Asianet Suvarna News Asianet Suvarna News

ರಾಜೀನಾಮೆ ನೀಡಿ 2 ವರ್ಷದ ಬಳಿಕೆ ಮತ್ತೆ ಬಿಜೆಪಿ ಸೇರಿದ ಹಿರಿಯ ರಾಜಕಾರಣಿ

ಭಿನ್ನಾಭಿಪ್ರಾಯದಿಂದಾಗಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ರಾಜಕಾರಣಿ ಇದೀಗ ಎರಡು ವರ್ಷಗಳ ಬಳಿಕ ಮತ್ತೆ ಬಿಜೆಪಿ ಸೇರಿ ಅಚ್ಚರಿ ಮೂಡಿಸಿದ್ದಾರೆ.

Rajasthan Ghanshyam Tiwari returns to BJP 2  years after quitting the party rbj
Author
Bengaluru, First Published Dec 12, 2020, 5:28 PM IST

ಜೈಪುರ. (ಡಿ.12): ಭಿನ್ನಾಭಿಪ್ರಾಯದಿಂದ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ರಾಜಸ್ಥಾನದ ಹಿರಿಯ ರಾಜಕಾರಣಿ ಘನಶ್ಯಾಂ ತಿವಾರಿ ಅವರು ಮತ್ತೆ ಬಿಜೆಪಿಗೆ ಮರಳಿದ್ದಾರೆ.

ಹೌದು... ರಾಜಸ್ಥಾನದ ಹಿರಿಯ ರಾಜಕಾರಣಿ ಘನಶ್ಯಾಂ ತಿವಾರಿ ಶನಿವಾರ ಮರಳಿ ಬಿಜೆಪಿ ಸೇರಿದ್ದಾರೆ. ಪಕ್ಷದ ರಾಜ್ಯ ಮತ್ತು ಕೇಂದ್ರ ನಾಯಕರ ನಡುವಣ ಭಿನ್ನಾಭಿಪ್ರಾಯದಿಂದಾಗಿ ಅವರು 2 ವರ್ಷಗಳ ಹಿಂದೆ ಪಕ್ಷ ತೊರೆದಿದ್ದರು. ಇದೀಗ ಘನಶ್ಯಾಂ ತಿವಾರಿ ಇಂದು (ಶನಿವಾರ) ಕಾರ್ಯಕ್ರಮವೊಂದರಲ್ಲಿ ಪಕ್ಷದ ರಾಜಸ್ಥಾನ ಅಧ್ಯಕ್ಷ ಸತೀಶ್ ಪೂನಿಯಾ ಸಮ್ಮುಖದಲ್ಲಿ ಬಿಜೆಪಿ ಸೆರ್ಪಡೆಯಾದರು.

BJP ಜೊತೆ JDS ವಿಲೀನ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಕುಮಾರಸ್ವಾಮಿ

ಬಳಿಕ ಮಾತನಾಡಿದ  ಘನಶ್ಯಾಂ ತಿವಾರಿ, ಸುದೀರ್ಘ ಸಮಯದ ನಂತರ ಈ ವೇದಿಕೆಯಲ್ಲಿ ಮಾತನಾಡಲು ಅವಕಾಶ ಪಡೆದಿದ್ದೇನೆ. ಪಕ್ಷಕ್ಕೆ ಸೇರುವುದಾಗಿ ನಾನು ಬರೆದ ಪತ್ರವನ್ನು ಪರಿಗಣಿಸಿದ ಪಕ್ಷದ ನಾಯಕತ್ವಕ್ಕೆ ಧನ್ಯವಾದಗಳು ತಿಳಿಸಿದರು.

ಕಾಂಗ್ರೆಸ್‌ನೊಂದಿಗೆ ಹಿಂದೊಮ್ಮೆ ವೇದಿಕೆ ಹಂಚಿಕೊಂಡಿದ್ದರೂ ಅದರ ಸದಸ್ಯತ್ವ ಸ್ವೀಕರಿಸಿಲ್ಲ. ಬಿಜೆಪಿಯ ಸಿದ್ಧಾಂತಕ್ಕೆ ಸಂಪೂರ್ಣವಾಗಿ ಬದ್ಧನಾಗಿದ್ದೇನೆ. ಅನಿವಾರ್ಯ ಕಾರಣಗಳಿಂದಾಗಿ ಬೇರೆ ಪಕ್ಷ ರಚಿಸಿದ್ದೆ ಎಂದು ಸ್ಪಷ್ಟಪಡಿಸಿದರು. 

2018ರಲ್ಲಿ ಬಿಜೆಪಿ ತ್ಯಜಿಸುವ ಮುನ್ನ ಆಗಿನ ವಸುಂಧರಾ ರಾಜೆ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ತಿವಾರಿ ಭಿನ್ನಾಭಿಪ್ರಾಯ ಹೊಂದಿದ್ದರು. ಬಳಿಕ ರಾಜಸ್ಥಾನ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ 'ಭಾರತ್ ವಾಹಿನಿ ಪಕ್ಷ' ಸ್ಥಾಪಿಸಿದ್ದರು. ಸಂಗಾನೆರ್ ಕ್ಷೇತ್ರದಿಂದ ವಿಧಾನಸಭೆ ಚುನಾವಣೆ ಸ್ಪರ್ಧಿಸಿ ಸೋಲುಕಂಡಿದ್ದರು.

Follow Us:
Download App:
  • android
  • ios