ರಾಜ್ಯಸಭೆ ಚುನಾವಣೆ ಬಿಜೆಪಿಗೆ ಮೊದಲ ಗೆಲುವು, ಮೈತ್ರಿ ನಾಯಕರ ಸಂಭ್ರಮ

ರಾಜ್ಯಸಭೆ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿಯೊಬ್ಬರು  ಗೆಲುವು ಕಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ನಾಯಕರು ಸಂಭ್ರಮಿಸಿದ್ದಾರೆ. 

Narayana Sa Banda win Rajya Sabha election    JDS and BJP celebration gow

ಬೆಂಗಳೂರು (ಫೆ.27): ರಾಜ್ಯಸಭೆ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿಯೊಬ್ಬರು  ಗೆಲುವು ಕಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿ ನಾಯಕರು ಸಂಭ್ರಮಿಸಿದ್ದಾರೆ.  ನಾರಾಯಣ ಸಾ ಭಾಂಡಗೆ ಗೆಲುವು ಸಿಕ್ಕಿದೆ ಎಂದು ತಿಳಿದುಬಂದಿದ್ದು, ಮೈತ್ರಿ ಪಕ್ಷದ ನಾಯಕರು  ಅಭಿನಂದನೆ ಸಲ್ಲಿಸಿದ್ದಾರೆ.

ಆತ್ಮಸಾಕ್ಷಿಗೆ ಮತ ಎಂದ ಸೋಮಶೇಖರ್: ಮತನದಾನಕ್ಕೂ ಮುನ್ನ  ಎಸ್‌ ಟಿ ಸೋಮಶೇಖರ್ ಮಾತನಾಡಿ, ಅಭಿವೃದ್ಧಿಗೆ ಅನುದಾನ‌ ಕೊಡುವ ಅಭ್ಯರ್ಥಿಗೆ ನ‌ನ್ನ ಮತ ಎಂದು . ಮತದಾನದ ಬಳಿಕ ಯಾರು ಅಸಮಾಧಾನ ಪಟ್ರೆ ನನಗೇನು ನಾನು ಆತ್ಮಸಾಕ್ಷಿಗೆ ಮತ ಹಾಕ್ತಿನಿ. ವೋಟ್ ಆದ ಮೇಲೆ ಯಾರಿಗೆ ಅಂತ ನಿಮಗೇ ಗೊತ್ತಾಗುತ್ತೆ. ಕಾಂಗ್ರೆಸ್ ಜೊತೆಗಿನ ಸಂಬಂಧ ಈಗ ಹೊಸದಾಗಿ ಅಲ್ಲ, ಒಂದು ವರ್ಷದಿಂದ ಇದೆ. ಶೌಚಾಲಯ ಬಳಕೆಗೆ ಡಿಕೆಶಿ ಕಚೇರಿಗೆ ಹೋಗಿದ್ದೆ. ನಾನು ಹೋಗಿದ್ದಾಗ ಡಿಕೆಶಿ ಅವರು ಇರಲಿಲ್ಲ. ನಾನು ಮತ ಹಾಕಿದ‌ ಮೇಲೆ ಗೊತ್ತಾಗತ್ತೆ ಯಾರಿಗೆ ಹಾಕಿದೆ ಅನ್ನೋದು. ವಿಪ್ ಉಲ್ಲಂಘನೆ, ಉಚ್ಚಾಟನೆ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದಿದ್ದಾರೆ.

ರಾಜ್ಯಸಭೆ ಚುನಾವಣೆ: ಅಡ್ಡ ಮತದಾನ ಹಾಕಿ ಬಿಜೆಪಿ ವಿಪ್‌ ಉಲ್ಲಂಘಿಸಿದ ಎಸ್‌ ಟಿ ಸೋಮಶೇಖರ್

ಮತದಾನದ ಬಳಿಕವೂ ಆತ್ಮಸಾಕ್ಷಿಯ ಮತ ಹಾಕಿದ್ದೇನೆ. ಯಾರಿಗೆ ಮತ ತೋರಿಸಿ ಬೇಕಿತ್ತೊ ಅವರಿಗೆ ತೋರಿಸಿ ಮತ ಹಾಕಿದ್ದೇನೆ ಎಂದು ನೇರವಾಗಿ ಮತದಾನ ಮಾಡಿ ತೆರಳಿದ ಎಸ್ ಟಿ ಎಸ್ ಬಿಜೆಪಿ ಶಾಸಕಾಂಗ ಕಚೇರಿಗೂ ತೆರಳದೆ ಹೋದರು. ಆದರೆ ಇಷ್ಟೆಲ್ಲ ಗೊಂದಲ ಸೃಷ್ಟಿಸಿದ ಸೋಮಶೇಖರ್‌ ಕೊನೆಗೂ ಕಾಂಗ್ರೆಸ್‌ ಗೆ ಮತ ಹಾಕಿ  ಬಿಜೆಪಿ ವಿಪ್  ಉಲ್ಲಂಘನೆ ಮಾಡಿದ್ದಾರೆ.

ರೆಡ್ಡಿ ಮತ್ತು ಹೆಬ್ಬಾರ್ ಮತದಾನ ಕಾಂಗ್ರೆಸ್‌ಗೆ ಸಾಧ್ಯತೆ: ಇನ್ನು ಬಿಜೆಪಿ ಇನ್ನೊಬ್ಬ ಶಾಸಕ ಶಿವರಾಮ್ ಹೆಬ್ಬಾರ್ ಮೇಲೆ ಕೂಡ ಅಡ್ಡ ಮತದಾನದ ಅನುಮಾನ ಇದೆ. ಬಿಜೆಪಿ ಮೇಲೆ ಅಸಮಾಧಾನ ಹೊಂದಿರುವ ಹೆಬ್ಬಾರ್ ಅವರ ನಿಗೂಢತೆ ಇನ್ನೂ ಹಾಗೆಯೇ ಇದೆ.

ರಾಜ್ಯಸಭೆ ಚುನಾವಣೆಯ ಹಿಂದಿನ ದಿನವಾದ ಸೋಮವಾರ ಕೆಆರ್‌ಪಿಸಿ ಪಕ್ಷದ ಶಾಸಕ ಜನಾರ್ದನರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದು, ಜನಾರ್ಧನರೆಡ್ಡಿ ಮತ ಬಹುತೇಕ ಕಾಂಗ್ರೆಸ್ ಅಭ್ಯರ್ಥಿಗೆ ಎಂಬಂತಾಗಿದೆ.

ರಾಜ್ಯಸಭಾ ಚುನಾವಣೆಗೆ ಮತ ಚಲಾಯಿಸಿದ ಶಾಸಕರು: ಓಟ್‌ ಮಾಡಲು ಒಟ್ಟಿಗೆ ತೆರಳಿದ ಎಚ್‌ಡಿಕೆ, ಬೊಮ್ಮಾಯಿ..!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಜನಾರ್ದನ ರೆಡ್ಡಿ ಕ್ಷೇತ್ರದ ಅಂಜನಾದ್ರಿ ಬೆಟ್ಟಕ್ಕೆ 100 ಕೋಟಿ ರು., ಅಭಿವೃದ್ಧಿ ಕಾರ್ಯಗಳಿಗೆ ಕೋಟ್ಯಂತರ ರು. ನೀಡಿದ್ದು, ಜತೆಗೆ ಐತಿಹಾಸಿಕ ಆನೆಗೊಂದಿ ಉತ್ಸವವನ್ನು ವೈಭವದಿಂದ ಆಚರಿಸಲು ಜಿಲ್ಲಾಡಳಿತ ನಿರ್ಧಾರ ಮಾಡಿದೆ.

ಈ ಹಿನ್ನೆಲೆಯಲ್ಲಿ ಜನಾರ್ದನ ರೆಡ್ಡಿ ಅವರು ಸೋಮವಾರ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ. ಇದೇ ವೇಳೆ ರಾಜ್ಯಸಭೆ ಚುನಾವಣೆ ಮತದಾನದ ಬಗ್ಗೆಯೂ ಚರ್ಚೆ ನಡೆದಿದ್ದು, ಕಾಂಗ್ರೆಸ್‌ಗೆ ಮತ ಹಾಕಲು ಒಪ್ಪಿರುವುದಾಗಿ ತಿಳಿದುಬಂದಿದೆ.

 

Latest Videos
Follow Us:
Download App:
  • android
  • ios