Asianet Suvarna News Asianet Suvarna News

ಜಾರಕಿಹೊಳಿ ಕುಟುಂಬದಿಂದ ಲಕ್ಷ್ಮಣ್ ಸವದಿ ಟಾರ್ಗೆಟ್? ಅಥಣಿಯಲ್ಲಿ ಸವದಿ ವಿರುದ್ಧ ಮತ್ತೆ ಗುಡುಗಿದ ರಮೇಶ್ ಜಾರಕಿಹೊಳಿ!

ಕೆಲವರು ತಾವು ಆಡಿದ್ದೇ ಆಟ ಅಂತ ಅಂದುಕೊಂಡಿದ್ದಾರೆ. 2004ರಲ್ಲಿ ಒಬ್ಬ, ಡೊಂಗರಗಾಂವ ಸೋಲಿಸಲು ರಾತ್ರೋರಾತ್ರಿ ಪಕ್ಷ ಸೇರಿ ಶಾಸಕರಾದರು ಎಂದು ಶಾಸಕ ಲಕ್ಷ್ಮಣ್ ಸವದಿ ವಿರುದ್ಧ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

Ramesh jarkiholi outraged against athani MLA Laxman savadi at chikkodi rav
Author
First Published Jun 16, 2024, 6:36 PM IST

ಚಿಕ್ಕೋಡಿ (ಜೂ.16): ಕೆಲವರು ತಾವು ಆಡಿದ್ದೇ ಆಟ ಅಂತ ಅಂದುಕೊಂಡಿದ್ದಾರೆ. 2004ರಲ್ಲಿ ಒಬ್ಬ, ಡೊಂಗರಗಾಂವ ಸೋಲಿಸಲು ರಾತ್ರೋರಾತ್ರಿ ಪಕ್ಷ ಸೇರಿ ಶಾಸಕರಾದರು ಎಂದು ಶಾಸಕ ಲಕ್ಷ್ಮಣ್ ಸವದಿ ವಿರುದ್ಧ ರಮೇಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.

ಇಂದು ಅಥಣಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಾರಕಿಹೊಳಿ(Ramesh jarkiholi), ಮಹೇಶ್ ಕುಮಟಹಳ್ಳಿ(Mahesh kumatahalli) ಅಥಣಿ ಕ್ಷೇತ್ರದಲ್ಲಿ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ 2023ರ ಚುನಾವಣೆಯಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಜಂಪ್ ಹೊಡೆದು ಸವದಿ ಶಾಸಕರಾದರು. ಹೀಗೆ ಪದೇಪದೆ ಜಂಪ್ ಹೊಡೆಯೋದು ಸವದಿಗೆ ಮಜಾ ಎನಿಸಿದೆ. ಆದರೆ ಅಥಣಿ ಜನರು ಮುಂದಿನ ದಿನದಲ್ಲಿ ಒಳ್ಳೆಯ ನಿರ್ಣಯ ಮಾಡಲಿದ್ದಾರೆ ಎಂದರು.

 

ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿಕೊಟ್ಟ ಜಾರಕಿಹೊಳಿ ಕುಟುಂಬದ ಕುಡಿ..!

ಹಿಂದೆ ಬಿಜೆಪಿ ಪಕ್ಷ ಸವದಿಗೆ ಪಕ್ಷಕ್ಕೆ ವಾಪಸ್ ಮರಳುವಂತೆ ಆಹ್ವಾನ ನೀಡಿದ್ದರು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಾರಕಿಹೊಳಿ, ಬಿಜೆಪಿ ಪಕ್ಷ ಯಾವುದೇ ಕಾರ್ಯಕ್ಕೂ ಆಹ್ವಾನ ನೀಡಿಲ್ಲ.ಮುಂದೆಯೂ ಯಾವುದೇ ಕಾರಣಕ್ಕೂ ಆಹ್ವಾನ ಕೊಡುವುದಿಲ್ಲ. ಇಂತಹ ಸಾವಿರಾರು ಕಾರ್ಯಕರ್ತರು ಬಿಜೆಪಿ ಪಕ್ಷದಲ್ಲಿದ್ದಾರೆ. ಸವದಿ ಬಿಜೆಪಿ ಪಕ್ಷಕ್ಕೆ ಅನಿವಾರ್ಯವಲ್ಲ. ಎರಡು ರಾಷ್ಟ್ರೀಯ ಪಕ್ಷಗಳು ಇಂತಹ ಜಂಪ್ ಮಾಡುವವರಿಗೆ ಬುದ್ಧಿ ಕಲಿಸಬೇಕು ಎಂದರು.

ಒಂದು ವೇಳೆ ಸವದಿ ಬಿಜೆಪಿಗೆ ಸೇರಿದರೆ ಎಂಬ ಪ್ರಶ್ನೆಗೆ, ಬಿಜೆಪಿ ರಾಷ್ಟ್ರೀಯ ಮುಖಂಡರು ಯಾವುದೇ ತೀರ್ಮಾನ ಮಾಡಿದರು ಸ್ವಾಗತ ಎಂದರು. ಇದೇ ವೇಳೆ ರಾಜ್ಯ ಸರ್ಕಾರ ಪೆಟ್ರೋಲ್ ಡೀಸೆಲ್ ದರ ಹೆಚ್ಚಳ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ರಮೇಶ್ ಜಾರಕಿಹೊಳಿ,  ಕಾಂಗ್ರೆಸ್ ಸರ್ಕಾರ ದ್ವೇಷ ಭಾವನೆಯಿಂದ ಈ ನಿರ್ಣಯ ತೆಗೆದುಕೊಂಡಿದೆ. ಲೋಕಸಭಾ ಚುನಾವಣೆ ರಾಜ್ಯದ ಜನರು ಬಿಜೆಪಿ ಬೆಂಬಲಿಸಿದ್ದಕ್ಕೆ ಪೆಟ್ರೋಲ್ ಡೀಸೆಲ್ ದರ ಹೆಚ್ಚಿಸಿ ದ್ವೇಷ ಸಾಧಿಸಿದೆ ಎಂದು ಕಿಡಿಕಾರಿದರು.

ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಆಮಿಷೆ ನಡುವೆಯೂ ಬಿಜೆಪಿ ಪಕ್ಷಕ್ಕೆ ಹೆಚ್ಚು ಸ್ಥಾನ ಬಂದಿದೆ. ಈಗ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳ ಮಾಡುವ ಮೂಲಕ ರಾಜ್ಯದ ಜನರಿಗೆ ಈ ಸರ್ಕಾರ ಹೊರೆ ಮಾಡುತ್ತಿದೆ. ಒಂದು ಕೈಲೆ ಕೊಡುವುದು ಮತ್ತೊಂದು ಕೈಲಿ ತೆಗೆದುಕೊಳ್ಳುವ ಕಾರ್ಯ ಮಾಡುತ್ತಿದೆ. ಇದು ಹೊಸದಲ್ಲ, ಕಾಂಗ್ರೆಸ್ ಸರ್ಕಾರ ಹಿಂದಿನಿಂದಲೂ ನಿರಂತರವಾಗಿ ಈ ರೀತಿ ಮಾಡಿಕೊಂಡು ಬಂದಿದೆ. ಆದರೆ ಈ ಸರ್ಕಾರದ ನೀತಿ ಇದೀಗ ಜನರಿಗೆ ಅರ್ಥವಾಗತೊಡಗಿದೆ ಎಂದರು.

ಪ್ರವಾಹ ಭೀತಿ.. ಜಾರಕಿಹೊಳಿ ಮಾಡಲಾಗದ ಕೆಲಸವನ್ನು ಡಿಕೆಶಿ ಮಾಡುವರೇ? ರೈತರ ಆಗ್ರಹವೇನು?

ಜನ ಸಾಮಾನ್ಯರಿಗೆ ತೆರಿಗೆ ಹೆಚ್ಚಿಸಿ ಹೊರೆ ಮಾಡುವುದು ಸರಿಯಾದ ಕ್ರಮ ಅಲ್ಲ. ಸಿಎಂ ಒಳ್ಳೆಯ ನಿರ್ಧಾರ ಮಾಡಬೇಕು. ನಮ್ಮ ಅಧಿಕಾರ ಇದ್ದಾಗ ತೈಲ ದರವನ್ನು ಏರಿಕೆ ಮಾಡಿದಾಗ ಇದೇ ಕಾಂಗ್ರೆಸ್ ನಾಯಕರು ಖಂಡಿಸಿ ಬೀದಿಗೆ ಇಳಿದು ಹೋರಾಟ ಮಾಡಿದ್ರು. ಆದರೆ ಈಗ ಅವರದೇ ಸರ್ಕಾರ ಇದೆ ಪೆಟ್ರೋಲ್ ಡೀಸೆಲ್ ದರ ಅವರೇ ಹೆಚ್ಚಳ ಮಾಡಿದ್ದಾರೆ. ಕಾಂಗ್ರೆಸ್ ವರಿಷ್ಠರಾದ ಸುರ್ಜೇವಾಲ ತೀರ್ಮಾನದಿಂದ ಸರ್ಕಾರ ಈ ಮಟ್ಟಕ್ಕಿಳಿದಿದೆ ಎಂದು ಹರಿಹಾಯ್ದರು.

Latest Videos
Follow Us:
Download App:
  • android
  • ios