Asianet Suvarna News Asianet Suvarna News

ಸಚಿವ ಸ್ಥಾನಕ್ಕಾಗಿ ಆರ್. ಶಂಕರ್ ಹೊಸ ಲಾಜಿಕ್..!

ಕೇಸರಿ ಪಾಳಯದಲ್ಲಿ ಸಂಪುಟ ವಿಸ್ತರಣೆಗೆ ಕೂಲ ಕೂಡಿಬರುತ್ತಿಲ್ಲ. ಮಂತ್ರಿಗಿರಿಗಾಗಿ ಕಾಯ್ತಿರೋ ನೂತನ ಶಾಸಕರ ಎದೆ ಬಡಿತ ಜೋರಾದಂತಿದೆ. ಈ ನಿಟ್ಟಿನಲ್ಲಿ ಸಂಪುಟ ಸಂಕಟದ ಟೆನ್ಷನ್ನಲ್ಲಿರುವ ನೂತನ ಶಾಸಕರು ಇವತ್ತು ದೇವರ ಮೊರೆ ಹೋಗಿದ್ದಾರೆ. ಇದರ ಮಧ್ಯೆ ಆರ್. ಶಂಕರ್  ಮಂತ್ರಿ ಸ್ಥಾನಕ್ಕಾಗಿ ಲಾಜಿಕ್ ಮೂಲಕ ಒತ್ತಡ ಹೇರುತ್ತಿದ್ದಾರೆ. 

R Shankar Reacts On cabinet expansion In Nanjangud
Author
Bengaluru, First Published Jan 28, 2020, 7:58 PM IST

ಬೆಂಗಳೂರು, [ಜ.28]: ಸಚಿವ ಸಂಪುಟ ವಿಸ್ತರಣೆ ಈ ವಾರವಾಗುತ್ತೆ. ಮುಂದಿನ ವಾರವಾಗುತ್ತೆ ಎಂದು ಮಂತ್ರಿಗಿರಿ ಆಕಾಂಕ್ಷಿಗಳು ಕಾತರದಿಂದ ಕಾಯುತ್ತಿದ್ದಾರೆ.

ಅಷ್ಟೇ ಅಲ್ಲದೇ ಸಚಿವಾಕಾಂಕ್ಷಿಗಳು ಬಿಎಸ್ ಯಡಿಯೂರಪ್ಪನವರ ದುಂಬಾಲು ಬಿದ್ದಿದ್ದಾರೆ. ಒಂದು ಕಡೆ ನೂತನ  ಉಪಚುನಾವಣೆಯಲ್ಲಿ ಗೆದ್ದ ನೂತನ ಶಾಸಕರು, ಮತ್ತೊಂದೆಡೆ ಬಿಜೆಪಿಯ ಹಿರಿಯ ಶಾಸಕರು ಕೂಡ ಸಚಿವ ಸ್ಥಾನಬೇಕೆ ಬೇಕು ಎಂದು ಲಾಬಿ ನಡೆಸಿದ್ದಾರೆ. ಇದ್ರಿಂದ ಬಿಎಸ್ ವೈಗೆ ದಿಕ್ಕುತೋಚದಂತಾಗಿದೆ.

ಮೇಲ್ಮನೆ ಸ್ಥಾನ ಸವದಿಗೋ, ಶಂಕರ್‌ಗೋ?: ಕಮಲಕ್ಕೆ ಗೆಲುವು ಸುಲಭ!

ವರಸೆ ಬದಲಿಸಿದ ಶಂಕರ್
ಹೌದು...ಗೆದ್ದ ನೂತನ ಶಾಸಕರಿಗೆ ಮಾತ್ರ ಸಂಪುಟದಲ್ಲಿ ಅವಕಾಶವಿದ್ದು, ಸೋತವರಿಗೆ ಮುಂದಿನ ದಿನಗಳಲ್ಲಿ ನೋಡೋಣ ಎನ್ನುವ ಮಾತಗಳು ಬಿಜೆಪಿ ಪಾಳಯದಲ್ಲಿ ಬಲವಾಗಿ ಕೇಳಿಬರುತ್ತಿದೆ.

ಆದ್ರೆ, ಇದಕ್ಕೆ ಲಾಜಿಕ್ ಮಾಡಿರುವ ಆರ್. ಶಂಕರ್, ನಾನು ಚುನಾವಣೆಗೇ ನಿಂತಿಲ್ಲ. ಹೀಗಾಗಿ ನನಗೆ ಅವಕಾಶ ಸಿಗುತ್ತದೆ ಎಂದು ಲಾಜಿಕಲ್​ ಒತ್ತಡ ಹೇರುತ್ತಿದ್ದಾರೆ.

ನಾನು ಈ ಹಿಂದೆ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟೆ, ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಟ್ಟೆ. ನಾಯಕರು ಹೇಳಿದಂತೆಲ್ಲ ನಡೆದುಕೊಂಡಿದ್ದೇನೆ. ಚುನಾವಣೆಗೆ ನಿಲ್ಲಬೇಡಿ, ವಿಧಾನಪರಿಷತ್ತಿಗೆ ಆಯ್ಕೆ ಮಾಡತ್ತೇವೆ ಎಂದು ಹೇಳಿದ್ದರು. ಹೀಗಾಗಿ ನನಗೆ ಅವಕಾಶ ಕೈತಪ್ಪುವುದಿಲ್ಲ ಎಂದಿದ್ದಾರೆ.

ಲಕ್ಷ್ಮಣ್ ಸವದಿ ಮತ್ತು ನಮ್ಮ ನಡುವೆ ಪೈಪೋಟಿ ಇಲ್ಲ. 11 ಶಾಸಕರೊಟ್ಟಿಗೆ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಹೇಳಿದರು. ಈ ಮೂಲಕ ಕಾಂಗ್ರೆಸ್ ನಾಯಕ ರಿಜ್ವಾನ್ ಅರ್ಷದ್ ಅವರ ರಾಜೀನಾಮೆಯಿಂದ ತೆರವಾದ ವಿಧಾನಪರಿಷತ್‌ಗೆ ತಮ್ಮನ್ನೂ ಆಯ್ಕೆ ಮಾಡಬೇಕೆಂದು ಹೇಳಿದರು.

ಶಂಕರ್ ಹೇಳಿದಂತೆ ಅವರು ಈ ಹಿಂದೆ ಉಪಚುನಾವಣೆಯಿಂದ ಹಿಂದೆ ಸರಿದು, ವರಿಷ್ಠರು ಹೇಳಿದಂತೆ ಅರುಣ್ ಕುಮಾರ್ ಗೆ ಅವಕಾಶ ಮಾಡಿಕೊಟ್ಟಿದ್ದರು. 

Follow Us:
Download App:
  • android
  • ios