ರಾಜ್ಯಸಭಾ ಚುನಾವಣೆ ಫಲಿತಾಂಶ ಪ್ರಕಟ; ಕಾಂಗ್ರೆಸ್-3, ಬಿಜೆಪಿ-1 ಗೆಲುವು, ಮೈತ್ರಿ ಅಭ್ಯರ್ಥಿ ಸೋಲು: ಇಲ್ಲಿದೆ ವಿವರ ..

ರಾಜ್ಯಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ನಿರೀಕ್ಷಿತದಂತೆ ಕಾಂಗ್ರೆಸ್‌ನ ಮೂವರು ಅಭ್ಯರ್ಥಿಗಳು ಹಾಗೂ ಬಿಜೆಪಿಯ ಒಬ್ಬ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

Rajya Sabha election results announced Congress 3 BJP 1 candidate win here votes details sat

ಬೆಂಗಳೂರು (ಫೆ.27): ರಾಜ್ಯ ವಿಧಾನಸಭೆಯಲ್ಲಿ ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಡೆದ ರಾಜ್ಯಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದೆ. ನಿರೀಕ್ಷಿತದಂತೆ ಕಾಂಗ್ರೆಸ್‌ನ ಮೂವರು ಅಭ್ಯರ್ಥಿಗಳು ಹಾಗೂ ಬಿಜೆಪಿಯ ಒಬ್ಬ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಇನ್ನು ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ 9 ಮತಗಳಿಂದ ಸೋಲನುಭವಿಸಿದ್ದಾರೆ.

ಯಾವ ಅಭ್ಯರ್ಥಿಗೆ ಎಷ್ಟು ಮತಗಳು:
ಅಜಯ್ ಮಕೇನ್ (ಕಾಂಗ್ರೆಸ್)- 47 ಮತಗಳು- ಗೆಲುವು 
ಜಿಸಿ ಚಂದ್ರಶೇಖರ್ (ಕಾಂಗ್ರೆಸ್)- 45 ಮತಗಳು- ಗೆಲುವು
ಡಾ ಸೈಯದ್ ನಾಸೀರ್ ಹುಸೇನ್ (ಕಾಂಗ್ರೆಸ್)- 47 ಮತಗಳು- ಗೆಲುವು 
ನಾರಾಯಣ ಎಸ್ ಭಾಂಡಗೆ (ಬಿಜೆಪಿ)- 47 ಮತಗಳು- ಗೆಲುವು
ಡಿ ಕುಪೇಂದ್ರ ರೆಡ್ಡಿ (ಮೈತ್ರಿ ಅಭ್ಯರ್ಥಿ)- 36 ಮತಗಳು- 9 ಮತಗಳಿಂದ ಸೋಲು

ಬಿಜೆಪಿ ವಿಪ್‌ನಿಂದ ಏನಾಗುತ್ತೆ? ವಜಾಕ್ಕೂ ಮುನ್ನವೇ ರಾಜೀನಾಮೆ ಕೊಡುವರೇ ಎಸ್.ಟಿ. ಸೋಮಶೇಖರ್!

ಇದು ಕಾಂಗ್ರೆಸ್‌ ನಾಯಕರ ಗೆಲುವಲ್ಲ, ಸಾಮಾನ್ಯ ಕನ್ನಡಿಗರ ಗೆಲುವು:
ರಾಜ್ಯಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ಮಾತನಾಡಿದ ಕಾಂಗ್ರೆಸ್‌ ರಾಜ್ಯ ಚುನಾವಣಾ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು, ನಮ್ಮ ಪಕ್ಷದ ಮೂರು ಅಭ್ಯರ್ಥಿಗಳು ಗೆದ್ದಿದ್ದಾರೆ. ಸ್ವಾಭಿಮಾನ ಕನ್ನಡಗರಿಗೆ ಸಂದ ಜಯವಾಗಿದೆ. ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಿ ಮೋದಿ ಹಾಗೂ ಜೆಡಿಎಸ್‌ ನಾಯಕ ಕುಮಾರಸ್ವಾಮಿಗೆ ಪ್ರಶ್ನೆ ಕೇಳ್ತೀನಿ, ನಿಮಗೆ ಮತಗಳು ಇಲ್ಲ ಅಂದ್ರೂ ಯಾಕೆ ಇನ್ನೊಂದು ಅಭ್ಯರ್ಥಿಯನ್ನ ಹಾಕಿದ್ರಿ ಎಂದು ಕಿಡಿಕಾರಿದರು. ಇದು ಕಾಂಗ್ರೆಸ್ ನಾಯಕರ ಗೆಲುವು ಅಲ್ಲ, ಇದು ಸಾಮಾನ್ಯ ಕನ್ನಡಗರ ಗೆಲುವು. ಈ ಮೂಲಕ ರಾಜ್ಯದಲ್ಲಿ ಮೈತ್ರಿಗೆ ಮತ್ತೊಂದು ಸೋಲಾಗಿದೆ. ಮೊನ್ನೆಯಷ್ಟೇ ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲೂ ಮೈತ್ರಿ ಗೆ ಸೋಲಾಗಿದೆ. ಇದು ನಮಗೆ ಮೂರನೇ ಗೆಲುವು ಆಗಿದೆ. ನಾವು ವಿಧಾನಸಭೆಯಲ್ಲಿ ಗೆದ್ವಿ, ಪರಿಷತ್ ಚುನಾವಣೆಯಲ್ಲಿ ಗೆದ್ವಿ, ಈಗ ರಾಜ್ಯಸಭೆಯಲ್ಲಿ ಗೆದ್ದಿದ್ದೇವೆ ಎಂದು ಹೇಳಿದರು.

Latest Videos
Follow Us:
Download App:
  • android
  • ios