ಬೆಂಗಳೂರು, (ಮಾ.12): ರಾಜ್ಯ ರಾಜಕಾರಣದಲ್ಲಿ ಭಾರೀ ಸುದ್ದು ಮಾಡುತ್ತಿರೋ ರಮೇಶ್‌ ಜಾರಕಿಹೊಳಿ ರಾಸಲೀಲೆ ಸಿ.ಡಿ. ಕೇಸ್ ತನಿಖೆಯನ್ನು ಎಸ್‌ಐಟಿ ಚುರುಕುಗೊಳಿಸಿದ್ದು, ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದ ವಿಚಾರಣೆ ನಡೆಸಿದೆ.

ಹೌದು...ಮೊನ್ನೇ ಅಷ್ಟೇ ರಾಜ್ಯ ಸರ್ಕಾರ ಪ್ರಕರಣದ ತನಿಖೆಗಾಗಿ ಎಸ್‌ಐಟಿಗೆ ವಹಿಸಿದ್ದು, ಅದರಂತೆಯೇ ಎಸ್ಐಟಿ ತನಿಖೆ ಚುರುಕುಗೊಡಿದ್ದು, ಓರ್ವ ವ್ಯಕ್ತಿಯನ್ನ ಎಸ್‌ಐಟಿ ತನ್ನ ವಶಕ್ಕೆ ಪಡೆದಿದ್ದು, ಆತನ ವಿಚಾರಣೆಯನ್ನ ಆರಂಭಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ರಾಸಲೀಲೆ ಕೇಸ್ : ಸಾಹುಕಾರನ ಖೆಡ್ಡಾಕ್ಕೆ ಕೆಡವಿದ ಆ ಸಂಚುಕೋರರು ಯಾರು..? ಆ ಎರಡು ಹೆಸರು! 

ಎಸ್‌ಐಸಿ ವಶಕ್ಕೆ ಪಡೆದಿರುವ ಈ ವ್ಯಕ್ತಿ ದಿನೇಶ್‌ ಕಲ್ಲಹಳ್ಳಿಗೆ ಸಿಡಿ ತಂದು ಕೊಟ್ಟಿದ್ದ ಎಂದು ಹೇಳಲಾಗ್ತಿದ್ದು, ಆತ ಎಲ್ಲಿ? ಯಾವಾಗ? ಸಿಡಿಯನ್ನ ದಿನೇಶ್‌ ಕಲ್ಲಹಳ್ಳಿಗೆ ನೀಡಿದ ಮತ್ತು ಆತನ ಕೈಗೇ ಆ ಸಿಡಿ ಸಿಕ್ಕಿದ್ದು ಹೇಗೆ? ಯಾರು ನೀಡಿದ್ರು ಅನ್ನೋ ಹಲವು ವಿಚಾರಗಳ ಬಗ್ಗೆ ತನಿಖೆ ಮುಂದುವರೆದಿದೆ.

ಮತ್ತೊಂದೆಡೆ ರಮೇಶ್ ಜಾರಕಿಹೊಳಿ ಸಹ ಈ ಪ್ರಕರಣದ ಬಗ್ಗೆ ದೂರು ನೀಡಲು ಮುಂದಾಗಿದ್ದು, ಇದರಲ್ಲಿ ಪಾಲ್ಗೊಂಡಿರುವವರನ್ನು ಜೈಲಿಗೆ ಕಳುಹಿಸಲು ಪಣತೊಟ್ಟಿದ್ದಾರೆ.