ಹುಬ್ಬಳ್ಳಿ (ಜ.16): ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ನಮ್ಮ ಗುರುಗಳು, ಅವರ ಪ್ರತಿಯೊಂದು ಮಾತು, ಟೀಕೆ ನಮಗೆ ಆಶೀರ್ವಾದ ಇದ್ದಂತೆ ಎಂದು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್‌ ಏನು ಮಾತನಾಡಿದ್ದಾರೋ ನನಗೆ ಗೊತ್ತಿಲ್ಲ. 

ಆದರೆ, ಅವರ ಬಗ್ಗೆ ನಮಗೆ ಅಪಾರ ಗೌರವಿದೆ. ಅವರು ಏನೇ ಮಾತನಾಡಿದರೂ ನಮಗೆ ಆಶೀರ್ವಾದವಿದ್ದಂತೆ. ಅವರಿಗೆ ಸಚಿವ ಸ್ಥಾನ ನೀಡುವ ವಿಚಾರ ನ್ಯಾಯಾಲಯದಲ್ಲಿದೆ. ಅದು ಬಗೆಹರಿದ ಮೇಲೆ ಅವರನ್ನು ಸಚಿವರನ್ನಾಗಿ ಮಾಡುತ್ತೇವೆ ಎಂದು ನುಡಿದರು. 

ಮತ್ತೆ ಸಹೋದರರ ಸವಾಲ್‌.. MLA ಆಗಿ ಆರಿಸಿ ಬರಲಿ.. ಚಾಲೆಂಜ್! ...

ಯೋಗೇಶ್ವರ್‌ ಅವರಿಗೆ ಸಚಿವ ಸ್ಥಾನ ಕೊಟ್ಟಿರುವುದು ಅತ್ಯಂತ ಯೋಗ್ಯವಾಗಿದೆ. ಒಂದು ವೇಳೆ ಅವರ ಮೇಲೆ ವಂಚನೆ ಆರೋಪವಿದ್ದರೆ, ಅದನ್ನು ವಿಶ್ವನಾಥ್‌ ಅವರು ಪಕ್ಷದ ವರಿಷ್ಠರ ಗಮನಕ್ಕೆ ತಂದರೆ ಅವರು ಕ್ರಮಕೈಗೊಳ್ಳುತ್ತಾರೆ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಪ್ರತಿಯೊಂದರಲ್ಲಿಯೂ ಹಸ್ತಕ್ಷೇಪ ಮಾಡುತ್ತಾರೆ ಎಂಬುದು ಸುಳ್ಳು. ಮುಖ್ಯಮಂತ್ರಿಗಳ ಪುತ್ರ ಎಂಬ ಕಾರಣಕ್ಕೆ ಆರೋಪ ಮಾಡಲಾಗುತ್ತಿದೆ ಎಂದು ತಿಳಿಸಿದರು.