ರಾಜ್ಯಸಭೆ ಚುನಾವಣೆ: ಅಡ್ಡ ಮತದಾನ ಹಾಕಿ ಬಿಜೆಪಿಗೆ ಶಾಕ್ ಕೊಟ್ಟ ಎಸ್ ಟಿ ಸೋಮಶೇಖರ್
ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಅಡ್ಡ ಮತದಾನ ಮಾಡಿ ಪಕ್ಷಕ್ಕೆ ದೊಡ್ಡ ಶಾಕ್ ಕೊಟ್ಟಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ವಿಪ್ ಉಲ್ಲಂಘಟನೆ ಮಾಡಿದ್ದಾರೆ.
ಬೆಂಗಳೂರು (ಫೆ.27): ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಅಡ್ಡ ಮತದಾನ ಮಾಡಿ ಪಕ್ಷಕ್ಕೆ ದೊಡ್ಡ ಶಾಕ್ ಕೊಟ್ಟಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ಬಿಜೆಪಿ ವಿಪ್ ಉಲ್ಲಂಘಟನೆ ಮಾಡಿದ್ದಾರೆ. ಅನೇಕ ದಿನಗಳಿಂದ ಬಿಜೆಪಿ ನಾಯಕರು ಎಸ್‌ಟಿ ಸೋಮಶೇಖರ್ ಅವರಿಂದ ಅಂತರ ಕಾಯ್ದುಕೊಂಡಿದ್ದರು. ಶಿಕ್ಷಕರ ಉಪ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿಗೆ ಮತದಾನ ಮಾಡಿ ಬಿಜೆಪಿಗೆ ಭಾರೀ ಮುಜುಗರಕ್ಕೆ ಕಾರಣವಾಗಿದ್ದರು. ಎಸ್‌ಟಿಎಸ್ ಅಡ್ಡ ಮತದಾನ ಮಾಡಿರುವ ಪರಿಣಾಮ ಬಿಜೆಪಿ ಮುಂದೇನು ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ವಿಪ್ ಉಲ್ಲಂಘನೆ ಮಾಡಿರುವ ಕಾರಣ ಸ್ಪೀಕರ್ ಗೆ ದೂರು ನೀಡುವ ಸಾಧ್ಯತೆ ಇದೆ.
ರಾಜ್ಯಸಭಾ ಚುನಾವಣೆಗೆ ಮತ ಚಲಾಯಿಸಿದ ಶಾಸಕರು: ಓಟ್ ಮಾಡಲು ಒಟ್ಟಿಗೆ ತೆರಳಿದ ಎಚ್‌ಡಿಕೆ, ಬೊಮ್ಮಾಯಿ..!
ಮತನದಾನಕ್ಕೂ ಮುನ್ನ ಎಸ್ ಟಿ ಸೋಮಶೇಖರ್ ಮಾತನಾಡಿ, ಅಭಿವೃದ್ಧಿಗೆ ಅನುದಾನ ಕೊಡುವ ಅಭ್ಯರ್ಥಿಗೆ ನನ್ನ ಮತ ಎಂದಿದ್ದರು . ಮತದಾನದ ಬಳಿಕ ಯಾರು ಅಸಮಧಾನ ಆದ್ರೆ ನನಗೇನು ನಾನು ಆತ್ಮಸಾಕ್ಷಿಗೆ ಮತ ಹಾಕ್ತಿನಿ. ವೋಟ್ ಆದ ಮೇಲೆ ಯಾರಿಗೆ ಅಂತ ನಿಮಗೇ ಗೊತ್ತಾಗುತ್ತೆ. ಕಾಂಗ್ರೆಸ್ ಜೊತೆಗಿನ ಸಂಬಂಧ ಈಗ ಹೊಸದಾಗಿ ಅಲ್ಲ, ಒಂದು ವರ್ಷದಿಂದ ಇದೆ. ಶೌಚಾಲಯ ಬಳಕೆಗೆ ಡಿಕೆಶಿ ಕಚೇರಿಗೆ ಹೋಗಿದ್ದೆ. ನಾನು ಹೋಗಿದ್ದಾಗ ಡಿಕೆಶಿ ಅವರು ಇರಲಿಲ್ಲ. ನಾನು ಮತ ಹಾಕಿದ ಮೇಲೆ ಗೊತ್ತಾಗತ್ತೆ ಯಾರಿಗೆ ಹಾಕಿದೆ ಅನ್ನೋದು. ವಿಪ್ ಉಲ್ಲಂಘನೆ, ಉಚ್ಚಾಟನೆ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದಿದ್ದರು.
ರಾಜ್ಯಸಭೆ ಚುನಾವಣೆ ಬಿಜೆಪಿಗೆ ಮೊದಲ ಗೆಲುವು, ಮೈತ್ರಿ ನಾಯಕರ ಸಂಭ್ರಮ
ಮತದಾನದ ಬಳಿಕವೂ ಆತ್ಮಸಾಕ್ಷಿಯ ಮತ ಹಾಕಿದ್ದೇನೆ. ಯಾರಿಗೆ ಮತ ತೋರಿಸ ಬೇಕಿತ್ತೊ ಅವರಿಗೆ ತೋರಿಸಿ ಮತ ಹಾಕಿದ್ದೇನೆ. ನನ್ನ ಕಾಂಗ್ರೆಸ್ ನಾಯಕರು ಯಾರೂ ಸಂಪರ್ಕ ಮಾಡಿರಲಿಲ್ಲ ಎಂದು ಮತದಾನ ಮಾಡಿ ಬಿಜೆಪಿ ಶಾಸಕಾಂಗ ಕಚೇರಿಗೂ ಹೋಗದೆ ನೇರವಾಗಿ ತೆರಳಿದರು. ಇಷ್ಟೆಲ್ಲ ಗೊಂದಲ ಸೃಷ್ಟಿಸಿದ ಸೋಮಶೇಖರ್ ಕೊನೆಗೂ ನಿರೀಕ್ಷೆಯಂತೆಯೇ ಅಡ್ಡ ಮತದಾನ ಹಾಕಿ ಬಿಜೆಪಿ ವಿಪ್ ಉಲ್ಲಂಘನೆ ಮಾಡಿದ್ದಾರೆ.
ಎಸ್ ಟಿ ಸೋಮಶೇಖರ್ ವಿರುದ್ಧ ಬಿಜೆಪಿ ಆಕ್ರೋಶ: ಎಸ್ ಟಿ ಸೋಮಶೇಖರ್ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಅವರ ಮನೆ ಮುತ್ತಿಗೆಗೆ ಬಿಜೆಪಿ ಯುವ ಮೋರ್ಚಾ ಮುಂದಾಗಿದೆ. ಮಧ್ಯಾಹ್ನ 12.30ಕ್ಕೆ ಪ್ರತಿಭಟನೆ ಮಾಡಲಿದ್ದು, BTM ಲೇಔಟ್ ನಲ್ಲಿರುವ ಎಸ್.ಟಿ ಸೋಮಶೇಖರ್ ನಿವಾಸಕ್ಕೆ ಮುತ್ತಿಗೆ ಹಾಕಲು ನಿರ್ಧಾರ ಮಾಡಲಾಗಿದೆ.
ಹೆಬ್ಬಾರ್ ನಡೆ ಏನಿರಬಹುದು?: ಎಸ್ ಟಿ ಸೋಮಶೇಖರ್ ಅಡ್ಡ ಮತದಾನದ ಬಳಿಕ ಬಿಜೆಪಿಗೆ ಭೀತಿ ಎದುರಾಗಿದೆ. ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಮೇಲೆ ಕೂಡ ಅಡ್ಡ ಮತದಾನದ ಅನುಮಾನ ಇದೆ. ಬಿಜೆಪಿ ಮೇಲೆ ಅಸಮಾಧಾನ ಹೊಂದಿರುವ ಹೆಬ್ಬಾರ್ ಅವರ ನಿರ್ಧಾರ ಎನಾಗಿರಬಹುದು ಎಂಬ ನಿಗೂಢತೆ ಇನ್ನೂ ಹಾಗೆಯೇ ಇದೆ.