Belagavi: ಕಾಂಗ್ರೆಸ್‌ಗೆ ಚಡ್ಡಿ ಕಳಿಸ್ತೀನಿ, ಫೋನ್ ಮಾಡೋಕೆ ಹೇಳಿ ಎಂದ ಬಿಜೆಪಿ ಮಾಜಿ ಶಾಸಕ!
• ಕಾಂಗ್ರೆಸ್ ಚಡ್ಡಿ ಸುಡೋ ಅಭಿಯಾನಕ್ಕೆ ಸಂಜಯ್ ಪಾಟೀಲ್ ವ್ಯಂಗ್ಯ
• ಖಾಕಿ ಚಡ್ಡಿ ಕಳಿಸ್ತೀರಾ ಬೇರೆ ಚಡ್ಡಿ ಕಳಿಸ್ತೀರಾ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದ ಮಾಜಿ ಶಾಸಕ
• ಬಿಜೆಪಿ ಅಧಿಕಾರಕ್ಕೆ ಬರಲು RSS ಪಾತ್ರ ದೊಡ್ಡದು ಎಂದ ಸಂಜಯ್ ಪಾಟೀಲ್
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ
ಬೆಳಗಾವಿ (ಜೂ.07): ರಾಜ್ಯ ರಾಜಕಾರಣದಲ್ಲಿ ಸದ್ಯ ಚಡ್ಡಿ ವಾರ್ ಜೋರಾಗಿದೆ. ಕಾಂಗ್ರೆಸ್‌ನ ಚಡ್ಡಿ ಸುಡುವ ಅಭಿಯಾನಕ್ಕೆ ಮಾಜಿ ಶಾಸಕ, ಬೆಳಗಾವಿ ಗ್ರಾಮಾಂತರ ಬಿಜೆಪಿ ಘಟಕದ ಅಧ್ಯಕ್ಷ ಸಂಜಯ್ ಪಾಟೀಲ್ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ವತಿಯಿಂದ ಚಡ್ಡಿ ಸುಡುವ ಅಭಿಯಾನ ವಿಚಾರವಾಗಿ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಸಂಜಯ್ ಪಾಟೀಲ್, 'ನಂದೂ ಚಡ್ಡಿ ಕೊಡ್ತೀನಿ ಹೇಳ್ರಿ ಸುಡಾಕ್, ಏನ್ ಮಾಡೋದೈತಿ? ಅವರಿಗೆ ಸುಡೋದೇ ಅಭ್ಯಾಸ ಇದ್ರೆ ಏನೂ ಮಾಡಕ್ಕಾಗಲ್ಲ. ಅವರಿಗೆ ಚಡ್ಡಿ ಸುಡೋ ಆತುರ ಇದ್ರೆ ಏನು ಮಾಡಕ್ಕಾಗುತ್ತೆ.
ಅವರಿಗೆ ಚಡ್ಡಿಗಳು ಕಡಿಮೆ ಬಿದ್ರೆ ಕೊಡ್ತೀನಿ' ಎಂದರು. ಖಾಕಿ ಚಡ್ಡಿ ಕೊಡ್ತೀರಾ ಬೇರೆ ಚಡ್ಡಿ ಕೊಡ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಸಂಜಯ್ ಪಾಟೀಲ್ ಸ್ಪಷ್ಟ ಉತ್ತರ ನೀಡಲಿಲ್ಲ. ಚಡ್ಡಿ ಮೇಲೆ ಕಾಂಗ್ರೆಸ್ ನವರಿಗೆ ಏಕೆ ಪ್ರೀತಿ ಬಂದಿದೆ ಅಂತಾ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, 'ಪ್ರೀತಿ ಅಲ್ಲ, ಅವರು ಫ್ರಸ್ಟರೇಟ್ ಆಗಿದಾರೆ. ಏಕಂದ್ರೆ RSS ನೇತೃತ್ವದಲ್ಲಿ ದೇಶದ ಪ್ರತಿಯೊಂದು ರಾಜ್ಯದಲ್ಲಿ ಸ್ಥಾನಮಾನ ಗಳಿಸಿದ್ದೇವೆ. ಸಿಎಂ ನಮ್ಮವರೇ ಇದ್ದಾರೆ, ಪ್ರಧಾನಿ ನಮ್ಮವರೇ ಇದ್ದಾರೆ, ರಾಷ್ಟ್ರಪತಿ ನಮ್ಮವರೇ ಇದ್ದಾರೆ.
'ನಿಮ್ನಿಮ್ಮ ಚಡ್ಡಿ ಬಿಚ್ಚಿಕೊಳ್ಳಿ ತೊಂದರೆ ಇಲ್ಲ-ಜನರ ಚಡ್ಡಿ ಬಿಚ್ಚಬೇಡಿ' ಎಂದ ಹೆಚ್‌ಡಿಕೆ
ಯಾವ ಕಾಂಗ್ರೆಸ್ ಒಂದ್ ಕಾಲದಲ್ಲಿ ದೇಶ ಆಳಿತ್ತು ಇಂದು ವಿರೋಧ ಪಕ್ಷ ಸ್ಥಾನವೂ ಸಿಗ್ತಿಲ್ಲ. ಹೀಗಾಗಿ ಫ್ರಸ್ಟ್‌ರೇಷನ್‌ನಲ್ಲಿ ಅವರು ಆ ತರಹ ಮಾಡ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರಲು RSSದ್ದು ದೊಡ್ಡ ಪಾತ್ರ ಅಂತಾ ನಾವು ಒಪ್ಪಿಕೊಳ್ಳುತ್ತೇವೆ. RSS ಆಶೀರ್ವಾದ ಮಾರ್ಗದರ್ಶನದಿಂದ ಬಿಜೆಪಿ ಅಧಿಕಾರದಲ್ಲಿ ಇದೆ' ಎಂದರು. ಇನ್ನು ಕಾಂಗ್ರೆಸ್‌ಗೆ ಯಾವಾಗ ಚಡ್ಡಿ ಕಳಿಸ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ, 'ಅವರಿಗೆ ನನ್ನ ಫೋನ್ ನಂಬರ್ ಕೊಡಿ, ಅವರಿಗೆ ಯಾವಾಗ ಬೇಕೋ ನಾನು ಕಳಿಸುವ ವ್ಯವಸ್ಥೆ ಮಾಡ್ತೀನಿ' ಎಂದರು.
ಹೇಗೆ ಚಡ್ಡಿ ಕಳಿಸ್ತೀರಾ ಕೋರಿಯರ್ ಮಾಡ್ತೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, 'ಪರ್ಸನಲ್ ಕೊಟ್ಟಿ ಕಳಿಸುವೆ. ಅವರೂ ನಮ್ಮವರು ಇದಾರೆ ಪಾಪ, ಕೋರಿಯರ್ ಏಕೆ ಮಾಡೋದು? ನಮ್ಮವರಿದಾರೆ ಪಾಪ, ಅವರೇನು ಪಾಕಿಸ್ತಾನದವರಿದಾರಾ? ನಮ್ಮ ದೇಶದವರಿದಾರೆ, ಅವರಿಗೇನಾದರೂ ಅವಶ್ಯಕತೆ ಬಿದ್ರೆ ಫೋನ್ ಮಾಡಲಿ ಕಳಿಸಿಕೊಡುವೆ' ಎಂದರು.
ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ವಜಾ ಮಾಡಿಲ್ಲ: ಸಚಿವ ಅಶ್ವತ್ಥನಾರಾಯಣ
RSS ಮಾರ್ಗದರ್ಶನ ಮಾಡುತ್ತಿರೋದಕ್ಕೆ ನಮಗೆ ಹೆಮ್ಮೆ ಇದೆ: ಮುಂದುವರಿದು ಮಾತನಾಡಿದ ಮಾಜಿ ಶಾಸಕ ಸಂಜಯ್ ಪಾಟೀಲ್, 'ಕಾಂಗ್ರೆಸ್‌ನವರಿಗೆ ಆರ್‌ಎಸ್ಎಸ್ ಸಂಘಟನೆ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. RSS ದೇಶಭಕ್ತ ಸಮಾಜಸೇವಾ ಸಂಘಟನೆ. ನಮಗೆ RSS ಮಾರ್ಗದರ್ಶನ ಮಾಡುತ್ತಿರುವುದಕ್ಕೆ ಬಹಳ ಹೆಮ್ಮೆ ಇದೆ. ಕಾಂಗ್ರೆಸ್ ನವರು ಸೂರ್ಯನ ಮೇಲೆ ಉಗುಳಲು ಯತ್ನಿಸುತ್ತಿದ್ದು ಅವರ ಮುಖದ ಮೇಲೆ ಬೀಳೋದು. ಅದಕ್ಕಾಗಿ ಅದನ್ನೇನೂ ತಲೆ ಕೆಡಿಸಿಕೊಳ್ಳಲ್ಲ' ಎಂದರು.