Asianet Suvarna News Asianet Suvarna News

ರಾಜಾಜಿನಗರ ಕ್ಷೇತ್ರದ ಟಿಕೆಟ್ ಭರವಸೆ ನೀಡಿ ಕೈ ಎತ್ತಿದ ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದ ಬಿ ಎಸ್ ಪುಟ್ಟರಾಜು!

ರಾಜಾಜಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಆಗಿ ಬಿ ಎಸ್ ಪುಟ್ಟರಾಜು ಕಣಕ್ಕಿಳಿಯುತ್ತಾರೆ ಎಂದು ರಾಜಕೀಯ ವಲಯದಲ್ಲಿ ಗುಲ್ಲೆದ್ದಿದೆ. ಟಿಕೆಟ್ ಭರವಸೆ ನೀಡಿ ಕೈ ಕೊಟ್ಟ ಕಾಂಗ್ರೆಸ್ ಈ ಮೂಲಕ ಬಿಸಿ ಮುಟ್ಟಿಸಲಿದ್ದಾರೆ.

Rajajinagara constituency congress ticket aspirants BS Puttaraju planning to contest independently gow
Author
First Published Mar 27, 2023, 5:59 PM IST

ಬೆಂಗಳೂರು (ಮಾ.27): ರಾಜಾಜಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಆಗಿ ಬಿ ಎಸ್ ಪುಟ್ಟರಾಜು ಕಣಕ್ಕಿಳಿಯುತ್ತಾರೆ ಎಂದು ರಾಜಕೀಯ ವಲಯದಲ್ಲಿ ಗುಲ್ಲೆದ್ದಿದೆ. ಟಿಕೆಟ್ ಭರವಸೆ ನೀಡಿ ಕೈ ಕೊಟ್ಟ ಕಾಂಗ್ರೆಸ್  ನಾಯಕರಿಗೆ ಬಿಸಿ ಮುಟ್ಟಿಸಲು ಪುಟ್ಟರಾಜು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ರಾಜಾಜಿನಗರ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಫರ್ಧಿಸಲು ಪುಟ್ಟರಾಜು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಪುಟ್ಟರಾಜು ಅಭಿಮಾನಿ ಬಳಗದಿಂದ ಸಭೆ ನಡೆಯಲಿದ್ದು, ಸಭೆ ಬಳಿಕ ಅಂತಿಮ ಪುಟ್ಟರಾಜು ತೀರ್ಮಾನ ಕೈಗೊಳ್ಳಲಿದ್ದಾರೆ.

ಕಳೆದು ಒಂದೂವರೆ ವರ್ಷದಿಂದ ತನ್ನ ಕ್ಷೇತ್ರದಲ್ಲಿ ಪುಟ್ಟರಾಜು ಕೆಲಸ ಆರಂಭಿಸಿದ್ದರು. ಕೆಪಿಸಿಸಿ ಅಧ್ಯಕ್ಷರ ಸೂಚನೆ ಮೇರೆಗೆ ಕ್ಷೇತ್ರದಲ್ಲೇ ಮನೆ ಕೂಡ  ಮಾಡಿ ಕೆಲಸ ಆರಂಭಿಸಿದ್ದರು. ಹೀಗಾಗಿ ಸಹಜವಾಗಿಯೇ ಕಾಂಗ್ರೆಸ್ ಟಿಕೆಟ್ ಸಿಗುವ ನಿರೀಕ್ಷೆಯಲ್ಲಿದ್ದ ಪುಟ್ಟರಾಜುಗೆ ನಿರಾಸೆಯಾಗಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ನಾಲ್ಕು ಬಾರಿ ಎಂಎಲ್ ಸಿ ಆಗಿರುವ ಜತೆಗೆ ಬಿಜೆಪಿಯಿಂದ ಬಂದ ಪುಟ್ಟಣ್ಣಗೆ  ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ ರಾಜಾಜಿನಗರ ಟಿಕೆಟ್ ಘೋಷಣೆ ಮಾಡಿದೆ.   ಈ  ಹಿನ್ನೆಲೆಯಲ್ಲಿ ಬಂಡಾಯವಾಗಿ ಸ್ಪರ್ಧೆ ಮಾಡಲು ರಾಜಾಜಿನಗರ ಟಿಕೆಟ್ ಆಕಾಂಕ್ಷಿಯಾದ್ದ ಪುಟ್ಟರಾಜು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಚಿಂತನೆ!
ಕುಣಿಗಲ್‌: ಕಾಂಗ್ರೆಸ್‌ ಪಕ್ಷವು ಸೋಲುವ ಅಭ್ಯರ್ಥಿ ಡಾ.ರಂಗನಾಥ್‌ಗೆ ಟಿಕೆಟ್‌ ಘೋಷಣೆ ಮಾಡಿರುವುದರಿಂದ ತಾವು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಮಾಜಿ ಶಾಸಕ ಹಾಗೂ ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಬಿ.ರಾಮಸ್ವಾಮಿಗೌಡ ತಿಳಿಸಿದರು.

ಉರಿಗೌಡ-ನಂಜೇಗೌಡ ವಿವಾದಕ್ಕೆ ಹೊಸ ತಿರುವು, ಟಿಪ್ಪು ಕೊಂದಿದ್ದು ಕೊಡವರು ಎಂದ ಎನ್.ಯು

ತಾಲೂಕಿನ ಕೆಂಕೆರೆ ಫಾಮ್‌ರ್‍ ಹೌಸಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಸೋಲುವ ಅಭ್ಯರ್ಥಿಯನ್ನು ಕಾಂಗ್ರೆಸ್‌ ಪಕ್ಷ ಅಭ್ಯರ್ಥಿಯನ್ನಾಗಿ ಮಾಡಿದ್ದು ಯಾವ ಮಾನದಂಡ ಆಧಾರದ ಮೇಲೆ ಪಕ್ಷದ ವರಿಷ್ಠರು ಟಿಕೆಟ್‌ ನೀಡಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಇರುವುದು ಕನಕಪುರ ಕಾಂಗ್ರೆಸ್ಸಾಗಿ ಪರಿವರ್ತನೆಗೊಂಡು ಅವರ ಸೋದರ ಸಂಸದ ಡಿ.ಕೆ.ಸುರೇಶ್‌ ಅವರ ಕೈವಾಡಗಳು ಜಾಸ್ತಿಯಾಗಿದೆ ಎಂದು ದೂರಿದರು .

Gubbi Srinivas Resignation: ಜೆಡಿಎಸ್ ಗೆ ಗುಬ್ಬಿ ಶ್ರೀನಿವಾಸ್ ವಿದಾಯ, ಕಾಂಗ್ರೆಸ್ ಸೇರ್ಪಡೆ!

ಜನರು ಚುನಾವಣೆಯಲ್ಲಿ ಮತಚಲಾಯಿಸಿ ಆಯ್ಕೆ ಮಾಡಬೇಕು, ಗೆಲ್ಲುವ ಅಭ್ಯರ್ಥಿಗಳಿಗೆ ಪಕ್ಷದ ಟಿಕೆಟ್‌ ನೀಡಲಾಗುವುದು ಎಂದು ವರಿಷ್ಠರು, ಹೈಕಮಾಂಡ್‌ ಸಹ ಹೇಳಿತ್ತು. ತಾಲೂಕಿನಲ್ಲಿ ನಡೆದ ಹಲವಾರು ಸರ್ವೆಗಳಲ್ಲಿ ಶಾಸಕರ ಹಿನ್ನಡೆ ಇದೆ, ಸೋಲು ಖಚಿತ ಎಂದು ವರದಿ ನೀಡಿದ್ದರೂ ಯಾವ ಮಾನದಂಡ ಉಪಯೋಗಿಸಿ ಕಾಂಗ್ರೆಸ್‌ ಪಕ್ಷದಿಂದ ಡಾ. ರಂಗನಾಥ್‌ಗೆ ಟಿಕೆಟ್‌ ನೀಡಿದ್ದಾರೆ ಎಂಬುದು ತಿಳಿಯುತ್ತಿಲ್ಲ.ನಾನು ಕಟ್ಟಾಕಾಂಗ್ರೆಸ್‌ ಪಕ್ಷದ ಕಾರ್ಯಕರ್ತನಾಗಿದ್ದು, ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷ ಟಿಕೆಟ್‌ ತಪ್ಪಿಸಿರುವುದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಂಡಾಯ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಇಂದಿರಾ ಗಾಂಧಿಯವರ ಭಾವಚಿತ್ರ ಹಾಕಿಕೊಂಡು ಚುನಾವಣೆಗೆ ಸ್ಪರ್ಧಿಸುವುದು ಸತ್ಯವಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀನಿವಾಸ್‌ ಗೌಡ, ಸಂತೋಷ್‌ ಉಪಸ್ಥಿತರಿದ್ದರು.

Follow Us:
Download App:
  • android
  • ios