BJP Politics: ರಮೇಶ ಜಾರಕಿಹೊಳಿ ಸಚಿವರಾಗ್ತಾರೆ ಯಾರದ್ದೂ ವಿರೋಧವಿಲ್ಲ: ಕಟೀಲ್
* ರಮೇಶ ಜಾರಕಿಹೊಳಿಗೆ ಸಚಿವ ಸ್ಥಾನ ಖಚಿತ
* ಚುನಾವಣೆ ಸೇರಿ ಬೇರೆ ಬೇರೆ ಕಾರಣಗಳಿಂದ ವಿಳಂಬ
* ಶಿಕ್ಷಕರ ಮತ್ತು ಪದವೀಧರ ರಕ್ಷಣೆ ಮಾಡಲು ಬಿಜೆಪಿ ಸರ್ಕಾರ ಬದ್ಧ
ಗೋಕಾಕ(ಜೂ.08): ರಮೇಶ ಜಾರಕಿಹೊಳಿ ಅವರು ಸಚಿವರಾಗುತ್ತಾರೆ. ಚುನಾವಣೆ ಸೇರಿ ಬೇರೆ ಬೇರೆ ಕಾರಣಗಳಿಂದ ವಿಳಂಬವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಅವರು ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ರಮೇಶ ಜಾರಕಿಹೊಳಿ ನಾವು ಒಂದಾಗಿದ್ದೇವೆ. ಪಕ್ಷ ಹಾಗೂ ಸರ್ಕಾರ ಮಟ್ಟದಲ್ಲಿ ಚರ್ಚೆಯಾಗಿದೆ. ಕೆಲವು ಚುನಾವಣೆ ಸೇರಿ ಬೇರೆ ಬೇರೆ ಕಾರಣದಿಂದ ಮಂತ್ರಿ ಸ್ಥಾನ ನೀಡುವುದು ತಡವಾಗಿದೆ. ರಮೇಶ ಜಾರಕಿಹೊಳಿ ಮಂತ್ರಿಸ್ಥಾನದ ಕುರಿತು ಪಕ್ಷದಲ್ಲಿ ಯಾವುದೇ ವಿರೋಧವಿಲ್ಲ. ಎಲ್ಲರೂ ಜೊತೆಯಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಆತ್ಮೀಯತೆ, ವಿಶ್ವಾಸಕ್ಕೂ ಹಾಗೂ ರಾಜಕಾರಣಕ್ಕೂ ಅಜಗಜಾಂತರ ವ್ಯತ್ಯಾಸ ಇದೆ: ಬಿಎಸ್‌ವೈ
ಪದವೀಧರ ಕ್ಷೇತ್ರದ ಹೆಚ್ಚಿನ ಮತಗಳಿವೆ. ಹೀಗಾಗಿ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿದ ಅರುಣ ಶಹಾಪೂರ 15 ಸಾವಿರ ಅಂತರ ಪಡೆದುಕೊಳ್ಳಲಿದ್ದಾರೆ ಎಂದು ಬಿಎಸ್‌ವೈ ಹೇಳಿದ್ದಾರೆ. ಅರುಣ ಶಹಾಪೂರ ಗೆದ್ದೆ ಗೆಲ್ಲುತ್ತಾರೆ. ಪಠ್ಯಪುಸ್ತಕ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣ ಮಾಡಬಾರದು. ಈ ಮೊದಲು ಸಿದ್ದರಾಮಯ್ಯನವರು ಇದ್ದಾಗ ಯಾವ ಯಾವ ಪಾಠ ಮತ್ತು ಏನೇನು ಸೇರಿಸಿದ್ದರು ಎಂಬುದು ಗೊತ್ತಿದೆ. ಬಿಜೆಪಿ ಸಮಿತಿ ರಚನೆ ಮಾಡಿದೆ. ಇತಿಹಾಸ ತಿರುಚುವ ಕೆಲಸವನ್ನು ಬಿಜೆಪಿ ಮಾಡಲ್ಲ ಎಂದು ಕಾಂಗ್ರೆಸ್‌ಗೆ ಟಾಂಗ್ ನೀಡಿದರು.
ಮೋದಿ ಕೈಬಲಪಡಿಸಿ:
ಪ್ರಜ್ಞಾವಂತ ಮತದಾರರು ಬಿಜೆಪಿಗೆ ಬೆಂಬಲ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸುವಂತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮನವಿ ಮಾಡಿದರು.
ಮಂಗಳವಾರ ಭಾರತೀಯ ಜನತಾ ಪಾರ್ಟಿ ನಗರ ಮತ್ತು ಗ್ರಾಮೀಣ ಮಂಡಳ ವತಿಯಿಂದ ಹಮ್ಮಿಕೊಂಡ ವಾಯವ್ಯ ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಆಡಳಿತದ ಮೂಲಕ ಜಗತ್ತೇ ಗುರುತಿಸುವ ಸ್ಥಾನಕ್ಕೆ ಭಾರತ ಏರಿದೆ. ವಿಧಾನಪರಿಷÜತ್ತಿನ ಎಲ್ಲ ನಾಲ್ಕು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಬಿಜೆಪಿ ಸರ್ಕಾರ ರಾಜ್ಯದಲ್ಲಿ ಶಿಕ್ಷಕರ ಪರವಾಗಿ ಧ್ವನಿ ಎತ್ತಿ ಶಿಕ್ಷಕರ ಬೆಂಬಲಕ್ಕೆ ನಿಂತಿದೆ. ಶಿಕ್ಷಣದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತಂದ ಮೊದಲ ಸರ್ಕಾರ ನಮ್ಮ ಬೊಮ್ಮಾಯಿ ಸರಕಾರ. ರಾಜ್ಯದ ಎಲ್ಲ ಕಡೆ ಬಿಜೆಪಿ ಪರವಾಗಿ ವಾತಾವರಣ ಇದೆ ಎಂದರು.
Belagavi: ಕಾಂಗ್ರೆಸ್‌ಗೆ ಚಡ್ಡಿ ಕಳಿಸ್ತೀನಿ, ಫೋನ್ ಮಾಡೋಕೆ ಹೇಳಿ ಎಂದ ಬಿಜೆಪಿ ಮಾಜಿ ಶಾಸಕ!
ಶಿಕ್ಷಕರ ಮತ್ತು ಪದವೀಧರ ರಕ್ಷಣೆ ಮಾಡಲು ಬಿಜೆಪಿ ಸರ್ಕಾರ ಬದ್ಧವಿದ್ದು, ಶಿಕ್ಷಕರಿಗೆ ಪ್ರಾತಿನಿಧ್ಯ ನೀಡುವ ನಿಟ್ಟಿನಲ್ಲಿ ಬಿಜೆಪಿ ಸರ್ಕಾರ ಎಲ್ಲ ರೀತಿಯ ಕಾರ್ಯ ಮಾಡುತ್ತಿದ್ದೆ. ಜೆಡಿಎಸ್‌ನ ಬಸವರಾಜ ಹೊರಟ್ಟಿಅವರು ಜನತಾ ಪಾರ್ಟಿಯ ಬದ್ಧತೆ ನೋಡಿ ಪಕ್ಷಕ್ಕೆ ಬಂದು 8ನೇ ಬಾರಿ ಚುನಾವಣೆ ಎದುರಿಸಿದ್ದಾರೆ. ಆ ಕ್ಷೇತ್ರ ಸೇರಿ ಇನ್ನೂಳಿದ 3 ವಿಧಾನ ಪರಿಷÜತ್ ಸ್ಥಾನಗಳನ್ನು ಈ ಬಿಜೆಪಿ ಗೆಲುವುದು ನಿಶ್ಚಿತ. ಆ ನಿಟ್ಟಿನಲ್ಲಿ ಎಲ್ಲಾ ಕಾರ್ಯಕರ್ತರು ಒಗ್ಗಟ್ಟಿನಿಂದ ಕಾರ್ಯ ಮಾಡಬೇಕು ಎಂದು ಹೇಳಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಗ ನಾಯಕ, ಎಸ್ ಕೇಶವ ಪ್ರಸಾದ್, ಸಂಸದೆ ಮಂಗಳಾ ಅಂಗಡಿ, ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ರಮೇಶ ಜಾರಕಿಹೊಳಿ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಶಾಸಕ ಎಂ.ಎಲ್.ಮುತ್ತೆನ್ನವರ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಭೀಮಶಿ ಭರಮನ್ನವರ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಪಕ್ಷದ ಮುಖಂಡರುಗಳಾದ ಸುಭಾಷ ಪಾಟೀಲ, ಜಯಾನಂದ ಮುನ್ನವಳ್ಳಿ, ಎಲ್.ಟಿ ತಪಸಿ, ರಾಜೇಶ್ವರಿ ಒಡೆಯರ, ಬಸವರಾಜ ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.