ರಾಮನಗರ ಜಿಲ್ಲಾ ಆಸ್ಪತ್ರೆ ಉದ್ಘಾಟನೆಯ ವೇಳೆ ಕಾಂಗ್ರೆಸ್‌ ಸಂಸದ ಡಿ.ಕೆ. ಸುರೇಶ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ನಡುವೆ ಜಟಾಪಟಿ ನಡೆದಿದೆ.

ರಾಮನಗರ (ಮಾ.02): ರಾಮನಗರ ಜಿಲ್ಲೆ ರಚನೆಯಾಗಿ 16 ವರ್ಷಗಳ ನಂತರ ಲೋಕಾರ್ಪಣೆಗೊಂಡ ಸುಸಜ್ಜಿತ 500 ಹಾಸಿಗೆಗಳ ಜಿಲ್ಲಾ ಆಸ್ಪತ್ರೆ ಉದ್ಘಾಟನೆಯ ವೇಳೆ ಕಾಂಗ್ರೆಸ್‌ ಸಂಸದ ಡಿ.ಕೆ. ಸುರೇಶ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರ ನಡುವೆ ಜಟಾಪಟಿ ನಡೆದಿದೆ. ಇನ್ನು ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

ರಾಮನಗರದಲ್ಲಿ ಸುಮಾರು 94 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ 500 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಜಿಲ್ಲಾ ಆಸ್ಪತ್ರೆಯ ಕಟ್ಟಡವನ್ನು ಇಂದು ಬೆಳಗ್ಗೆ ಲೋಕಾರ್ಪಣೆ ಮಾಡಲು ನಿರ್ಧರಿಸಲಾಗಿತ್ತು. ಆರೋಗ್ಯ ಸಚುವ ಡಾ.ಕೆ. ಸುಧಾಕರ್‌ ಅವರು ಕಟ್ಟಡ ಉದ್ಘಾಟನೆ ಮಾಡಲಿದ್ದು, ಈ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ. ಅಶ್ವತ್ಥನಾರಾಯಣ, ಶಾಸಕಿ ಅನಿತಾ ಕುಮಾರಸ್ವಾಮಿ, ಹಾಗೂ ಸಂಸದ ಡಿ.ಕೆ. ಸುರೇಶ್‌ ಅವರು ಒಂದೇ ವೇದಿಕೆಯಲ್ಲಿ ಭಾಗವಹಿಸಬೇಕಿತ್ತು. 

ರೇಷ್ಮೆನಗರಿಯಲ್ಲಿ 16 ವರ್ಷದ ಬಳಿಕ ಜಿಲ್ಲಾಸ್ಪತ್ರೆ ಉದ್ಘಾಟನೆ: ಕ್ರೆಡಿಟ್‌ ಪಡೆಯಲು 3 ಪಕ್ಷಗಳ ಗುದ್ದಾಟ

ಕಾರ್ಯಕರ್ತರ ಮೇಲೆ ಲಘು ಲಾಠಿ ಪ್ರಹಾರ:
ಆದರೆ, ಆರೋಗ್ಯ ಸಚಿವ ಸುಧಾಕರ್‌ ಅವರಿಗೆ ಇನ್ನೊಂದು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾದ ಅನಿವಾರ್ಯತೆ ಹಿನ್ನೆಲೆಯಲ್ಲಿ ಸಂಸದ ಸುರೇಶ್‌ ಅವರ ಬರುವ ಮುನ್ನವೇ ಕಟ್ಟಡ ಉದ್ಘಾಟನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿದೆ. ಕೈ- ಕೈ ಮಿಲಾಯಿಸುವ ಮಟ್ಟಿಗೆ ಜಗಳ ನಡೆದಿದ್ದು, ಇದನ್ನು ಮೊದಲೇ ನಿರೀಕ್ಷೆ ಮಾಡಿದ್ದ ಜಿಲ್ಲಾ ಪೊಲೀಸರು ಕಾರ್ಯಕರ್ತರ ಮೇಲೆ ಲಘು ಲಾಠಿ ಪ್ರಹಾರ ಮಾಡಿ ಗಲಾಟೆಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. 

ಸಚಿವರ ವಿರುದ್ಧ ಹರಿಹಾಯ್ದ ಡಿ.ಕೆ. ಸುರೇಶ್: ಇನ್ನು ಸಂಸದ ಡಿ.ಕೆ. ಶಿವಕುಮಾರ್‌ ಅವರು ಯಾರೀ ಅದು ಸಚಿವರು ನಾನು ಒಬ್ಬ ಜನಪ್ರತಿನಿಧಿ ಅನ್ನೋದನ್ನು ಮರೆತು ಉದ್ಘಾಟನೆ ಮಾಡಿದ್ದಾರೆ ಎಂದು ಹರಿಹಾಯ್ದರು. ಈ ವೇಳೆ ಸಚಿವ ಸುಧಾಕರ್‌ ಅವರು ಸಂಸದ ಡಿ.ಕೆ. ಸುರೇಶ್‌ ಅವರನ್ನು ಮನವೊಲಿಸಿದ್ದಾರೆ. ನಂತರ ವೇದಿಕೆ ಕಾರ್ಯಕ್ರಮದ ವೇಳೆ ಸಂಸದ ಡಿ.ಕೆ. ಸುರೇಶ್‌ ಅವರೊಂದಿಗೆ ಸಚಿವ ಅಶ್ವತ್ಥನಾರಾಯಣ ಅವರು ಚರ್ಚೆ ನಡೆಸಿ ಉದ್ಘಾಟನೆ ಮಾಡಿದ್ದಕ್ಕೆ ಇದ್ದ ವಸ್ತು ಸ್ಥಿತಿಯನ್ನು ಮನವಡಿಕೆ ಮಾಡಿಕೊಡಲು ಪ್ರಯತ್ನಿಸಿದ್ದರು.

ಒಂದೇ ವೇದಿಕೆಯಲ್ಲಿ ಮೂರು ಪಕ್ಷಗಳ ಗಣ್ಯರು: ಇನ್ನು ರಾಮನಗರದ ಜಿಲ್ಲಾಸ್ಪತ್ರೆ ಕಟ್ಟಡ ಲೋಕಾರ್ಪಣೆಯ ವೇಳೆ ಒಂದೇ ವೇದಿಕೆಯಲ್ಲಿ ಮೂರೂ ಪಕ್ಷಗಳ ಘಟನಾನುಘಟಿ ನಾಯಕರು ಹಾಜರಾಗಿದ್ದರು. ಸಚಿವರಾದ ಡಾ ಕೆ ಸುಧಾಕರ್, ಅಶ್ವಥ್ ನಾರಾಯಣ, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಸಂಸದ ಡಿಕೆ ಸುರೇಶ್, ಶಾಸಕಿ ಅನಿತಾ ಕುಮಾರಸ್ವಾಮಿ, ಶಾಸಕ ಎ.ಮಂಜುನಾಥ್, ವಿಧಾನಪರಿಷತ್‌ ಸದಸ್ಯರಾದ ಎಸ್. ರವಿ, ಸಿ.ಎಂ.ಲಿಂಗಪ್ಪ, ಆ.ದೇವೆಗೌಡ ಭಾಗವಹಿಸಿದ್ದರು. ಮೂರು ಪಕ್ಷದ ನಾಯಕರ ಸಮಾಗಮಕ್ಕೆ ಜಿಲ್ಲಾಸ್ಪತ್ರೆ ಉದ್ಘಾಟನೆ ಕಾರ್ಯಕ್ರಮ ಸಾಕ್ಷಿಯಾಗಿದೆ.

ಮೋದಿಯ ಸುಳ್ಳುಗಳ ಸರಮಾಲೆಗೆ 9 ವರ್ಷಗಳಾಗಿವೆ: ಸಂಸದ ಡಿ.ಕೆ ಸುರೇಶ್

ಜಿಲ್ಲಾಧಿಕಾರಿಗೂ ತರಾಟೆ ತೆಗೆದುಕೊಂಡ ಸಂಸದ: ನೂತನ ಜಿಲ್ಲಾಸ್ಪತ್ರೆ ಉದ್ಘಾಟನೆ ಹಿನ್ನೆಲೆಯಲ್ಲಿ ತಮ್ಮನ್ನು ಬಿಟ್ಟು ಕಟ್ಟಡ ಉದ್ಘಾಟನೆ ಮಾಡಿದ್ದರಿಂದಾಗಿ ಆಕ್ರೋಶಗೊಂಡ ಸಂಸದ ಡಿ.ಕೆ. ಸರೇಶ್‌ ಅವರು ಜಿಲ್ಲಾ ಉಸ್ತುವಾರಿ ಸಚಿವರ ತರಾಟೆಗೆ ತೆಗೆದುಕೊಂಡರು. ಉಸ್ತುವಾರಿ ಸಚಿವರಿಗೆ ಪ್ರೋಟೋಕಾಲ್‌ ಸರಿಯಾಗಿ ಪಾಲಿಸೋಕಾಗಲ್ವಾ ಎಂದು ಗರಂ ಆದರು. ಯಾರ್ ರಿ ಅವನು ಡಿಸ್ಟ್ರಿಕ್ಟ್ ಕಮಿಷನರ್ (ಡಿಸಿ) ಎಂದು ಕಿಡಿಕಾರಿದರು. ಈ ವೇಳೆ ಗಲಾಟೆ ಬೇಡ ಮಾತನಾಡೋಣ ಎಂದ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಅವರನ್ನು ಸಮಾಧಾನ ಮಾಡಿದರು.