ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ, ತಿಂಗಳಿಗೆ ₹3000: ಮಹಾರಾಷ್ಟ್ರದಲ್ಲೂ ಕಾಂಗ್ರೆಸ್‌ ಗ್ಯಾರಂಟಿ

ನ.20ರಂದು ಮಹಾರಾಷ್ಟ್ರದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ನಿಮಿತ್ತ ಕಾಂಗ್ರೆಸ್‌ ಪಕ್ಷ ಬುಧವಾರ ಕರ್ನಾಟಕ ಮಾದರಿಯಲ್ಲೇ ಪಂಚ ಗ್ಯಾರಂಟಿಗಳನ್ನು ಘೋಷಿಸಿದೆ. 

Rahul Gandhi Promises Rs 3000 per month and Free Travel to Women in Maharashtra gvd

ಮುಂಬೈ (ನ.07): ನ.20ರಂದು ಮಹಾರಾಷ್ಟ್ರದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ನಿಮಿತ್ತ ಕಾಂಗ್ರೆಸ್‌ ಪಕ್ಷ ಬುಧವಾರ ಕರ್ನಾಟಕ ಮಾದರಿಯಲ್ಲೇ ಪಂಚ ಗ್ಯಾರಂಟಿಗಳನ್ನು ಘೋಷಿಸಿದೆ. ಮುಂಬೈನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಈ ಘೋಷಣೆಗಳನ್ನು ಮಾಡಿದರು. ಇವುಗಳಲ್ಲಿ ಕರ್ನಾಟಕದ ರೀತಿಯಲ್ಲೇ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ, ಮಾಸಿಕ 3000 ರು. ಸಹಾಯಧನ ಸೇರಿವೆ.

5 ಗ್ಯಾರಂಟಿಗಳು
- ಮಹಿಳೆಯರಿಗೆ ರಾಜ್ಯಾದ್ಯಂತ ಉಚಿತ ಬಸ್‌ ಪ್ರಯಾಣ
- ರಾಜ್ಯದ ಎಲ್ಲ ಮಹಿಳೆಯರಿಗೆ ಮಾಸಿಕ 3000 ರು. ನೆರವು
- ₹3 ಲಕ್ಷದವರೆಗೆ ರೈತರ ಸಾಲ ಮನ್ನಾ. ಸಾಲ ಕಟ್ಟಿದರೆ 50,000 ರು. ಪ್ರೋತ್ಸಾಹಧನ
-ಎಲ್ಲರಿಗೂ 25 ಲಕ್ಷ ರು.ವರೆಗೆ ಆರೋಗ್ಯ ವಿಮೆ ಹಾಗೂ ಉಚಿತ ಔಷಧಿ ವಿತರಣೆ
- ನಿರುದ್ಯೋಗಿಗಳಿಗೆ ಸರ್ಕಾರದಿಂದ ಮಾಸಿಕ 4000 ರು. ನೆರವು

ಮೋದಿ ಬಗ್ಗೆ ಮಾತಾಡೋಕೆ ಬೋರ್‌: ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ಇದೀಗ ಮೋದಿ ಬಗ್ಗೆ ಮಾತಾಡೋಕೆ ಬೋರ್‌ ಆಗುತ್ತೆ’ ಎಂದು ಅಚ್ಚರಿಯ ಹೇಳಿಕೆ ನೀಡಿದ ಪ್ರಸಂಗ ಭಾನುವಾರ ಇಲ್ಲಿ ನಡೆದಿದೆ. ವಯನಾಡು ಲೋಕಸಭೆಯ ಉಪಚುನಾವಣೆ ಹಿನ್ನೆಲೆ ರಾಹುಲ್‌ ಮತ್ತು ಪ್ರಿಯಾಂಕಾ ಜಂಟಿ ಚುನಾವಣಾ ಪ್ರಚಾರ ನಡೆಸಿದರು. ಈ ವೇಳೆ ಮೊದಲಿಗೆ ಮಾತನಾಡಿದ ಪ್ರಿಯಾಂಕಾ, ‘ಜನಸಾಮಾನ್ಯ ಬದಲಾಗಿ ದೊಡ್ಡ ಉದ್ಯಮಿಗಳ ಹಿತಾಸಕ್ತಿ ಕಾಯುವ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಸಿದ್ದುಗೆ ತಾಕತ್ತಿದ್ದರೆ ಮುಡಾ ಪ್ರಕರಣ ಸಿಬಿಐ ತನಿಖೆಗೆ ವಹಿಸಲಿ: ಯಡಿಯೂರಪ್ಪ ಸವಾಲು

ಬಳಿಕ ಮಾತು ಆರಂಭಿಸಿದ ರಾಹುಲ್‌, ‘ಇಂದು ನನ್ನ ಮುಂದೆ 2 ಆಯ್ಕೆ ಇದೆ. ಒಂದು ರಾಜಕೀಯ ಭಾಷಣ ಮಾಡಬೇಕು, ಇನ್ನೊಂದು ನನ್ನ ಕುಟುಂಬದ ಬಗ್ಗೆ ಮಾತನಾಡಬೇಕು. ನಾನು 2ನೇ ಆಯ್ಕೆ ಮಾಡಿಕೊಳ್ಳುತ್ತೇನೆ. ಈಗಾಗಲೇ ಪ್ರಿಯಾಂಕಾ ಅವರು ಮೋದಿ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ನಾವೆಲ್ಲಾ ಅವರ ಬಗ್ಗೆ ಈಗ ಬೋರ್‌ ಆಗಿದ್ದೇವೆ. ಹೀಗಿರುವಾಗ ಅವರ ಬಗ್ಗೆ ಮತ್ತೊಮ್ಮೆ ಪ್ರಸ್ತಾಪ ಮಾಡುವುದು ಏಕೆ?’ ಎಂದು ಹೇಳಿ ಪ್ರಿಯಾಂಕಾ ರಾಜಕೀಯದ ಬಗ್ಗೆ ಮಾತನಾಡಿದರು.

Latest Videos
Follow Us:
Download App:
  • android
  • ios