Asianet Suvarna News Asianet Suvarna News

ನೆಲೆ ಇಲ್ಲದ ಶಿರಾದದಲ್ಲಿ ಒಂದೇ ಸಲ ಇಬ್ಬರು ಶಾಸಕರು: ಬಿಜೆಪಿ ಮತ್ತಷ್ಟು ಸ್ಟ್ರಾಂಗು

ನೆಲೆಯೇ ಇಲ್ಲದ ಶಿರಾ ಕ್ಷೇತ್ರದಲ್ಲಿ ಒಂದೇ ಬಾರಿಗೆ ಇಬ್ಬರು ಶಾಸಕರು ಆಗುವ ಮೂಲಕ ಬಿಜೆಪಿ ಇಲ್ಲಿ ಮತ್ತಷ್ಟು ಪ್ರಬಲವಾಗಿದೆ.

Rajesh Gowda Win after sira chidanandagowda Wining In South East Graduate Constituency rbj
Author
Bengaluru, First Published Nov 11, 2020, 2:35 PM IST

ತುಮಕೂರು, (ನ.11): ಶಿರಾದಲ್ಲಿ ಬಿಜೆಪಿ ತನ್ನ ಅಧಿಪತಿ ಸಾಧಿಸಿದ್ದು, 15 ಚುನಾವಣೆಗಳ ಬಳಿಕ ಬಿಜೆಪಿ ಶಿರಾದಲ್ಲಿ ಗೆದ್ದು ಹೊಸ ಇತಿಹಾಸ ನಿರ್ಮಿಸಿದೆ.

ಇನ್ನೊಂದು ಪ್ರಮುಖ ಅಂಶ ಅಂದ್ರೆ ಬಿಜೆಪಿಗೆ ಬಲವಿಲ್ಲದ ಶಿರಾ ಕ್ಷೇತ್ರದಲ್ಲಿ ಒಂದೇ ಬಾರಿ ಇಬ್ಬರು ಶಾಸಕರು ಆಯ್ಕೆಯಾಗಿದ್ದಾರೆ.

ಹೌದು...ಶಿರಾ ವಿಧಾನಸಭಾ ಉಪಚುನಾವಣೆಯ ಫಲಿತಾಂಶ ಮಂಳವಾರ ಪ್ರಕಟವಾಗಿದ್ದು, ಅಚ್ಚರಿ ಎಂಬಂತೆ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡ ಅವರು ಗೆಲುವು ಸಾಧಿಸಿದ್ದಾರೆ. ಇನ್ನು ಶಿರಾದವರೇ ಆದ ಎಂ. ಚಿದಾನಂದಗೌಡ ಕೂಡ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಗೆದ್ದು ವಿಧಾನಪರಿಷತ್‌ಗೆ ಪ್ರವೇಶಿಸಿದ್ದಾರೆ. 

ವಿಜಯೇಂದ್ರ ತಂತ್ರಗಳ ಫಲ: ಮೊದಲ ಬಾರಿಗೆ ಶಿರಾದಲ್ಲಿ ಅರಳಿದ ಕಮಲ

ಈ ಮೂಲಕ ಒಮ್ಮೆಲೇ ಶಿರಾದವರೇ  ಇಬ್ಬರು ಶಾಸಕರಾಗಿರುವುದು ವಿಶೇಷ. ಇದರೊಂದಿಗೆ ಶಿರಾದಲ್ಲಿ ಕಾರ್ಯಕರ್ತರೇ ಇಲ್ಲದೇ ಪರದಾಡುತ್ತಿದ್ದ ಬಿಜೆಪಿಗೆ ಇದೀಗ ಇಬ್ಬರ ಗೆಲುವಿನಿಂದ ಆನೆ ಬಲ ಸಿಕ್ಕಂತಾಗಿದೆ.

ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಗೆ ಚುನಾವಣೆ ಆರಂಭದಿಂದಲೂ ಬಂಡಾಯದ ಬಿಸಿ ತಾಗಿತ್ತಾದರೂ ಅಂತಿಮವಾಗಿ ಮತದಾರ ಬಿಜೆಪಿಯ ಅಧಿಕೃತ ಅಭ್ಯರ್ಥಿ ಚಿದಾನಂದ ಗೌಡ ಮೇಲೆ ಕೃಪೆ ತೋರಿದ್ದಾನೆ. 24,217 ಮತಗಳನ್ನು ಪಡೆಯುವ ಮೂಲಕ ಚಿದಾನಂದ ಗೌಡ ಅವರು ಪ್ರತಿಸ್ಪರ್ಧಿ, ಪಕ್ಷೇತರ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್ ಅವರನ್ನು ಸೋಲಿಸಿದ್ದಾರೆ.

ಚಿತ್ರದುರ್ಗ, ದಾವಣಗೆರೆ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳನ್ನೊಳಗೊಂಡ ಆಗ್ನೇಯ ಪದವೀಧರ ಕ್ಷೇತ್ರಕ್ಕೆ ಅ.28ರಂದು ಮತದಾನ ನಡೆದಿತ್ತು. ನವೆಂಬರ್ 2ರಂದೇ ನಡೆಯಬೇಕಿದ್ದ ಮತ ಎಣಿಕೆಯನ್ನು ನವೆಂಬರ್ 10ಕ್ಕೆ ಚುನಾವಣಾ ಆಯೋಗ ಮುಂದೂಡಿತ್ತು. ಇದೀಗ ಫಲಿತಾಂಶ ಹೊರಬಿದ್ದಿದ್ದು, ಒಟ್ಟು 14 ಟೇಬಲ್​ಗಳಲ್ಲಿ ನಡೆದ ಮತ ಎಣಿಕೆಯಲ್ಲಿ ಚಿದಾನಂದಗೌಡ 24,217 ಮತ ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ. 

Follow Us:
Download App:
  • android
  • ios