ಬೆಂಗಳೂರು(ಮಾ.  04)  ಒಂದು ಕಡೆ ವಿಧಾನಮಂಡಲ ಅಧಿವೇಶನ ಆರಂಭವಾಗಿದೆ. ಸೆಕ್ಸ್ ಸಿಡಿ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಮೇಶ್ ಜಾರಕಿಹೊಳಿ‌ ರಾಜೀನಾಮೆ  ನಂತರ ರಾಜಕೀಯ ಬೆಳವಣಿಗೆಗಳು ನಡೆದಿದ್ದು ಮಿತ್ರಮಂಡಳಿ ಸಚಿವರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.

ಗುರುವಾರ ಮಧ್ಯಾಹ್ನ ಸಿಎಂ ಭೇಟಿಯಾಗಿ ಮಿತ್ರಮಂಡಳಿಯ ಸಚಿವರು ಮಾತುಕತೆ ನಡೆಸಿದ್ದಾರೆ. ಮಧ್ಯಾಹ್ನ ಕಾವೇರಿ ನಿವಾಸದಲ್ಲಿ ಸುಧಾಕರ್, ಎಸ್ ಟಿ ಸೋಮಶೇಖರ್, ನಾರಾಯಣಗೌಡ, ಎಂಟಿ ಬಿ ನಾಗರಾಜ್, ಬಿಸಿ ಪಾಟೀಲ್ ಸಿಎಂ ಭೇಟಿಯಾಗಿದ್ದಾರೆ.

ಯಾರು ಈ ದಿನೇಶ್ ಕಲ್ಲಹಳ್ಳಿ? ರಮೇಶ್‌ಗೆ ಮಾತ್ರ ಅಲ್ಲ ಡಿಕೆಶಿಗೂ ಕಾಡಿದ್ದರು!...

ಮಧ್ಯಾಹ್ನ ಭೋಜನ ವಿರಾಮದ ವೇಳಿ ಸಿಎಂ ನಿವಾಸಕ್ಕೆ ತೆರಳಿ ಸಿಎಂ ಜೊತೆ ಚರ್ಚೆ ಮಾಡಿ ಬಂದಿದ್ದಾರೆ. ರಮೇಶ್ ಜಾರಕಿಹೊಳಿ‌ ಪ್ರಕರಣದ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

ರಮೇಶ್ ಜಾರಕಿಹೊಳಿ‌ ರಾಜೀನಾಮೆ ಬಳಿಕ ಇದೇ ಮೊದಲು ಬಾರಿಗೆ ಎಲ್ಲಾ ಮಿತ್ರ ಮಂಡಳಿಯ ಸಚಿವರು ಸಿಎಂ ಭೇಟಿಯಾಗಿ ಚರ್ಚೆ ಮಾಡಿ ಬಂದಿರುವುದು ಸಾಕಷ್ಟು ಕೂತಹಲ ಮೂಡಿಸಿದೆ.  

ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಸರ್ಕಾರ ಅಸ್ತಿತ್ವದಲ್ಲಿ ಇದ್ದಾಗ ಇದ್ದಕ್ಕಿದ್ದಂತೆ ಹದಿನೇಳು ಜನ ಶಾಸಕರು ರಾಜೀನಾಮೆ ನೀಡಿ ಮುಂಬೈಗೆ ಹಾರಿದ್ದರು. ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿಯೇ ಟೀಂ ಪ್ರಯಾಣ ಮಾಡಿತ್ತು. ಅದಾದ ಮೇಲೆ ಬದಲಾದ ರಾಜಕಾರಣದ ಸ್ಥಿತಿಯಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ವರ್ಷಗಳು ಉರುಳಿದೆ.