ಮೈಸೂರು, [ಜ.28]: ರಾಜ್ಯ ಬಿಜೆಪಿಯಲ್ಲಿ ಸಂಪುಟ ವಿಸ್ತರಣೆಯದ್ದೇ ಮಾತು. ಯಾರಿಗೆ ಕೊಡಬೇಕು, ಯಾರಿಗೆ ಬಿಡಬೇಕೆನ್ನುವುದು ಯಡಿಯೂರಪ್ಪಗೆ ಒಂದೂ ತಿಳಿಯುತ್ತಿಲ್ಲ. ಇದರ ನಡುವೆ ಬೈ ಎಲೆಕ್ಷನ್ ನಲ್ಲಿ ಗೆದ್ದ 12ರಲ್ಲಿ 11 ನೂತನ ಶಾಸಕರಿಗೆ ಮಂತ್ರಿ ಮಾಡಬೇಕೆನ್ನುವ ಒತ್ತಡ ಜೋರಾಗಿದೆ.

"

ಸಚಿವ ಸ್ಥಾನಕ್ಕಾಗಿ ಆರ್. ಶಂಕರ್ ಹೊಸ ಲಾಜಿಕ್..!

ಇನ್ನು ಮಂತ್ರಿಗಿರಿಗಾಗಿ ಕಾದು ಕುಳಿತಿರುವ ನೂತನ ಶಾಸಕರು ಇಂದು ಟೆಂಪಲ್ ರನ್ ಮಾಡಿದ್ದು, ಎಲ್ಲವೂ ಒಳ್ಳೆಯದಾಗ್ಲಿ ಎಂದು ಬೇಡಿಕೊಂಡರು. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ರಮೇಶ್ ಜಾರಕಿಹೊಳಿ 11 ಶಾಸಕರು ಮಂತ್ರಿಯಾಗುವುದು ಪಕ್ಕಾ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.