ರಾಜ್ಯ ರಾಜಕಾರಣಕ್ಕೆ ರಮ್ಯಾ ರೀ ಎಂಟ್ರಿ: ಎರಡು ಕ್ಷೇತ್ರದಲ್ಲಿ ಸ್ಪರ್ಧೆ ನಿರೀಕ್ಷಿತ

ರಾಜ್ಯ ರಾಜಕಾರಣಕ್ಕೆ ಚಿತ್ರನಟಿ ರಮ್ಯಾ (ದಿವ್ಯ ಸ್ಪಂದನಾ) ರಿ ಎಂಟ್ರಿ ಕೊಡಲಿದ್ದಾರೆ. ಇನ್ನು ಬೆಂಗಳೂರಿನ ಪದ್ಮನಾಭನಗರ ಅಥವಾ ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದಾರೆ.

Ramya re entry into state politics Contest expected in two constituencies sat

ಬೆಂಗಳೂರು (ಮಾ.20): ರಾಜ್ಯ ರಾಜಕಾರಣಕ್ಕೆ ಚಿತ್ರನಟಿ ರಮ್ಯಾ (ದಿವ್ಯ ಸ್ಪಂದನಾ) ರಿ ಎಂಟ್ರಿ ಕೊಡಲಿದ್ದಾರೆ. ಇನ್ನು ಬೆಂಗಳೂರಿನ ಪದ್ಮನಾಭನಗರ ಅಥವಾ ರಾಮನಗರ ಜಿಲ್ಲೆಯ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ಎರಡು ಕ್ಷೇತ್ರಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರಮ್ಯಾ ಕರೆ ತರಲು‌ ಪ್ರಯತ್ನ ಮಾಡಲಾಗಿದೆ. ಪದ್ಮನಾಭನಗರ , ಚನ್ನಪಟ್ಟಣ ಕ್ಷೇತ್ರದ ಲೆಕ್ಕಾಚಾರ ಮಾಡಿರುವ ಕಾಂಗ್ರೆಸ್ ನಾಯಕರು. ಪ್ರಮುಖ ಒಕ್ಕಲಿಗ ಸಮೂದಾಯದ ಮತಸೆಳೆಯಲು ಪ್ಲಾನ್ ಮಾಡಲಾಗಿದೆ. ಪದ್ಮನಾಭನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಆಕಾಂಕ್ಷಿಗಳ ಮಧ್ಯದಲ್ಲಿ ಪೈಪೋಟಿ ಇದೆ. ಇನ್ನು ಇಲ್ಲಿ ನಾಯ್ಡು ಸಮೂದಾಯದ ವ್ಯಕ್ತಿ ಅಭ್ಯರ್ಥಿಯಾದರೆ ಒಕ್ಕಲಿಗ ಮತ ಸೆಳೆಯಲು ಕಷ್ಟವಾಗಲಿದೆ. ಆದ್ದರಿಂದ ಒಕ್ಕಲಿಗ ಮತ್ತು ಅಹಿಂದ ಮತ ಲೆಕ್ಕಾಚಾರದಲ್ಲಿ ರಮ್ಯಾ ಸೂಕ್ತ ಅನ್ನೋ ಮಾತು ಕೇಳಿಬರುತ್ತಿದೆ. ಆದ್ದರಿಂದ ರಮ್ಯಾ ಅವರನ್ನು ಕಣಕ್ಕಿಳಿಸಲು ಮುಂದಾಗಿದೆ. ಜೊತೆಗೆ ಸಚಿವ ಆರ್.ಅಶೋಕ ವಿರೋಧಿ‌ ಮತಗಳ ಕ್ರೋಢಿಕರಣದ ಲೆಕ್ಕಾಚಾರ ಮಾಡಲಾಗಿದೆ.



ಐಷಾರಾಮಿ ಕಾರು ಬಿಟ್ಟು ಸ್ಕೂಟಿ ಬಳಸುತ್ತಿರುವ ರಮ್ಯಾ; ರಸ್ತೆ ಗುಂಡಿ- ಟ್ರಾಫಿಕ್ಸ್ Maza Aaya ಎಂದ ನೆಟ್ಟಿಗರು?

ಚನ್ನಪಟ್ಟಣದಲ್ಲಿ ಘಟಾನುಘಟಿಗಳಿಗೆ ರಮ್ಯಾ ಟಾಂಗ್: ಮತ್ತೊಂದೆಡೆ ರಮ್ಯಾ ಅವರ ಸ್ಪರ್ಧೆಯನ್ನು ಪದ್ಮನಾಭನಗರ ಕ್ಷೇತ್ರ ಹೊರತುಪಡಿಸಿದರೆ ಚನ್ನಪಟ್ಟಣ ಕ್ಷೇತ್ರದತ್ತ ದೃಷ್ಟಿ ಹರಿಸಲಾಗಿದೆ. ರಮ್ಯಾ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯಾಗುವ ಸಾಧ್ಯತೆಯಿದೆ. ಇನ್ನು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಮುಖ್ಯಮಂತ್ರಿ ಅಭ್ಯರ್ಥಿ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿಯಿಂದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಸ್ಪರ್ಧೆ ಮಾಡುತ್ತಿದ್ದಾರೆ. ಅವರಿಗೆ ಠಕ್ಕರ್‌ ಕೊಡಲು ಹಾಗೂ ಒಕ್ಕಲಿಗ ಮತಗಳನ್ನು ಸೆಳೆಯಲು ರಮ್ಯಾ ಅವರನ್ನು ಸ್ಪರ್ಧೆಗಿಳಿಸಲು ಚಿಂತನೆ ಮಾಡಲಾಗಿದೆ. ಕಾಂಗ್ರೆಸ್ ಪಾಳಯದಲ್ಲಿ ಈ ಬಗ್ಗೆ ಗಂಭೀರವಾಗಿ ಚರ್ಚೆಯನ್ನು ಮಾಡಲಾಗುತ್ತಿದೆ. ಶೀಘ್ರದಲ್ಲೇ ಈ ಕುರಿತು ಅಂತಿಮ‌ ನಿರ್ಧಾರಗಳು ಪ್ರಕಟವಾಗಲಿದೆ ಎಂದು ಕಾಂಗ್ರೆಸ್ ಮೂಲಗಳಿಂದ ತಿಳಿದುಬಂದಿದೆ.

Karnataka Election : ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ರಮ್ಯ ?

ಹಿಂದೆಯೂ ವರದಿಯಾಗಿತ್ತು!
ಚನ್ನಪಟ್ಟಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ನಟಿ, ಮಾಜಿ ಸಂಸದೆ ರಮ್ಯಾ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿ ಈ ಹಿಂದೆಯೂ ಚರ್ಚೆಯಾಗಿತ್ತು. ಈ ಬಗ್ಗೆ ಬಹಳಷ್ಟು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ತೀರ್ಮಾನ ಕೈಗೊಳ್ಳಲಿದೆ. ಕುಮಾರಸ್ವಾಮಿ ಅವರನ್ನು ಎದುರಿಸಲು ಸಾಕಷ್ಟು ಸಮರ್ಥರು ಕಾಂಗ್ರೆಸ್‌ನಲ್ಲಿಯೂ  ಇದ್ದಾರೆ  ಎಂದು, ಮಂಡ್ಯ ಕಾಂಗ್ರೆಸ್ ಮುಖಂಡ ಚೆಲುವಾರಯ ಸ್ವಾಮಿ ಹೇಳಿದ್ದರು. ಅಲ್ಲದೆ ಮಂಡ್ಯ ಸಂಸತ್ ಕ್ಷೇತ್ರಕ್ಕೂ ರಮ್ಯಾ ಹೆಸರು ಕೇಳಿ ಬಂದಿತ್ತಾದರೂ, ಇದನ್ನು ನಟಿ ತಳ್ಳಿ ಹಾಕಿದ್ದರು. 

Latest Videos
Follow Us:
Download App:
  • android
  • ios