಅವುಗಳ ವೀಕ್ಷಣೆಗೆ ಸುರ್ಜೇವಾಲಾ ಮುಂದಿನ ವಾರ ನಗರಕ್ಕೆ ಆಗಮಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಹುಬ್ಬಳ್ಳಿ ಗಲಭೆಕೋರರ ಕುಟುಂಬಕ್ಕೆ ಜಮೀರ್ ಸಹಾಯ, ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್

ಹೊಣೆಗೆ ಸೂತ್ರ:

ಇತ್ತೀಚೆಗಷ್ಟೇ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕಗೊಂಡವರಿಗೆ ಹೊಣೆ ವಹಿಸಲು ಸೂತ್ರವೊಂದನ್ನು ರೂಪಿಸಲಾಗಿದೆ. 40 ಉಪಾಧ್ಯಕ್ಷರ ಪೈಕಿ 28 ಮಂದಿಗೆ ತಲಾ ಒಂದೊಂದು ಲೋಕಸಭಾ ಕ್ಷೇತ್ರದ ಹೊಣೆ ನೀಡುವುದು. ಉಳಿದವರಿಗೆ ಮುಂಚೂಣಿ ಘಟಕಗಳ ನಿರ್ವಹಣೆ ಹೊಣೆಗಾರಿಕೆಯನ್ನು ನೀಡಲು ತೀರ್ಮಾನಿಸಲಾಗಿದೆ. ಇನ್ನು 109 ಪ್ರಧಾನ ಕಾರ್ಯದರ್ಶಿಗಳಿಗೆ ತಲಾ ಎರಡು ವಿಧಾನಸಭಾ ಕ್ಷೇತ್ರಗಳ ಹೊಣೆಗಾರಿಕೆಯನ್ನು ನೀಡಲು ನಿರ್ಧರಿಸಲಾಗಿದೆ. ಉಪಾಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳು ತಮ್ಮ ಕ್ಷೇತ್ರದಲ್ಲಿ ನೆಲೆನಿಂತು ಕೆಲಸ ಮಾಡಬೇಕಾಗುತ್ತದೆ ಎಂದು ಮೂಲಗಳು ಹೇಳಿವೆ.

ಮುಂಚೂಣಿ ಘಟಕಗಳ ಪುನರ್‌ ರಚನೆ:

ಚುನಾವಣೆ ವೇಳೆ ಕೆಪಿಸಿಸಿ(KPCC) ಮಾತ್ರವಲ್ಲದೆ ಮುಂಚೂಣಿ ಘಟಕಗಳು ಕೂಡ ಸಕ್ರಿಯವಾಗಿ ಕಾರ್ಯ ನಿರ್ವಹಿಸುವಂತೆ ಮಾಡಬೇಕು ಎಂಬ ಸುರ್ಜೇವಾಲಾ ಅವರ ಸಲಹೆಯ ಹಿನ್ನೆಲೆಯಲ್ಲಿ ಪಕ್ಷದ ಬಹುತೇಕ ಎಲ್ಲಾ ಮುಂಚೂಣಿ ಘಟಕಗಳನ್ನು ಪುನರ್‌ ರೂಪಿಸಲು ಸಹ ತೀರ್ಮಾನಿಸಲಾಗಿದೆ ಎಂದು ಮೂಲಗಳು ಹೇಳಿವೆ.
 

Latest Videos
Follow Us:
Download App:
  • android
  • ios