Asianet Suvarna News Asianet Suvarna News

ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಬಿರುಗಾಳಿ, ರಾಜೀನಾಮೆ ನೀಡ್ತಾರಾ ಸಿಎಂ ಗೆಹ್ಲೋಟ್?

ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಬಳಿಖ ತಣ್ಣಗಾಗಿದ್ದ ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಮತ್ತೆ ಬಿರುಗಾಳಿ ಸೂಚನೆ ಸಿಕ್ಕಿದೆ. ಇದೀಗ ಸಿಎಂ ಅಶೋಕ್ ಗೆಹ್ಲೆೋಟ್ ವಿರುದ್ದ ಸಚಿನ್ ಪೈಲೆಟ್ ಸಿಡಿದು ನಿಂತಿದೆ. ಇಷ್ಟೇ ಅಲ್ಲ ಗೆಹ್ಲೋಟ್ ರಾಜೀನಾಮೆ ನೀಡುವ ಸಾಧ್ಯತೆಯನ್ನು ಹೇಳಿದ್ದಾರೆ. ಇದೀಗ ಸಿಎಂ ಸ್ಥಾನದಲ್ಲಿರುವ ಗೆಹ್ಲೋಟ್ ರಾಜೀನಾಮೆ ನೀಡ್ತಾರಾ ಅನ್ನೋ ಚರ್ಚೆ ಶುರುವಾಗಿದೆ.
 

Rajasthan Cm Ashok Gehlot in Ghulam Nabi Azad route Sachin pilot hints resignation in Rajasthan politics ckm
Author
First Published Nov 2, 2022, 4:01 PM IST

ಜೈಪುರ(ನ.02): ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಬಣ ಹಾಗೂ ಸಚಿನ್ ಪೈಲೆಟ್ ಬಣಗಳ ನಡುವಿನ ಗುದ್ದಾಟ ಮತ್ತೆ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಭೇಟಿ ಮರುದಿನವೇ  ರಾಜಸ್ಥಾನ ಕಾಂಗ್ರೆಸ್‌ನಲ್ಲಿ ತಳಮಳ ಶುರುವಾಗಿದೆ. ನಿನ್ನೆ ಅಶೋಕ್ ಗೆಹ್ಲೋಟ್‌ರನ್ನು ಪ್ರಧಾನಿ ಮೋದಿ ಹೊಗಳಿದ್ದರೆ, ಮೋದಿಯನ್ನು ಅಶೋಕ್ ಗೆಹ್ಲೋಟ್ ಹೊಗಳಿದ್ದರು. ಇಂದು ಸಚಿನ್ ಪೈಲೆಟ್ ಮಹತ್ವದ ಹೇಳಿಕೆ ನೀಡಿದ್ದಾರೆ. ಸಿಎಂ ಅಶೋಕ್ ಗೆಹ್ಲೋಟ್ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದಾರೆ ಅನ್ನೋ ಹೇಳಿಕೆ ನೀಡಿದ್ದಾರೆ. ಇದರಿಂದ ರಾಜಸ್ಥಾನ ಕಾಂಗ್ರೆಸ್‌ನ ಬಣ ಜಗ್ಗಾಟ ಇದೀಗ ಮತ್ತೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ತೊರೆದೆ ಹಿರಿಯ ನಾಯಕ ಗುಲಾಮ್ ನಬಿ ಅಜಾದ್ ಹಾದಿಯಲ್ಲೇ ಅಶೋಕ್ ಗೆಹ್ಲೋಟ್ ಸಾಗುತ್ತಿದ್ದಾರೆ ಎಂದು ಸಚಿನ್ ಪೈಲೆಟ್ ಹೇಳಿದ್ದಾರೆ.

ರಾಜಸ್ಥಾನದ ಮಂಗರ ಧಾಮ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಸಿಎಂ ಗೆಹ್ಲೋಟ್ ಕೂಡ ಉಪಸ್ಥಿತರಿದ್ದರು. ಅಶೋಕ್ ಗೆಹ್ಲೋಟ್ ಹಿರಿಯ ಹಾಗೂ ಅನುಭವಿ ಸಿಎಂ ಎಂದು ಮೋದಿ ಹೊಗಳಿದ್ದರು. ಇತ್ತ ಗೆಹ್ಲೋಟ್ ತಮ್ಮ ಭಾಷಣದಲ್ಲಿ, ಮೋದಿ ವಿಶ್ವನಾಯಕನಾಗಿ ಮನ್ನಣೆ ಪಡೆದಿದ್ದಾರೆ. ಮೋದಿ ಜನಪ್ರಿಯ ನಾಯಕನಾಗಿ ಬೆಳೆದಿದ್ದಾರೆ ಎಂದು ಗೆಹ್ಲೋಟ್ ಹೇಳಿದ್ದರು. ಹೊಗಳಿಕೆ ಬೆನ್ನಲ್ಲೇ ಸಚಿನ್ ಪೈಲೆಟ್ ವಿರೋಧಿ ಬಣದ ನಾಯಕ ಗೆಹ್ಲೋಟ್ ವಿರುದ್ಧ ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕರಾಗಿದ್ದ ಗುಲಾಮ್ ನಬಿ ಆಜಾದ್ ಇದೇ ರೀತಿ ಮೋದಿ ಹೊಗಳಿದ್ದರು. ಬಳಿಕ ಕೆಲ ದಿನಗಳಲ್ಲೇ ಗುಲಾಮ್ ನಬಿ ಆಜಾದ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಗೆಹ್ಲೋಟ್ ಕೂಡ ಅದೇ ಹಾದಿಯಲ್ಲಿದ್ದಾರೆ ಎಂದು ಸಚಿನ್ ಪೈಲೆಟ್ ಹೇಳಿದ್ದಾರೆ.

 

ಮೋದಿ, ಗೆಹ್ಲೋಟ್‌ ಪರಸ್ಪರ ಹೊಗಳಿಕೆ: Modi ವಿದೇಶಕ್ಕೆ ಹೋದಲ್ಲೆಲ್ಲ ಗೌರವ ಲಭಿಸುತ್ತದೆ ಎಂದ ಗೆಹ್ಲೋಟ್‌

ಪ್ರಧಾನಿ ಮೋದಿ ಸಂಸತ್ತಿನಲ್ಲಿ ಗುಲಾಮ್ ನಬಿ ಆಜಾದ್ ಹೊಗಳಿದ್ದರು. ಬಳಿಕ ಅಜಾದ್ ಕೂಡ ಮೋದಿಯನ್ನು ಹೊಗಳಿದ್ದರು. ಇದೀಗ ಅಶೋಕ್ ಗೆಹ್ಲೋಟ್ ವಿಚಾರದಲ್ಲೂ ಹೀಗೆ ಆಗಿದೆ ಎಂದು ಪೈಲೆಟ್ ಹೇಳಿದ್ದಾರೆ. ರಾಜಸ್ಥಾನ ಕಾಂಗ್ರೆಸ್ ಈಗಾಗಲೇ ಒಂದು ಸುತ್ತಿನ ಹಗ್ಗಜಗ್ಗಾಟ ಮುಗಿಸಿದೆ. ಇದೀಗ ಎರಡನೇ ಸುತ್ತಿನ ಹೊಡೆದಾಟಕ್ಕೆ ವೇದಿಕೆ ಸಜ್ಜಾಗಿದೆ. ಹೈಕಮಾಂಡ್ ಆಪ್ತ ಎಂದೇ ಗುರಿತಿಸಿಕೊಂಡಿದ್ದ ಗೆಹ್ಲೋಟ್ ಕುರ್ಚಿ ಕೈತಪ್ಪಲಿದೆ ಅನ್ನೋ ಭೀತಿಯಿಂದ ಗಾಂಧಿ ಕುಟಂಬದ ವಿರುದ್ಧವೇ ಕತ್ತಿ ಮಸೆದಿದ್ದರು. ಇತ್ತ ಪೈಲೆಟ್ ಬಣ ಸಿಎಂ ಸ್ಥಾನಕ್ಕೆ ಹೋರಾಟ ನಡೆಸಿತ್ತು. ಸದ್ಯ ಇದೇ ಪರಿಸ್ಥಿತಿ ಮರುಕಳಿಸುವ ಸಾಧ್ಯತೆ ಕಾಣಿಸುತ್ತಿದೆ. 

ಮೋದಿ, ಗೆಹ್ಲೋಟ್‌ ಪರಸ್ಪರ ಹೊಗಳಿಕೆ
ರಾಜಸ್ಥಾನದ ಬನ್ಸ್‌ವಾರಾದಲ್ಲಿ ನಡೆದ ಸಮಾರಂಭವೊಂದರಲ್ಲಿ ಮೋದಿ ಜತೆ ವೇದಿಕೆ ಹಂಚಿಕೊಂಡ ಗೆಹ್ಲೋಟ್‌, ‘ಮೋದಿ ಅವರು ವಿದೇಶಕ್ಕೆ ಹೋದಲ್ಲೆಲ್ಲ ಭಾರಿ ಗೌರವ ಲಭಿಸುತ್ತದೆ. ಏಕೆಂದರೆ ಅವರು ಗಾಂಧಿ ನಾಡಿನಿಂದ ಬಂದ ಪ್ರಧಾನಿ ಎಂದು. ಪ್ರಜಾಸತ್ತೆಯ ಬೇರು ಎಲ್ಲಿ ಬಲವಾಗಿವೆಯೋ ಅಲ್ಲಿ ಇನ್ನೂ ಪ್ರಜಾಪ್ರಭುತ್ವ ಉಳಿದಿದೆ’ ಎಂದರು. ಬಳಿಕ ಮೋದಿ ಮಾತನಾಡಿ, ‘ಗೆಹ್ಲೋಟ್‌ಜಿ ಹಾಗೂ ನಾನು ಮುಖ್ಯಮಂತ್ರಿಗಳಾಗಿ ಒಟ್ಟಿಗೇ ಕೆಲಸ ಮಾಡಿದ್ದೆವು. ನಮ್ಮ ಮುಖ್ಯಮಂತ್ರಿಗಳಲ್ಲೇ ಅವರು ಅತಿ ಹಿರಿಯರಾಗಿದ್ದರು. ಈಗಲೂ ಕೂಡ ಅವರ ಅತಿ ಹಿರಿಯ ಹಾಗೂ ಅನುಭವಿ ಮುಖ್ಯಮಂತ್ರಿ’ ಎಂದು ಪ್ರಶಂಸಿಸಿದರು.

ಕಾಂಗ್ರೆಸ್‌ಗೆ ಬಿಸಿ ತುಪ್ಪವಾಗಿರುವ ಅಶೋಕ್ ಗೆಹ್ಲೋಟ್ ಹೊಗಳಿದ ಮೋದಿ!

Follow Us:
Download App:
  • android
  • ios