Asianet Suvarna News Asianet Suvarna News

Gubbi Srinivas Resignation: ಜೆಡಿಎಸ್ ಗೆ ಗುಬ್ಬಿ ಶ್ರೀನಿವಾಸ್ ವಿದಾಯ, ಕಾಂಗ್ರೆಸ್ ಸೇರ್ಪಡೆ!

ತುಮಕೂರಿನ ಗುಬ್ಬಿ ಕ್ಷೇತ್ರದ ಮಾಜಿ ಸಚಿವ ಹಾಗೂ ಜೆಡಿಎಸ್ ಉಚ್ಛಾಟಿತ ಶಾಸಕ ಎಸ್ ಆರ್ ಶ್ರೀನಿವಾಸ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮತ್ತು ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. 

Gubbi MLA SR Srinivas leave from  JDS  and join to  congress gow
Author
First Published Mar 27, 2023, 11:38 AM IST

ಗುಬ್ಬಿ (ಮಾ.27): ತುಮಕೂರಿನ ಗುಬ್ಬಿ ಕ್ಷೇತ್ರದ ಮಾಜಿ ಸಚಿವ ಹಾಗೂ ಜೆಡಿಎಸ್ ಉಚ್ಛಾಟಿತ ಶಾಸಕ ಎಸ್ ಆರ್ ಶ್ರೀನಿವಾಸ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮತ್ತು ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. 12 ಗಂಟೆಗೆ  ವಿಧಾನಸೌಧದಲ್ಲಿ ಸ್ಪೀಕರ್ ಭೇಟಿಯಾಗಿ ಗುಬ್ಬಿ ಶ್ರೀನಿವಾಸ್ ರಾಜೀನಾಮೆ ಸಲ್ಲಿಸಲಿದ್ದಾರೆ.

ಈ ಬಗ್ಗೆ ಮಾತನಾಡಿದ ಶ್ರೀನಿವಾಸ್, ಇವತ್ತು ಕಾಗೇರಿ ಅವರಿಗೆ ರಾಜೀನಾಮೆ ಕೊಡುವುದಕ್ಕೆ ಹೋಗ್ತಾಯಿದ್ದೇವೆ. ನಮ್ಮ ತಾಲೂಕಿನಲ್ಲಿರುವ ಎಲ್ಲ ಮುಖಂಡರ ಜೊತೆ ಮಾತನಾಡಿ ಕಾಂಗ್ರೆಸ್ ಸೇರ್ಪಡೆಯಾಗುತ್ತೇನೆ. ಕಳೆದ 20 ವರ್ಷಗಳಿಂದ ನನಗೆ ಜನತಾದಳದಲ್ಲಿ ಕೆಲಸ ಮಾಡುವುದಕ್ಕೆ ಅವಕಾಶ ಕೊಟ್ಟಿದ್ದಕ್ಕೆ ದೇವೇಗೌಡರಿಗೆ, ಕುಮಾರಸ್ವಾಮಿ, ರೇವಣ್ಣ ಪಕ್ಷದ ಎಲ್ಲರಿಗೂ ಧನ್ಯವಾದಗಳು. 20 ವರ್ಷಗಳಿಂದ ಭಾವನಾತ್ಮಕ ಸಂಭದವನ್ನ ಇಟ್ಟುಕೊಂಡಿದ್ದೇನೆ.

ಶಿಷ್ಯ ಮಹೇಶ್‌ ಕುಮಟಳ್ಳಿಗೆ ಅಥಣಿ ಟಿಕೆಟ್ ಕೊಡಿಸಲು ಜಾರಕಿಹೊಳಿ ಶತಪ್ರಯತ್ನ!

ಎಲ್ಲ ಶಾಸಕರು ಇಲ್ಲಿಯೇ ಉಳಿದುಕೋ ಅಂತ ಒತ್ತಾಯ ಮಾಡ್ತಿದ್ದಾರೆ. ಪ್ರೀತಿಯಿಂದ ನಾವುಗಳು ಒಂದೇ ಕುಟುಂಬದಲ್ಲಿ ಇದ್ದೆವು. ಕುಮಾರಸ್ವಾಮಿ ಅಕ್ಟೋಬರ್ 21, 2021 ರಂದು ನನ್ನ ಜೊತೆ ಚನ್ನಾಗಿ, ಅಣ್ಣ ತಮ್ಮಂದಿರಾಗಿ ಇದ್ದರು. ಅಕ್ಟೋಬರ್ 21, 2021 ರಂದು ನನ್ನ ವಿರುದ್ದ ಬೇರೆ ಅಭ್ಯರ್ಥಿಯನ್ನ ಯಾಕೆ ಹಾಕಿದ್ರು ಗೊತ್ತಿಲ್ಲ?  ಅದರ ಬಳಿಕ ನನ್ನ ಕುಮಾರಸ್ವಾಮಿ ಅವರ ಬಾಂದವ್ಯ ಕೆಟ್ಟಿತು. ಆದರೂ ಕಳೆದ 20 ವರ್ಷಗಳ ಕಾಲ ನನಗೆ ಪಾರ್ಟಿಯಲ್ಲಿ ಕೆಲಸ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

ಮೀಸಲಾತಿ ಒಪ್ಪುವಂತೆ ಶ್ರೀಗಳಿಗೆ ಸರ್ಕಾರದ ಬೆದರಿಕೆ: ಡಿ.ಕೆ.ಶಿವಕುಮಾರ್‌

ದೇವೇಗೌಡರು ನನಗೆ ಮಗನ ತರ ನೋಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಸಮದ್ಯೆ ಇದ್ದರೂ ಸಂಘಟನೆಯ ವಿಚಾರದಲ್ಲಿ ರಾಜಿ ಮಾಡಿಸ್ತಿದ್ರು. ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ  31ಕ್ಕೆ ಸೇರ್ಪಡೆ ಯಾಗುತ್ತೇನೆ. ಕಾಂಗ್ರೆಸ್ ನ ಎಲ್ಲ ವರಿಷ್ಠರೊಂದಿಗೆ ಮಾತುಕತೆ ಮಾಡ್ತೇನೆ ಎಂದು ಗುಬ್ಬಿ ಶ್ರೀನಿವಾಸ್ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್‌ನಿಂದ ಟಿಕೆಟ್​ ಸಿಗುವುದು ಖಚಿತವಾಗಿರುವ ಹಿನ್ನೆಲೆಯಲ್ಲಿ ಗುಬ್ಬಿ ಕ್ಷೇತ್ರದಿಂದಲೇ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸುವ ಆಸೆಯನ್ನು ಕೂಡ ಹೇಳಿಕೊಂಡಿದ್ದಾರೆ.

Follow Us:
Download App:
  • android
  • ios