ಹುಬ್ಬಳ್ಳಿ ಗಲಭೆಕೋರರ ಕುಟುಂಬಕ್ಕೆ ಜಮೀರ್ ಸಹಾಯ, ಸಿದ್ದರಾಮಯ್ಯ ಫಸ್ಟ್ ರಿಯಾಕ್ಷನ್
* ಜಮೀರ್ ಕಿಟ್ ಹಂಚಿಕೆಗೆ ನಾನ್ಯಾಕೆ ರಿಯಾಕ್ಟ್ ಮಾಡಬೇಕು
* ಬಾಗಲಕೋಟೆ ಜಿಲ್ಲೆಯ ಸೂಳಿಭಾವಿ ಗ್ರಾಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ
* ಬಿಜೆಪಿ ಸಕಾ೯ರ ಹಗರಣಗಳ & ಭ್ರಷ್ಟಾಚಾರಗಳ ಸಕಾ೯ರ
* ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವಣ೯ನ್ಯೂಸ್
ಬಾಗಲಕೋಟೆ, (ಏ.29): ಹುಬ್ಬಳ್ಳಿ ಗಲಭೆ ಪ್ರಕರಣದ ಆರೋಪಿಗಳ ಕುಟುಂಬಗಳಿಗೆ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಖಾನ್ ಅವರು ಫುಡ್ ಕಿಟ್ ಹಾಗೂ ಸಹಾಯ ಧನಕ್ಕೆ ಮುಂದಾಗಿದ್ದಾರೆ. ಇದಕ್ಕೆ ಬಿಜೆಪಿ ನಾಯಕರುಗಳು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದು ಆರೋಪಿಗಳಿಗೆ ಪ್ರಚೋದನೆ ನೀಡಿದಂತಾಗುತ್ತದೆ ಎಂದು ಜಮೀರ್ ಅಹಮ್ಮದ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇನ್ನು ಇದಕ್ಕೆ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಸೂಳೇಭಾವಿ ಗ್ರಾಮದಲ್ಲಿ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಹುಬ್ಬಳ್ಳಿ ಗಲಭೆಕೋರರಿಗೆ ಜಮೀರ್ ಅಹಮ್ಮದ್ ಖಾನ್ ಕಿಟ್ ಹಂಚಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಜಮೀರ್ ಅಹಮ್ಮದ್ ವಿದೇಶಕ್ಕೆ ಹೋಗಿದ್ದಾರೆ, ಯಾರೋ ಕಿಟ್ ಕೊಟ್ರೆ, ನಾನು ಅದಕ್ಕೆ ರಿಯಾಕ್ಟ್ ಮಾಡಬೇಕಾ ಎಂದ ಅವರು,ಯಾರೇ ಪುಡ್ ಕೊಟ್ಟರೆ ಜಮೀರ್ ಕೊಟ್ಟ ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು.
ಹುಬ್ಬಳ್ಳಿ ಗಲಭೆಕೋರರಿಗೆ ಜಮೀರ್ ಬಾಸು ಕಾಸು, ರೇಣುಕಾಚಾರ್ಯ ಬುಸ್..ಬುಸ್..
ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮವಾಗಿರುವುದು ದೊಡ್ಡ ಹಗರಣ, ಬಿಜೆಪಿ ಸಕಾ೯ರದಲ್ಲಿ ಇದೊಂದೇ ಹಗರಣ ಅಲ್ಲ, ಈ ಹಿಂದೆ ಪ್ರೊಫೆಸರ್ ನೇಮಕಾತಿಯಲ್ಲೂ ಹಗರಣಗಳಾಗಿವೆ, ಹೀಗಾಗಿ ಬಿಜೆಪಿ ಸಕಾ೯ರ ಹಗರಣಗಳ ಸಕಾ೯ರ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ವಾಗ್ದಾಳಿ ನಡೆಸಿದರು.
ಬಿಜೆಪಿ ಸಕಾ೯ರ- ಇದು ಹಗರಣಗಳ ಸಕಾ೯ರವಾಗಿದೆ. ಭ್ರಷ್ಟಾಚಾರದಿಂದ ಕೂಡಿದೆ. ಈ ಸಕಾ೯ರದಲ್ಲಿ ನಡೆದಂತಹ ಭ್ರಷ್ಟಾಚಾರ ಮತ್ತು ಹಗರಣ ಮತ್ತೇ ಯಾವಾಗಲೂ ನಡೆದಿಲ್ಲ. ಎಲ್ಲ ಇಲಾಖೆಗಳಲ್ಲೂ ಹಗರಣಗಳು ನಡೆಯುತ್ತಿವೆ. ಪಿಎಸೈ ನೇಮಕಾತಿಯಲ್ಲಿ ಇಷ್ಟೊಂದು ವ್ಯಾಪಾಕ ಭ್ರಷ್ಟಾಚಾರ ನಡೆದಿದೆ. ಪ್ರಶ್ನೆ ಪತ್ರಿಕೆ ಕೊಟ್ಟಿರುವಂತಹದ್ದು, ತಿದ್ದಿರುವಂತಹದ್ದು, ಯಾವ ಕಾಲದಲ್ಲಿ ಇಷ್ಟೊಂದು ಅಕ್ರಮ ನಡೆದಿತ್ತು ಹೇಳಿ ಎಂದು ಪ್ರಶ್ನಿಸಿದರು.
ನಮ್ಮ ಸಕಾ೯ರದಲ್ಲೂ ನೇಮಕಾತಿ ಮಾಡಿದ್ವಿ ಆದರೆ ಯಾವ ಕಾಲದಲ್ಲೂ ಈ ರೀತಿ ಆಗಿರಲಿಲ್ಲ. ಸಕಾ೯ರವೇ ಭ್ರಷ್ಟ ಆಗಿರೋದರಿಂದ ಇಷ್ಟೆಲ್ಲಾ ಆಗಿದೆ. ಇವರೇ ಪ್ರೊಟೆಕ್ಷನ್ ಕೊಡೋವಾಗ ಯಾವಾಗ ಹಿಡಿತಾರೆ ಎಂದು ಪ್ರಶ್ನೆ ಮಾಡಿದ ಸಿದ್ದರಾಮಯ್ಯ,ಒಬ್ಬ ಹೆಣ್ಣು ಮಗಳು (ದಿವ್ಯಾ ಹಾಗರಗಿ) ಇದಲ್ಲದೆ, ಹಿಂದೆಯೂ ಇಂತಹ ಹಗರಣ ಮಾಡಿರಬಹುದು. ಆ ಹೆಣ್ಣು ಮಗಳನ್ನ ಹಿಡಿಯೋಕೆ 20 ದಿನ ಬೇಕೆಂದರೆ ಫೇಲ್ಯೂವರ್ ಅಲ್ವಾ ಎಂದ ಸಿದ್ದರಾಮಯ್ಯ, ಆಕೆಯನ್ನ ನಿನ್ನೆ ಹಿಡಿದಿದ್ದಾರಂತೆ ನನಗೆ ಗೊತ್ತಿಲ್ಲ ಆದರೆ ತಕ್ಷಣ ಹಿಡಿಯಬೇಕಿತ್ತು. ಇದರ ಹಿಂದೆ ಪೋಲಿಸನವರು ಮತ್ತು ಸಕಾ೯ರದ ಪ್ರೊಟೆಕ್ಷನ್ ಇದೆ ಎಂದರು.
ಇನ್ನು ಇದೇ ಸಂದರ್ಭದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿ ಸೇತಾ೯ರೆ ಎಂಬ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ನನಗೇನು ಅದು ಗೊತ್ತಿಲ್ಲ ಎಂದು ಹೇಳಿ ಹೋದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್.ವೈ.ಮೇಟಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಮತ್ತು ಗಾಯತ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರವೀಂದ್ರ ಕಲಬುಗಿ೯ ಮತ್ತಿತರರು ಉಪಸ್ಥಿತರಿದ್ದರು.