ಎಪ್​ಸ್ಟೀನ್​ ಫೈಲ್ಸ್​ ಜಗತ್ತಿನ ಶ್ರೀಮಂತರ ಕರಾಳ ಮುಖವನ್ನು ಬಯಲು ಮಾಡಿದೆ. ಇದೇ ಹೊತ್ತಲ್ಲಿ, ರಾಹುಲ್ ಗಾಂಧಿಯವರದ್ದು ಎನ್ನಲಾದ ವಿಡಿಯೋಮತ್ತು ಈ ಫೈಲ್​ನಲ್ಲಿ ಅವರ ಹೆಸರು ವೈರಲ್​ ಆಗ್ತಿದೆ. ಏನಿದರ ಅಸಲಿಯತ್ತು?

ಈಗ ಸದ್ಯ ಜಗತ್ತಿನಾದ್ಯಂತ ಬೆಚ್ಚಿಬೀಳಿಸೋ ವಿಷ್ಯ ಎಂದರೆ ಅದು ಎಪ್​ಸ್ಟೀನ್​ ಫೈಲ್ಸ್​ (Epstein Files). ಚಿಕ್ಕ ಮಕ್ಕಳನ್ನು ಲೈಂ*ಗಿಕತೆಗೆ ಬಳಸಿಕೊಳ್ಳುವುದು ಮಾತ್ರವಲ್ಲದೇ ಅವರನ್ನು ಕೊಂದು ಅವರ ದೇಹದ ಭಾಗಗಳನ್ನು ತಿನ್ನುವಂಥ ವಿಕೃತಿಯನ್ನೂ ಕೆಲವರು ಮಾಡಿರುವುದಾಗಿ ಜೆಫ್ರಿ ಎಪ್​ಸ್ಟೀನ್ ಫೈಲ್ಸ್​ನಲ್ಲಿ ಉಲ್ಲೇಖಿಸಲಾಗಿದೆ. ಜೀವನಕ್ಕೆ ಬೇಕಾದ ಎಲ್ಲಾ ಐಷಾರಾಮಿಗಳು ಸಿಕ್ಕ ಬಳಿಕವೂ, ಇರುವ ದುಡ್ಡನ್ನು ಏನು ಮಾಡಬೇಕು ಎಂದು ತಿಳಿಯದೇ ಗೊಂದಲಕ್ಕೆ ಒಳಗಾದಾಗ ಮನುಷ್ಯ ಈ ರೀತಿ ವಿಕೃತನಾಗುತ್ತಾನೆ ಎಂದು ಹೇಳುವ ಮಾತಿಗೆ ಸಾಕ್ಷಿಯಾಗಿ ನಿಂತಿದೆ ಈ ಫೈಲ್ಸ್​. ನಿಜಕ್ಕೂ ನಾವು ನೋಡುತ್ತಿರುವ ಜಗತ್ತೇ ಒಂದು, ಅದರೊಳಗೆ ಅವಿತಿರುವ ವಿಷಯವೇ ಇನ್ನೊಂದು ಎಂದು ಇದಾಗಲೇ ಹಲವು ಜ್ಞಾನಿಗಳು ಹೇಳಿರುವುದು ಉಂಟು. ಅಂಥದ್ದೇ ವಿಚಿತ್ರ, ಭಯಾನಕ, ಕ್ರೂರ ಎನ್ನಿಸುವ, ಮನುಷ್ಯನ ಕರಾಳತನವನ್ನು ತೆಗೆದಿಡುವ ಭಯಾನಕ ಸತ್ಯವನ್ನು ಇದರಲ್ಲಿ ಉಲ್ಲೇಖಿಸಲಾಗಿದೆ.

ಸುಳ್ಳನ್ನೇ ಸತ್ಯವೆಂದು ನಂಬಿ...

ಪ್ರಪಂಚದಲ್ಲಿ ದುಡ್ಡಿದ್ದರೆ ಏನು ಬೇಕಾದರೂ ಮಾಡಬೋದು ಅಂತಾರೆ.. ಆದರೆ ಆ ದುಡ್ಡು ಮತ್ತು ಅಧಿಕಾರದ ಮದ ನೆತ್ತಿಗೇರಿದರೆ ಮನುಷ್ಯ ಎಷ್ಟರ ಮಟ್ಟಿಗೆ ಕೆಳಜಾರಬಹುದು ಅನ್ನೋದಕ್ಕೆ ಇಲ್ಲೊಂದು ಬೆಚ್ಚಿಬೀಳಿಸೋ ಉದಾಹರಣೆಯಿದೆ. ಇದು ಕೇವಲ ಒಬ್ಬ ವ್ಯಕ್ತಿಯ ಕಥೆಯಲ್ಲ, ಇಡೀ ಪ್ರಪಂಚದ ದೊಡ್ಡ ದೊಡ್ಡ ವ್ಯಕ್ತಿಗಳ ಮುಖವಾಡ ಕಳಚೋ ಸ್ಫೋಟಕ ಪ್ರಕರಣ.. ಇದರಲ್ಲಿ ಭಾರತದ ಖ್ಯಾತನಾಮರ ಹೆಸರೂ ಕೇಳಿಬಂದಿದೆ. ಆದರೆ ಇದರ ನಡುವೆಯೇ ಈ ಕೃತಕ ಬುದ್ಧಿಮತ್ತೆಯ ಯುಗದಲ್ಲಿ ತಮಗೆ ಆಗದವರ ವಿಡಿಯೋ ಮಾಡಿ ಅವರನ್ನೂ ಕೂಡ ಈ ಘಟನೆಗೆ ಲಿಂಕ್​ ಮಾಡುವ ಹೇಯ ಕಾರ್ಯವೂ ಅದೇ ಇನ್ನೊಂದೆಡೆ ನಡೆಯುತ್ತಿದೆ. ಎಐ ಯುಗದಲ್ಲಿ ಸತ್ಯ ಯಾವುದು, ಸುಳ್ಳು ಯಾವುದು ಎಂದು ತಿಳಿಯದ ಜನರು ಅದನ್ನೇ ನಿಜ ಎಂದು ನಂಬಿಕೊಂಡು ಅತ್ಯಂತ ಕೆಟ್ಟರೀತಿಯಲ್ಲಿ ಕಮೆಂಟ್ಸ್​ ಮಾಡುವುದು ನಡೆಯುತ್ತಿದೆ. ಕೆಲವೊಮ್ಮೆ ಇದು ಸುಳ್ಳು ಎಂದು ತಿಳಿದಿದ್ದರೂ, ಅದನ್ನು ಬೇರೆಯವರು ನಂಬಲಿ ಎನ್ನುವ ಕಾರಣಕ್ಕೆ ಅವರ ಘನತೆಗೆ ಕುಂದು ತರುವ ಕೆಲಸವನ್ನೂ ಮಾಡುತ್ತಾ ವಿಕೃತಿ ಮೆರೆಯುತ್ತಿದ್ದಾರೆ.

ಜನರ ವಿಕೃತಿ

ಅದೇ ಇನ್ನೊಂದೆಡೆ, ಯಾವುದೋ ರಾಜಕಾರಣಿಯನ್ನೋ ಇಲ್ಲವೇ ವಿಐಪಿಯನ್ನೋ ಹೋಲುವ ವ್ಯಕ್ತಿಗಳ ವಿಡಿಯೋ ವೈರಲ್​ ಮಾಡಿಯೂ ವಿಕೃತಿ ಮೆರೆಯಲಾಗುತ್ತಿದೆ. ಇದೀಗ, ವಿಪಕ್ಷ ನಾಯಕ ರಾಹುಲ್​ ಗಾಂಧಿ ಅವರದ್ದು ಎನ್ನಲಾದ ವಿಡಿಯೋ ಒಂದನ್ನು ಶೇರ್​ ಮಾಡಲಾಗಿದೆ. ಇದರಲ್ಲಿ ಆ ವ್ಯಕ್ತಿ ಎಪ್​ಸ್ಟೀನ್​ ಜೊತೆಗೆ ಹೆಣ್ಣುಮಕ್ಕಳ ನಡುವೆ ಡಾನ್ಸ್​ ಮಾಡುತ್ತಾ, ಕಿಸ್​ ಮಾಡುವುದನ್ನು ನೋಡಬಹುದಾಗಿದೆ. ಮಾತ್ರವಲ್ಲದೇ ಎಪ್​ಸ್ಟೀನ್​ ಫೈಲ್ಸ್​ನಲ್ಲಿ ರಾಹುಲ್​ ಗಾಂಧಿ ಎಂದು ಹೆಸರು ಕೊಟ್ಟು ಸರ್ಚ್​ ಮಾಡಿದರೆ, ಅದರಲ್ಲಿ ರಾಹುಲ್ ಗಾಂಧಿಯ ಹೆಸರು ತೋರಿಸುವ ಫೈಲ್​ಗಳೂ ಇರುವುದನ್ನು ನೋಡಬಹುದು.

ಏನಿದು ಸತ್ಯಾಂಶ?

ಆದರೆ ಸತ್ಯಾಂಶವೇ ಬೇರೆ ಇದೆ. ಇದರ ಫ್ಯಾಕ್ಟ್​ ಚೆಕ್​ ಮಾಡಿದಾಗ, ಇದು ರಾಹುಲ್​ ಗಾಂಧಿ ಅವರ ವಿಡಿಯೋ ಅಲ್ಲ, ಬದಲಿಗೆ ಬೇರೆ ಯಾರದ್ದೋ ಎನ್ನುವುದು ಸಾಬೀತಾಗಿದೆ. ಅದೇ ರೀತಿ ಎಪ್​ಸ್ಟೀನ್​ ಫೈಲ್ಸ್​ನಲ್ಲಿ ನೀವು ಯಾವುದೇ ರಾಜಕಾರಣಿಗಳ ಹೆಸರನ್ನು ಟೈಪ್​ ಮಾಡಿ ಸರ್ಚ್​ ಮಾಡಿದರೂ ಅವರ ಹೆಸರು ಅದರಲ್ಲಿ ತೋರಿಸುತ್ತದೆ. ಅಂದ ಮಾತ್ರಕ್ಕೆ ಅವರಿಗೂ, ಈ ಭಯಾನಕ ಕೃತ್ಯಕ್ಕೂ ಲಿಂಕ್​ ಇದೆ ಎನ್ನುವುದು ಸರಿಯಲ್ಲ ಎನ್ನುವುದು ಫ್ಯಾಕ್ಟ್​ ಚೆಕ್​ನಿಂದ ಸಾಬೀತಾಗಿದೆ.

View post on Instagram

Scroll to load tweet…